ನ್ಯೂಡೆಲ್ಲಿ: ವಾಯು ಮಾಲಿನ್ಯವು ದೆಹಲಿಯಲ್ಲಿ ಮಿತಿ ಮಿರುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ವಾಯುಮಾಲಿನ್ಯ ತಡೆಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಸುಪ್ರೀಂಕೋರ್ಟ್ ನೀಡಿದ 1 ದಿನ ಗಡುವಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ನೇತೃತ್ವದಲ್ಲಿ ನಡೆದ ದೆಹಲಿ ಸುತ್ತಮುತ್ತಲಿನ 4 ರಾಜ್ಯಗಳ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ದೆಹಲಿ ಸರ್ಕಾರ ಕೈಗೊಂಡಿದೆ.
ದೆಹಲಿ, ರಾಜಸ್ತಾನ, ಹರಿಯಾಣ, ಉತ್ತರಪ್ರದೇಶ ಹಾಗೂ ಪಂಜಾಬ್ ರಾಜ್ಯಗಳ ಸಭೆ ನಡೆದಿದೆ. ಬಳಿಕ ತಡರಾತ್ರಿ ವಾಯು ಗುಣಮಟ್ಟ ಆಯೋಗವು ಮುಂದಿನ ಕೆಲವು ದಿನಗಳ ಮಟ್ಟಿಗೆ ಅನ್ವಯ ಆಗುವಂತೆ ಕೆಲವು ಕ್ರಮ ಪ್ರಕಟಿಸಿದೆ.
ಕೈಗೊಂಡ ನಿರ್ಣಯಗಳು: ದೆಹಲಿ ಹಾಗೂ ಸುತ್ತಮುತ್ತಲಿನ ವಲಯದಲ್ಲಿ ಮಾಲಿನ್ಯಕಾರಕ ಇಂಧನ ಬಳಕೆ ಉದ್ದಿಮೆಗಳು ಕಾರ್ಯ ನಿರ್ವಹಿಸಕೂಡದು
11 ಉಷ್ಣವಿದ್ಯುತ್ ಸ್ಥಾವರಗಳ ಪೈಕಿ 5 ಮಾತ್ರ ನವೆಂಬರ್ 30ರವರೆಗೆ ಕೆಲಸ ಮಾಡಬೇಕು
ನವೆಂಬರ್ 31ರವರೆಗೆ ಅಗತ್ಯವಸ್ತು ಸಾಗಾಣೆ ಟ್ರಕ್ ಹೊರತುಪಡಿಸಿ ಉಳಿದ ಟ್ರಕ್‍ಗಳ ಪ್ರವೇಶ ನಿಷೇಧ
10 ವರ್ಷಕ್ಕಿಂತ ಹಳೆಯ ಪೆಡ್ರೋಲ್, 15 ವರ್ಷಕ್ಕಿಂತ ಹಳೆ ಡಿಸೇಲ್‍ವಾಹನ ನವೆಂಬರ್ 21ರವರೆಗೆ ಸಂಚಾರ ಮಾಡಬಾರದು
ನವೆಂಬರ್ 21ರವರೆಗೆ ವರ್ಕ್ ಫ್ರಂ ಹೋಮ್‍ಗೆ ಆದ್ಯತೆ. ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶವಿರುತ್ತದೆ
ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಇರುತ್ತದೆ