ಬ್ರೆಜಿಲ್: ಲ್ಯಾಟಿನ್ ಅಮೆರಿಕದ ಬಹುದೊಡ್ಡ ಆರ್ಥಿಕ ಕೇಂದ್ರವಾಗಿರುವ ಬ್ರೆಜಿಲ್‌ನಲ್ಲಿ ಕೊರೊನಾ ಮಹಾಮಾರಿಗೆ ಕಳೆದ 24 ತಾಸಿನಲ್ಲಿ 881 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು 12,400 ಜನರು ವಿಶ್ವಮಹಾ ಮಾರಿಗೆ ಬಲಿಯಾದಂತ್ತಾಗಿದೆ.
ಎರಡು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸರವೇಗದಲ್ಲಿ ಹೆಚ್ಚಳವಾಗಿದೆ. ದೇಶದಲ್ಲಿ 1,77,589 ಸೋಂಕಿತ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಬ್ರೆಜಿಲ್ ಈಗ ಜರ್ಮನಿಯನ್ನು ಹಿಂದಿಕ್ಕಿದೆ. ಜರ್ಮನಿಯಲ್ಲಿ 1,70,508 ಪ್ರಕರಣ ಪತ್ತೆಯಾಗಿದ್ದು, ಬ್ರೆಜಿಲ್ ಇದೀಗ ಫ್ರಾನ್ಸ್ ಅಂಕಿ (1,78,225) ದ ಸಮೀಪಕ್ಕೆ ಬಂದಿದೆ ಎಂದು ಹೇಳಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಜಗತ್ತಿನಲ್ಲಿ ಅಮೆರಿಕ, ಬ್ರಿಟನ್, ಇಟಲಿ, ಪ್ರಾನ್ಸ್ ಮತ್ತು ಸ್ಪೇನ್ ಸೋಂಕಿಗೆ ತತ್ತರಿಸಿದ ಪ್ರಮುಖ ದೇಶಗಳಾಗಿವೆ. ಆ ಸಾಲಿನಲ್ಲಿ ಇಂದು ಬ್ರೆಜಿಲ್ 6ನೇ ದೇಶವಾಗಿ ಸೇರ್ಪಡೆಯಾಗಿದೆ. ಬ್ರೆಜಿಲ್ ನಲ್ಲಿ ಪ್ರಕರಣಗಳ ಸಂಖ್ಯೆ ಗಣನಿಯವಾಗಿ ಏರುತ್ತಿದ್ದು, ಅಲ್ಲಿನ ಜನರಲ್ಲಿ ಎದೆಬಡಿತವನ್ನಿ ಈ ಮಹಾಮಾರಿ ಹೆಚ್ಚಿಸಿದೆ ಎಂದು ವರದಿಯಾಗಿದೆ.
ಇನ್ನು ಇಲ್ಲಿ ವ್ಯಾಪಾರ, ವಹಿವಾಟನ್ನು ನಿಲ್ಲಿಸಿರುವುದು ಕೊರೊನಾ ಸೋಂಕಿಗಿಂತ ಅಪಾಯಕಾರಿಯಾಗಿದೆ ಎಂದು ಅಧ್ಯಕ್ಷ ಜೈರ್ ಬೋಲ್ಸೋನಾರೋ ಆತಂಕದ ಮಾತನಾಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail