Vijayapatha – ವಿಜಯಪಥ
Friday, November 1, 2024
NEWSದೇಶ-ವಿದೇಶನಮ್ಮರಾಜ್ಯ

MSRTC – ಇಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ : ಒಕ್ಕೂಟದ ಅಧ್ಯಕ್ಷ ಶಶಾಂಕ್‌ರಾವ್‌ ಘೋಷಣೆ

ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಿದ್ಧರಾದ ನೌಕರರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಸರ್ಕಾರದೊಂದಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (MSRTC)ವನ್ನು ವಿಲೀನ ಮಾಡಲು ವಿಳಂಬಧೋರಣೆ ಅನುಸರಿಸುತ್ತಿರುವ ವಿರುದ್ಧ ಸಾರಿಗೆ ನೌಕರರು ಇಂದಿನಿಂದ ( ಸೋಮವಾರ ನ.29) ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದು ಸಂಘರ್ಷ ಎಸ್‌ಟಿ ಕಾಮಗಾರಿ ಒಕ್ಕೂಟದ ಅಧ್ಯಕ್ಷ ಶಶಾಂಕ್‌ರಾವ್‌ ಘೋಷಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕಳೆದ 32ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರೂ ಸರ್ಕಾರ ಮತ್ತು ಸಾರಿಗೆ ಸಚಿವರು ನಮ್ಮ ಬೇಡಿಕೆಗಳಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಸತ್ತಂತೆ ಮಲಗಿರುವ ಸರ್ಕಾರ ಮತ್ತು ಸಂಬಂಧಿಸಿದ ಸಚಿವರು, ಅಧಿಕಾರಿಗಳನ್ನು ಬಡಿದೆಬ್ಬಿಸಲು ಸದ್ಯಕ್ಕೆ ನಮಗಿರುವುದು ಇದೊಂದೆ ಮಾರ್ಗ ಎಂಬ ತೀರ್ಮಾನಕ್ಕೆ ನಮ್ಮ ಎಲ್ಲ ನೌಕರರು ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದ್ದೇವೆ ಎಂದು ತೋರಿಸಿಕೊಳ್ಳಲು ಮಧ್ಯಂತರ ವೇತನ ಹೆಚ್ಚಳ ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದರಿಂದ ಈ ವರ್ಷದ ಸಂಘರ್ಷ ಮುಗಿಯಬಹುದು ಆದರೆ, ಇದು ಮುಂದಿನ ದಿನಗಳಲ್ಲಿ ಮತ್ತೆ ನೌಕರರಿಗೆ ಕುಣಿಕೆಯಾಗಿಯೇ ಪರಿಣಮಿಸಲಿದೆ. ಹೀಗಾಗಿ ನಮಗೆ ಶಾಶ್ವತ ಪರಿಹಾರಬೇಕು ಎಂದು ಪಟ್ಟು ಹಿಡಿದು ಇಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನೌಕರರಿಗೆ ಸರ್ಕಾರ ಶಾಶ್ವತ ಪರಿಹಾರ ಘೋಷಣೆ ಮಾಡುವವರೆಗೂ ನಾವು ನಮ್ಮ ಜೀವವನ್ನು ಬಲಿಕೊಡುವುದಕ್ಕೂ ಸಿದ್ಧರಿದ್ದೇವೆ, ನಮ್ಮ ಪ್ರಾಣ ಬಲಿತೆಗೆದುಕೊಂಡ ಮೇಲಾದರೂ ಸರ್ಕಾರ ಎಚ್ಚೆತ್ತುಕೊಂಡು ನೌಕರರಿಗೆ ಒಳ್ಳೆಯದನ್ನು ಮಾಡಲಿ. ಆದರೆ ನಾವು ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಮಾತೆ ಇಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ರಸ್ತೆಗಿಳಿದಿವೆ 1,108 ಬಸ್‌ಗಳು: ಹೀಗಾಗಿ ಇಂದಿನಿಂದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಹೋರಾಟ ಮತ್ತೊಂದು ಸ್ವರೂಪವನ್ನು ತಳೆದಿದ್ದು ಇನ್ನಷ್ಟು ತೀವ್ರಗೊಳ್ಳುತ್ತಿದೆ. ಇದರ ನಡುವೆಯೂ ನಿಮಗದ ಅಧಿಕಾರಿಗಳು ಹೇಳುತ್ತಿರುವ ಪ್ರಕಾರ ಸುಮಾರು 20 ಪ್ರತಿಶತ ಸಿಬ್ಬಂದಿ ಭಾನುವಾರ ಕರ್ತವ್ಯಕ್ಕೆ ವರದಿ ಮಾಡಿದ್ದಾರೆ. ರಾಜ್ಯದ 250 ಬಸ್ ಡಿಪೋಗಳಲ್ಲಿ 50 ಡಿಪೋಗಳಲ್ಲಿ ಭಾಗಶಃ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದು, 1,108 ಬಸ್‌ಗಳು ರಸ್ತೆಗಿಳಿದಿವೆ.

