NEWSಕ್ರೀಡೆದೇಶ-ವಿದೇಶ

ಗಾಬಾ : 32 ವರ್ಷಗಳ ಆಸಿಸ್ ಪಡೆಯ ಅಜೇಯ ಓಟಕ್ಕೆ ಬ್ರೇಕ್ ಹಾಕಿ ಟ್ರೋಫಿ ಬಾಚಿಕೊಂಡ ಭಾರತ

ವಿಜಯಪಥ ಸಮಗ್ರ ಸುದ್ದಿ

ಬ್ರಿಸ್ಬೇನ್: ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಅಜಿಂಕ್ಯ ರಹಾನೆ ನಾಯಕತ್ವದ ಯುವಪಡೆಯು ಟೆಸ್ಟ್‌ ಸರಣಿಯಲ್ಲಿ ಸೋಲಿಸಿ, ಬಾರ್ಡರ್‌–ಗಾವಸ್ಕರ್ ಟ್ರೋಫಿ ಯನ್ನು ತನ್ನದಾಗಿಸಿಕೊಂಡಿದೆ.

ಮಂಗಳವಾರ ಗಾಬಾ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಸರಣಿಯ ಕೊನೆಯ ಟೆಸ್ಟ್‌ನಲ್ಲಿ328 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 3 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು. ನಾಲ್ಕು ಪಂದ್ಯಗಳ ಸರಣಿಯನ್ನು 2–1ರಿಂದ ಗೆದ್ದು ಹಿಗ್ಗಿದೆ.

ಬ್ರಿಸ್ಬೇನ್ ನ ಗಾಬಾ ಕ್ರೀಡಾಂಗಣದಲ್ಲಿ ನಡೆದ ಈ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವ ಸಾಧಿಸುವ ಮೂಲಕ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡದ 32 ವರ್ಷಗಳ ಗರ್ವವನ್ನು ಭಂಗ ಮಾಡಿದೆ. ಸೋಲಿಲ್ಲದ ಸರ್ದಾರ ಎಂಬ ಗರ್ವದಲ್ಲೇ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾ ತಂಡವನ್ನು ಮಣ್ಣು ಮುಕ್ಕಿಸುವ ಮೂಲಕ ಭಾರತ ತಂಡ ಆಸಿಸ್ ಪಡೆಯ ಗರ್ವಭಂಗ ಮಾಡಿದೆ.

ಆಸ್ಟ್ರೇಲಿಯಾ ತಂಡದ ಅಬೇಧ್ಯ ಕೋಟೆ ಎಂದೇ ಪರಿಗಣಿತವಾಗಿದ್ದ ಗಾಬಾ ಕ್ರೀಡಾಂಗಣದಲ್ಲಿ ಕಳೆದ 32 ವರ್ಷಗಳಿಂದ ಜಗತ್ತಿನ ಯಾವುದೇ ತಂಡ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿರಲಿಲ್ಲ. ಗಾಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ ಒಟ್ಟು 62 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ಪೈಕಿ 40 ಪಂದ್ಯಗಳನ್ನು ಗೆದ್ದಿದೆ. ಕೇವಲ 8 ಪಂದ್ಯಗಳನ್ನು ಮಾತ್ರ ಸೋತಿದೆ. ಈ ಪೈಕಿ ನಾಲ್ಕು ಪಂದ್ಯಗಳನ್ನು ಇಂಗ್ಲೆಂಡ್ ವಿರುದ್ಧ ಸೋತಿದ್ದು, 3 ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಸೋತಿದೆ. ನ್ಯೂಜಿಲೆಂಡ್ ವಿರುದ್ಧ ಒಂದು ಪಂದ್ಯವನ್ನು ಸೋತಿತ್ತು. ಇದೇ ಕಾರಣಕ್ಕೆ ಇದನ್ನು ಆಸಿಸ್ ಪಡೆಯ ಅಬೇಧ್ಯ ಕೋಟೆ ಎಂದೇ ಕರೆಯಲಾಗುತ್ತಿತ್ತು.

ಇನ್ನು ಆಸ್ಟ್ರೇಲಿಯಾವನ್ನು ಅದರ ನೆಲದಲ್ಲಿಯೇ ಸತತ ಎರಡನೇ ಸಲ ಮಣಿಸಿದ್ದು, 2018–19ರಲ್ಲಿ ಭಾರತ ಇಲ್ಲಿ ಪ್ರಥಮ ಬಾರಿ ಸರಣಿ ಗೆದ್ದು ದಾಖಲೆ ನಿರ್ಮಿಸಿತ್ತು. ಆತಿಥೇಯ ತಂಡವು ಕಳೆದ 32 ವರ್ಷಗಳಿಂದ ಗಾಬಾ ಕ್ರೀಡಾಂಗಣದಲ್ಲಿ ಒಂದು ಪಂದ್ಯವನ್ನೂ ಸೋತಿರಲಿಲ್ಲ. ಈಗ ಭಾರತದ ಎದುರು ಮುಖಭಂಗ ಅನುಭವಿಸಿತು. ಅಚ್ಚರಿಯ ಸಂಗತಿ ಎಂದರೆ ಇಲ್ಲಿ ಭಾರತವು ಸಹ ಇದೆ ಮೊದಲ ಬಾರಿಗೆ ಇಲ್ಲಿ ಗೆದ್ದು ಸಂತಸ ಹಂಚಿಕೊಂಡಿರುವುದು.

ಪಂದ್ಯದ ಐದನೇ ದಿನ ಬೆಳಗ್ಗೆ ಅನುಭವಿ ರೋಹಿತ್ ಶರ್ಮಾ (7) ಔಟಾದಾಗ ಯುವಬ್ಯಾಟ್ಸ್‌ಮನ್ ಶುಭಮನ್ ಗಿಲ್ (91; 146ಎಸೆತ) ದಿಟ್ಟತನದಿಂದ ಆಡಿದರು. ತಮ್ಮ ವೃತ್ತಿಜೀವನದ ಮೂರನೇ ಟೆಸ್ಟ್‌ನಲ್ಲಿ ಆಡಿದ ಗಿಲ್, ಕೇವಲ ಒಂಬತ್ತು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಆದರೆ ಜಯದ ಕನಸಿಗೆ ಗಟ್ಟಿ ಅಡಿಪಾಯ ಹಾಕಿದರು. ಅದರ ಮೇಲೆ ಚೇತೆಶ್ವರ್ ಪೂಜಾರ (56; 211ಎಸೆತ) ’ಗೋಡೆ‘ ಕಟ್ಟಿದರೆ, ರಿಷಭ್ ಪಂತ್ (ಅಜೇಯ 89)ಗೆಲುವಿನ ಗೋಪುರ ನಿರ್ಮಿಸಿದರು. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ನವಪ್ರತಿಭೆಗಳು ಮಿಂಚಿದವು.

ಆಸ್ಟ್ರೇಲಿಯಾವನ್ನು ಅದರ ನೆಲದಲ್ಲಿಯೇ ಸತತ ಎರಡನೇ ಸಲ ಮಣಿಸಿದ ಸಂತಸದಲ್ಲಿ ಭಾರತ ತಂಡ ಸಂಭ್ರಮಿಸಿದ್ದು, ಕ್ರೀಡಾ ಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಾಗುವಂತೇಯೂ ಮಾಡಿದೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್