NEWSದೇಶ-ವಿದೇಶರಾಜಕೀಯ

ಸಾಲಮಾಡಿ ತುಪ್ಪ ತಿನ್ನುವ ಚಾಳಿ ಪ್ರಧಾನಿ ಮೋದಿಗೆ : ಕುಟುಕಿದ ಮಲ್ಲಿಕಾರ್ಜುನ ಖರ್ಗೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಲಮಾಡಿ ತುಪ್ಪ ತಿನ್ನು ವ ಚಾಳಿ ಇದೆ. ಅದಕ್ಕಾಗಿಯೇ ಇರುವ ಎಲ್ಲ ಸರ್ಕಾರಿ ಸ್ವಾ ಮ್ಯ ದ ಸಂಸ್ಥೆ ಗಳನ್ನು ಮಾರಾಟಮಾಡುತ್ತಿದ್ದಾರೆ’ ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಬರುವ ತೆರಿಗೆ ಹಣ, ಜಿಎಸ್ಟಿ ತೆರಿಗೆ ಸಾಕಷ್ಟು ಬಂದರೂ ಸರ್ಕಾರ ಆಸ್ತಿ ಮಾರಾಟಮಾಡಲು ಮುಂದಾಗಿದೆ. ಸರ್ಕಾರಿ ಸ್ವಾ ಮ್ಯ ದ ಸಂಸ್ಥೆ ಖಾಸಗಿಯವರಿಗೆ ಕೊಟ್ಟ ರೆ ತಾವು ಭರವಸೆ ನೀಡಿದ್ದ ಉದ್ಯೋಗ ಸೃಷ್ಟಿ ಹೇಗೆಮಾಡುತ್ತಾರೆ ಎಂದರು.

ರೈತ ವಿರೋಧಿ ಕಾನೂನು ಜಾರಿ ಕುರಿತು, ಜನರ ವೈಯಕ್ತಿಕ ಸ್ವಾ ತಂತ್ರ್ಯ ಹರಣಮಾಡುವ ಪೆಗಾಸಸ್ ಗೂಢಚರ್ಯೆ ಕುರಿತು ಚರ್ಚಿಸಲುಮುಂದಾದರೆ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಚರ್ಚೆಗೇ ಬರುವುದಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿಯಾದವರುಲೋಕಸಭೆ, ರಾಜ್ಯ ಸಭೆಯ ಕಲಾಪಗಳಿಗೆ ಬರಬೇಕು. ಆದರೆಮೋದಿ ಅವರು ತಮಗೂ ರಾಜ್ಯ ಸಭೆಗೂ ಸಂಬಂಧವಿಲ್ಲದಂತೆ ಇದ್ದಾರೆ. ಲೋಕಸಭೆಗೆ ಬಂದರೂ ಕೆಲವೇಹೊತ್ತು ಇದ್ದು ಅಲ್ಲಿಂದ ಹೊರನಡೆಯುತ್ತಾರೆ. ಹೀಗಾದರೆ ಹಲವು ವಿಚಾರಗಳ ಬಗ್ಗೆ ಯಾರೊಂದಿಗೆ ಚರ್ಚೆ ನಡೆಸಬೇಕು ಎಂದು ಪ್ರ ಶ್ನಿಸಿದರು.

ಸರ್ಕಾರಿ ಸ್ವಾಮ್ಯದ ಉದ್ಯ ಮಗಳನ್ನು ಮಾರಾಟಮಾಡಿ ₹ 6 ಲಕ್ಷ ಕೋಟಿ ವರಮಾನ ಗಳಿಸಲುಮೋದಿ ಸರ್ಕಾರ ಮುಂದಾಗಿದೆ. ಎಚ್ಎಎಲ್, ಬಿಎಚ್ಇಎಲ್, ಏರ್ ಇಂಡಿಯಾ, ಬಿಎಸ್ಎನ್ಎಲ್ , ಎನ್ಟಿಪಿಸಿಗಳನ್ನು ಮಾರಾಟ ಇಲ್ಲವೇ ಸುದೀರ್ಘ ಅವಧಿಗೆ ನಿರ್ವಹಿಸಲು ಗುತ್ತಿಗೆ ನೀಡುತ್ತಿದ್ದಾರೆ. ಮತ್ತೆ 70 ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ.

