NEWSಆರೋಗ್ಯದೇಶ-ವಿದೇಶ

ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ 33 ಲಕ್ಷಕ್ಕೂ ಹೆಚ್ಚು ಮಕ್ಕಳು

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಅವರಲ್ಲಿ ಅರ್ಧದಷ್ಟು ಮಕ್ಕಳು ʼತೀವ್ರʼ ವರ್ಗದಲ್ಲಿದ್ದಾರೆ ಎಂದು ಪಿಟಿಐ ಭಾನುವಾರ ವರದಿ ಮಾಡಿದೆ.

ಮಾಹಿತಿ ಹಕ್ಕು ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಏಜೆನ್ಸಿಯು ಈ ಡೇಟಾವನ್ನು ಸ್ವೀಕರಿಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಕಾರ, ಅಕ್ಟೋಬರ್ 14 ರ ಹೊತ್ತಿಗೆ, ದೇಶದಲ್ಲಿ 17,76,902 ತೀವ್ರ ಅಪೌಷ್ಟಿಕ ಮಕ್ಕಳು ಮತ್ತು 15,46,420 ಮಧ್ಯಮ ತೀವ್ರ ಅಪೌಷ್ಟಿಕ ಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶ್ವ ಸಂಸ್ಥೆಯು ಮಧ್ಯಮ ತೀವ್ರ ಅಪೌಷ್ಟಿಕತೆಯನ್ನು ಮಧ್ಯಮ ಕ್ಷೀಣಿಸುವಿಕ ಅಥವಾ 115 ಮಿಲಿಮೀಟರ್‌ಗಳಿಗಿಂತ ಹೆಚ್ಚು ಅಂದರೆ 125 ಮಿಲಿಮೀಟರ್‌ಗಿಂತ ಕಡಿಮೆ ತೋಳಿನ ಮಧ್ಯದ ಸುತ್ತಳತೆ ಎಂದು ವ್ಯಾಖ್ಯಾನಿಸುತ್ತದೆ.

ಅದೇರೀತಿ ತೀವ್ರ ಅಪೌಷ್ಟಿಕತೆಯನ್ನು ಎತ್ತರಕ್ಕೆ ಕಡಿಮೆ ತೂಕ, ಪೌಷ್ಟಿಕಾಂಶದ ಎಡಿಮಾ ಅಥವಾ 115 ಮಿಲಿಮೀಟರ್‌ಗಿಂತ ಕಡಿಮೆ ತೋಳಿನ ಮಧ್ಯದ ಸುತ್ತಳತೆ ಎಂದು ವ್ಯಾಖ್ಯಾನಿಸಿದೆ.

ವರದಿಯ ಪ್ರಕಾರ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಪೌಷ್ಟಿಕ ಮಕ್ಕಳ ಸಂಖ್ಯೆ 6,16,772 ಇದ್ದು, ನಂತರದ ಸ್ಥಾನದಲ್ಲಿ ಬಿಹಾರ (4,75,824) ಮತ್ತು ನಂತರ ಗುಜರಾತ್ (3,20,465). ಹೆಚ್ಚಿನ ಸಂಖ್ಯೆಯ ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಇತರ ರಾಜ್ಯಗಳು ಆಂಧ್ರ ಪ್ರದೇಶ (2,67,228), ಕರ್ನಾಟಕ (2,49,463), ಮತ್ತು ಉತ್ತರ ಪ್ರದೇಶ (1,86,640).

ನವೆಂಬರ್ 2020 ಮತ್ತು ಈ ವರ್ಷದ ಅಕ್ಟೋಬರ್ 14 ರ ನಡುವೆ ತೀವ್ರತರವಾದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆಯಲ್ಲಿ 91% ಏರಿಕೆಯಾಗಿದೆ. ನವೆಂಬರ್ 2020 ರಲ್ಲಿ ಅಂತಹ ಮಕ್ಕಳ ಸಂಖ್ಯೆ 9,27,606 ಆಗಿತ್ತು ಎಂದು ತಿಳಿಸಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು