ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಮಾಜಿ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಕೆ.ಕೆ.ಅಗರವಾಲ್ (61) ಕೋವಿಡ್‌ನಿಂದ ಸೋಮವಾರ ನಿಧನರಾದರು.
ಕೆಲ ದಿನಗಳ ಹಿಂದೆ ಕೋವಿಡ್‌ನಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ ಸಹಾಯದಲ್ಲಿದ್ದ ಅಗರ್‌ವಾಲ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಗರ್‌ವಾಲ್ ಕೋವಿಡ್-19 ಲಸಿಕೆ ಎರಡು ಡೋಸ್ ಪಡೆದಿದ್ದರು. ಖ್ಯಾತ ವೈದ್ಯರಾಗಿದ್ದ ಅಗರ್‌ವಾಲ್ ಅವರು ಜನತೆಯಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲೂ ಜನರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಶ್ರಮವಹಿಸಿದ್ದರು. ವಿಡಿಯೋ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ 100 ಮಿಲಿಯನ್‌ಗೂ ಹೆಚ್ಚು ಮಂದಿಯಲ್ಲಿ ಕೋವಿಡ್ ಜಾಗೃತಿ ಉಂಟುಮಾಡಿದ್ದರು. ಅಗಣಿತ ಮಂದಿ ಜೀವವನ್ನೂ ಉಳಿಸಿದ್ದರು.
ಇಂಧ ವೈದ್ಯರು ಈಗ ಕೊರೊನಾಗೆ ಬಲಿಯಾಗಿರುವುದು ಕೋವಿಡ್ ಎನ್ನುವ ಮಹಾಮಾರಿ ಎಷ್ಟು ಅಪಾಯಕಾರಿ ಎಂಬುದನ್ನು ಎಚ್ಚರಿಸಿದೆ.