ಈ 70 ವರ್ಷಗಳಲ್ಲಿ ಅವರದೇ ಪಕ್ಷದ ಅಟಲ್ ಬಿಹಾರಿ ವಾಜಪೇಯಿ ಆರು ವರ್ಷ ಆಡಳಿತ ನಡೆಸಿದ್ದರು. ಅಲ್ಲದೇ, ಐ.ಕೆ.ಗುಜ್ರಾಲ್, ಚರಣಸಿಂಗ್, ಎಚ್.ಡಿ.ದೇವೇಗೌಡ ಅವರು ಆಡಳಿತ ನಡೆಸಿದ್ದರು. ಕಾಂಗ್ರೆಸ್ 55 ವರ್ಷ ಅಧಿಕಾರದಲ್ಲಿದೆ. ಈ ಸಂದರ್ಭದಲ್ಲಿ ದೇಶಕ್ಕೆ ಆಸ್ತಿ ಗಳನ್ನು ಮಾಡಿಕೊಟ್ಟಿದೆಯೇ ಹೊರತು ಮೋದಿ ಅವರಂತೆ ಇದ್ದುದನ್ನೆಲ್ಲ ಮಾರಾಟಮಾಡಿಲ್ಲ ಎಂದು ಖರ್ಗೆ ಪ್ರತಿಪಾದಿಸಿದರು.

ದೇಶದ ಸರ್ಕಾರಿ ಸ್ವಾ ಮ್ಯ ದ ಉದ್ಯ ಮಗಳನ್ನು ತಮಗೆ ಬೇಕಾದ ಆಯ್ದ ಉದ್ಯ ಮಿಗಳಿಗೆ ಹಸ್ತಾಂ ತರಿಸುತ್ತಿದ್ದಾರೆ. ಹಾಗೆ ಸರ್ಕಾರಿ ಆಸ್ತಿ ಗಳನ್ನು ಪಡೆದವರು ಚುನಾವಣೆಯಲ್ಲಿ ಬಿಜೆಪಿಗೆ ಹಣಕಾಸು ಸಹಾಯಮಾಡುತ್ತಾರೆ. ಒಟ್ಟಾರೆಮೋದಿ ಅವರ ದುರಾಡಳಿತದಿಂದಾಗಿ ಜನರುಮುಗಿಯದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಧ್ಯ ಪ್ರದೇಶದಲ್ಲಿ ಪೆಟ್ರೋ ಲ್ ಬೆಲೆ ₹ 113 ಆಗಿದೆ. ಡೀಸೆಲ್ ಬೆಲೆ ₹ 100ರ ಗಡಿ ಸಮೀಪಿಸಿದೆ. ಅಡುಗೆ ಅನಿಲ ಬೆಲೆ ₹ 900 ಆಗಿದೆ. ಕಾಂಗ್ರೆಸ್ ಅವಧಿಯಲ್ಲಿ ಅಂತರರಾಷ್ಟ್ರೀ ಯ ಮಟ್ಟ ದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದರೂ ಜನರ ಮೇಲೆ ಹೆಚ್ಚು ಹೊರೆಯಾಗದಂತೆ ಸಬ್ಸಿ ಡಿ ನೀಡಲಾಗುತ್ತಿತ್ತು .ಮೋದಿ ಸರ್ಕಾರ ಅದನ್ನೂ ಕಿತ್ತು ಹಾಕಿದೆ ಎಂದರು.

