ಕೊಲ್ಕತ್ತಾ: ಭವಾನಿಪುರದ ಕ್ಷೇತ್ರದ ಉಪಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬರೆವಾಲ್ ವಿರುದ್ಧ ಮಮತಾ 58,389 ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಸೋಲು ಒಪ್ಪಿಕೊಂಡಿದ್ದಾರೆ. ಆದರೆ, ಮಮತಾ ಹೇಳಿದಂತೆ 1 ಲಕ್ಷ ಮತಗಳ ಅಂತರವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಪರಾವಭಗೊಂಡಿದ್ದರು. ಶಾಸಕ ಸ್ಥಾನ ಗೆಲ್ಲದೇ ಇದ್ದರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಭವಾನಿಪುರದಿಂದ ಸ್ಪರ್ಧಿಸಿದ್ದರು.
ಎಲ್ಲರಿಗೂ ಧನ್ಯವಾದಗಳು: ಭವಾನಿಪುರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ ಎಲ್ಲರಿಗೂ ಧನ್ಯವಾದಗಳು, ಸಹೋದರಿಯರು, ಸಹೋದರರು, ತಾಯಂದಿರು ಮತ್ತು ಭಾರತದ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದು ಹೇಳಿದರು.
ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಸಹೋದರಿಯರು, ಸಹೋದರರು, ತಾಯಂದಿರು ಎಲ್ಲ ಭಾರತೀಯರಿಗೂ ಧನ್ಯವಾದ.
2016 ರಲ್ಲಿ ನಾನು ಕೆಲವು ವಾರ್ಡ್‌ಗಳಲ್ಲಿ ಕಡಿಮೆ ಮತಗಳನ್ನು ಪಡೆದಿರುವುದನ್ನು ನೋಡಿದ್ದೆ. ಶೇ.46 ರಷ್ಟು ಬಂಗಾಳಿ ಅಲ್ಲದವರು ಮತ್ತು ಎಲ್ಲರೂ ನನಗೆ ಮತ ನೀಡಿದ್ದಾರೆ. ಭವಾನಿಪುರದ ಜನರು ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನನಗೆ ಸಂತೋಷವಾಗಿದೆ. ನಾನು ಭವಾನಿಪುರದ ಜನರಿಗೆ ಋಣಿ ಎಂದರು.
ಬಂಗಾಳದಲ್ಲಿ ಚುನಾವಣೆ ಆರಂಭವಾದಾಗಿನಿಂದ, ಕೇಂದ್ರ ಸರ್ಕಾರವು ನಮ್ಮನ್ನು (ಅಧಿಕಾರದಿಂದ) ತೆಗೆದುಹಾಕಲು ಸಂಚು ರೂಪಿಸಿತು. ನಾನು ಚುನಾವಣೆಗೆ ಸ್ಪರ್ಧಿಸದಂತೆ ನನ್ನ ಕಾಲುಗಳಿಗೆ ಗಾಯವಾಯಿತ, ನಮಗೆ ಮತ ನೀಡಿದ ಸಾರ್ವಜನಿಕರಿಗೆ ಮತ್ತು 6 ತಿಂಗಳೊಳಗೆ ಚುನಾವಣೆ ನಡೆಸಿದ ಚುನಾವಣಾ ಆಯೋಗಕ್ಕೆ ನಾನು ಕೃತಜ್ಞಳಾಗಿದ್ದೇನೆ ಎಂದು ಮಮತಾ ಹೇಳಿದರು.
ಸೋಲೊಪ್ಪಿಕೊಂಡ ಪ್ರಿಯಾಂಕಾ ಟಿಬರೆವಾಲ್
ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬರೆವಾಲ್ ಮಮತಾ ಬ್ಯಾನರ್ಜಿಗೆ ವಿರುದ್ಧ ಸೋಲು ಒಪ್ಪಿಕೊಂಡಿದ್ದಾರೆ. ನನ್ನ ಸೋಲನ್ನು ಸ್ವೀಕರಿಸುತ್ತೇನೆ ಮತ್ತು ನಾನು ನ್ಯಾಯಾಲಯಕ್ಕೆ ಹೋಗುವುದಿಲ್ಲ.
ಆದರೆ ಅವರು ಮಮತಾ ಬ್ಯಾನರ್ಜಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹೇಳಿದ್ದರು. ಅವರು ಸುಮಾರು 50,000 ಮತಗಳನ್ನು ಪಡೆದಿದ್ದಾರೆ. ನಾನು ಮಮತಾ ಬ್ಯಾನರ್ಜಿಯನ್ನು ಅಭಿನಂದಿಸುತ್ತೇನೆ ಎಂದರು.