ಮುಂಬೈ: ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವು ಶುಕ್ರವಾರವೂ ಏರಿಕೆ ಕಂಡಿದೆ .
ದೆಹಲಿಯಲ್ಲಿ ಪೆಟ್ರೋ ಲ್ ಮತ್ತು ಡೀಸೆಲ್ ತಲಾ 35 ಪೈಸೆ ಹೆಚ್ಚಳವಾಗಿದ್ದು , ಪ್ರತಿ ಲೀಟರ್‌ಗೆ ಕ್ರಮವಾಗಿ 108.64 ರೂ. ಮತ್ತು 97.37 ರೂ. ಮುಟ್ಟಿದೆ.
ಮುಂಬೈನಲ್ಲಿ ಪೆಟ್ರೋಲ್ 112.44 ರೂ. ಮತ್ತು ಡೀಸೆಲ್ 103.26 ರೂ.ಗೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ 107.12 ರೂ., ಡೀಸೆಲ್ 98 ರೂ.ಗೆ ತಲುಪಿದೆ.
ಚೆನ್ನೈನಲ್ಲಿ ಪೆಟ್ರೋಲ್ 103.26 ರೂ. ಮತ್ತು ಡೀಸೆಲ್ 99.68 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 112.39 ರೂ. ಮತ್ತು ಡೀಸೆಲ್ 103.31 ರೂ.ಗಳಷ್ಟಾಗಿದೆ.
ಇನ್ನು ನಿತ್ಯ ಏರಿಕೆಯತ್ತ ಸಾಗುತ್ತಿರುವ ತೈಲ ದರದಿಂದ ದೇಶದ ಸಾಮಾನ್ಯರು ಜೀವನ ಸಾಗಿಸುವುದು ದುಸ್ತರವಾಗುತ್ತಿದೆ. ಆದರೂ ಕೇಂದ್ರ ಸರ್ಕಾರ ತೈಲ ದರ ಏರಿಕೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ.
ಇತ್ತ ವಿಪಕ್ಷಗಳು ಈ ಬಗ್ಗೆ ಸಮರ್ಥವಾಗಿ ಖಂಡಿಸುವುದನ್ನು ಬಿಟ್ಟು ಬಾಲಂಗೋಸಿತರ ನಡೆದುಕೊಳ್ಳುತ್ತಿವೆ. ಇದರಿಂದ ದೇಶದ ಪ್ರತಿಯೊಬ್ಬರೂ ಈ ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟಾದರೂ ದೇಶದ ಜನರ ಹಿತ ಕಾಯದ ಸರ್ಕಾರದ ಪ್ರತಿನಿಧಿಗಳು ಜನರನ್ನು ನಿತ್ಯ ಯಾತನೆಯಲ್ಲೇ ಜೀವನ ಡೆಸುವಂತ ಮಾಡುತ್ತಿದ್ದಾರೆ. ಇದು ದೇಶದ ಭವಿಷ್ಯಕ್ಕೂ ಮಾರಕವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.