ಇನ್ನು 92,266 ಉದ್ಯೋಗಿಗಳಲ್ಲಿ, 18,375 ಸಿಬ್ಬಂದಿ ಭಾನುವಾರ ಕೆಲಸ ಮಾಡಲು ವರದಿ ಮಾಡಿದ್ದಾರೆ. ಈ ಮೂಲಕ ರಾಜ್ಯ ಸಾರಿಗೆ ಸಚಿವ ಅನಿಲ್ ಪರಬ್ ಅವರು ಮುಷ್ಕರವನ್ನು ಕೊನೆಗೊಳಿಸುವ ಸಲುವಾಗಿ ಸಿಬ್ಬಂದಿಗಳ ಮೂಲ ವೇತನದ ಮೇಲೆ ಶೇಕಡಾ 41 ರವರೆಗೆ ಹೆಚ್ಚಳವನ್ನು ಘೋಷಿಸಿದ ಬಳಿಕ ಇಂದು ಗರಿಷ್ಠಮಟ್ಟದಲ್ಲಿ ನೌಕರರು ಸೇವೆಗೆ ಮರಳಿದಂತಾಗಿದೆ ಎಂಧು ಅಧಿಕಾರಿಗಳು ತಿಳಿಸಿದ್ದಾರೆ.

50 ಎಫ್‌ಐಆರ್‌ಗಳು ದಾಖಲು: ಒಂದು ತಿಂಗಳ ಮುಷ್ಕರದಲ್ಲಿ ಇದುವರೆಗೆ ನಿಗಮವು 50 ಎಫ್‌ಐಆರ್‌ಗಳನ್ನು ದಾಖಲಿಸಿದೆ ಮತ್ತು 31 ಪ್ರಕರಣಗಳು ಬಸ್‌ಗಳ ಧ್ವಂಸಕ್ಕೆ ಸಂಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಂಎಸ್‌ಆರ್‌ಟಿಸಿಯು ಹೆಚ್ಚು ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಮರಳಲು ಉದ್ದೇಶಿಸಿದೆ ಎಂದು ಹೇಳುತ್ತಿದ್ದರೂ, ಸರ್ಕಾರವು ಮುಷ್ಕರವನ್ನು ಮುರಿಯಲು ಒತ್ತಡದ ತಂತ್ರಗಳನ್ನು ಬಳಸುತ್ತಿದೆ ಮತ್ತು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಅವರ ಉದ್ಯೋಗವನ್ನು ಕಿತ್ತುಕೊಳ್ಳಲು ವಾಮಮಾರ್ಗ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

ಮತ್ತೆ ಭಾನುವಾರದವರೆಗೆ ನಿಗಮವು 6,497 ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು, 1,525 ದಿನಗೂಲಿ ಕಾರ್ಮಿಕರನ್ನು ವಜಾಗೊಳಿಸಿದೆ. ಇದರಿಂದ ಇನ್ನಷ್ಟು ಕೆರಳಿರುವ ಮುಷ್ಕರ ನಿರತ ನೌಕರರು ಮಾಡು ಇಲ್ಲವೆ ಮಡಿ ಎಂಬ ಹೋರಾಟಕ್ಕೆ ಸಿದ್ಧರಾಗಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