ಸಹಕಾರ ವಲಯ ಕೈವಶ: ಗೃಹ ಸಚಿವ ಅಮಿತ್ ಶಾ ಅವರು ಸಹಕಾರ ಕ್ಷೇ ತ್ರ ದಮೇಲೆ ಕಣ್ಣು ಹಾಕಿದ್ದು , ಸಹಕಾರ ಇಲಾಖೆಯನ್ನು ಗೃಹಖಾತೆಯೊಂದಿಗೆ ಇಟ್ಟು ಕೊಂಡಿದ್ದಾರೆ. ಆಮೂಲಕ ಸಹಕಾರಿ ಬ್ಯಾಂ ಕುಗಳು, ಸಹಕಾರ ಸಂಘಗಳನ್ನು ತಮ್ಮ ನಿಯಂತ್ರ ಣದಲ್ಲಿಡಲುಮುಂದಾಗಿದ್ದಾರೆ ಎಂದರು.

ಹಣಕಾಸು ಇಲಾಖೆಯ ಅಧೀನದಲ್ಲಿದ್ದ ಜಾರಿ ನಿರ್ದೇಶನಾಲಯವನ್ನು ಅಮಿತ್ ಶಾ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಗೃಹ ಸಚಿವ ಶಾ ಅವರಿಗೆ ಹಣಕಾಸು ಇಲಾಖೆಗೆ ಸಂಬಂಧಿಸಿದ ಇ.ಡಿ. ಬಗ್ಗೆ ಏಕೆ ಆಸಕ್ತಿ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಒಟ್ಟಾರೆ, ಮೋದಿ ಅಮಿತ್ ಶಾ ಅವರು ಇಡೀ ದೇಶದ ಆಡಳಿತವನ್ನು ತಾವಿಬ್ಬ ರೇ ನಡೆಸಬೇಕು ಎಂದು ಹುನ್ನಾರ ನಡೆಸಿದ್ದಾರೆ. ಜನರು ಈ ಕುರಿತು ಜಾಗೃತರಾಗಬೇಕು ಎಂದರು.

ಶಾಸಕಿ ಕನೀಜ್ ಫಾತಿಮಾ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ಬಿ.ಆರ್. ಪಾಟೀಲ, ವಿಧಾನಪರಿಷತ್ಮಾಜಿ ಸದಸ್ಯ ರಾದ ಅಲ್ಲಮಪ್ರಭು ಪಾಟೀಲ, ತಿಪ್ಪ ಣ್ಣ ಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯ ಕ್ಷ ಜಗದೇವ ಗುತ್ತೇ ದಾರ ಇದ್ದರು.

ರಾಹುಲ್ ಧೈರ್ಯದ ಕೆಲಸ: ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಪಂಜಾಬ್ನಲ್ಲಿ ದಲಿತಮುಖ್ಯ ಮಂತ್ರಿ ಗೆ ಅವಕಾಶ ನೀಡುವಮೂಲಕ ಭಾರಿ ಧೈರ್ಯದ ಕೆಲಸಮಾಡಿದ್ದಾರೆ ಎಂದು ಖರ್ಗೆ ಶ್ಲಾಘಿಸಿದರು.

ಪರಮೇಶ್ವರ್ ಅವರನ್ನೇ ಕೇಳಿ: ರಾಜ್ಯ ದಲ್ಲಿ ಕಾಂಗ್ರೆಸ್ ದಲಿತಮುಖ್ಯ ಮಂತ್ರಿ ಆಯ್ಕೆ ಮಾಡಬೇಕು ಎಂದುಮಾಜಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆಯ ಕುರಿತ ಪ್ರ ಶ್ನೆ ಗೆ ಪ್ರ ತಿಕ್ರಿಯಿಸಿದ ಖರ್ಗೆ ಅವರು, ಈ ವಿಚಾರದ ಕುರಿತು ಪರಮೇಶ್ವರ್ ಅವರನ್ನೇ ಕೇಳಿ ಎಂದರು.

ಚುನಾವಣೆಮುಗಿದು ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಶಾಸಕರು ತಮ್ಮ ಮುಖ್ಯ ಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