ನ್ಯೂಡೆಲ್ಲಿ: ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಲು ಕೇಂದ್ರ ಸರ್ಕಾರದಿಂದ ಎಂಟು ಅಂಶಗಳ ಆರ್ಥಿಕ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಂಟು ಪ್ರಮುಖ ನಿರ್ಧಾರಗಳ ವಿವರಣೆ ನೀಡಿದ್ದಾರೆ.
ದೆಲ್ಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಚಿತ ಸಾಲ ಯೋಜನೆಯಡಿ ಕೋವಿಡ್ -19 ಪೀಡಿತ ವಲಯಗಳಿಗೆ ಪ್ರಮುಖ ಪರಿಹಾರವಾಗಿ 1.1 ಲಕ್ಷ ಕೋಟಿ ರೂ. ಮತ್ತು ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರೂ. ಸಾಲ ಖಾತರಿ ಯೋಜನೆ ಮತ್ತು ಇತರ ಕ್ಷೇತ್ರಗಳಿಗೆ ಹೆಚ್ಚುವರಿ 60,000 ಕೋಟಿ ರೂ. ನಿಡುವುದು ಎಂದು ತಿಳಿಸಿದರು.
ನೂರು ಕೋಟಿ ರೂ. ಸಾಲವನ್ನು ಆರೋಗ್ಯ ಕ್ಷೇತ್ರಕ್ಕೆ ಶೇ. 7.95ರಷ್ಟು ಬಡ್ಡಿಯಲ್ಲಿ ನೀಡಲಾಗುವುದು. ಕೋವಿಡ್ ಸೋಂಕಿನ ಮೂರನೇ ಅಲೆಯನ್ನು ನಿಯಂತ್ರಿಸಲು ಇದು ನೆರವಾಗುತ್ತದೆ ಎಂದು ತಿಳಿಸಿದರು.
ತುರ್ತು ಸಾಲ ಯೋಜನೆಯಡಿ ಎಂಎಸ್‌ಎಂಇ ಕ್ಷೇತ್ರಕ್ಕೆ ಬಡ್ಡಿ ರಹಿತ ಸಾಲ ನೀಡುವುದಾಗಿಯೂ ಅವರು ಘೋಷಿಸಿದರು.
25 ಲಕ್ಷ ಸಣ್ಣ ಉದ್ಯಮಿಗಳಿಗೆ ನೆರವಾಗುವಂತೆ ತಲಾ 1.25 ಲಕ್ಷ ಸಾಲವನ್ನು ನೀಡಲಾತುವುದು. ಪ್ರವಾಸೋದ್ಯಮದ ಪುನಶ್ಚೇತನಕ್ಕಾಗಿ ಟೂರಿಸಂ ಏಜೆನ್ಸಿಗಳಿಗೆ ಹತ್ತು ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಜೊತೆಗೆ ಗೈಡ್‌ಗಳಿಗೆ ಒಂದು ಲಕ್ಷ ರೂ. ಸಾಲ ನೀಡುವುದಾಗಿ ಘೋಷಿಸಿದರು.
ಪ್ರಮುಖ ನಿರ್ಧಾರಗಳು
ಕೋವಿಡ್ ಪೀಡಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಸಾಲ ಖಾತರಿ ಯೋಜನೆ. ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರೂ. ಸಾಲ ಖಚಿತ ಯೋಜನೆ, ಇತರ ವಲಯಗಳಿಗೆ 60,000 ಸಾವಿರ ಕೋಟಿ ರೂಪಾಯಿ
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ 25 ಲಕ್ಷ ಮಂದಿಗೆ ಒದಗಿಸುವ ವ್ಯಕ್ತಿಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಮೂಲಕ ಸಾಲ ಒದಗಿಸಲಾಗುತ್ತದೆ
ಹೊಸ ಹೂಡಿಕೆಗಳತ್ತ ಗಮನ ಹರಿಸುವ ಸಲುವಾಗಿ ಸಾಲ ಖಾತರಿ ಯೋಜನೆ, ಹಳೆಯದನ್ನು ಮರುಪಾವತಿ ಮಾಡುವಂತಿಲ್ಲ.
ತುರ್ತು ಸಾಲ ಖಾತರಿ ಯೋಜನೆಯ ಸಲುವಾಗಿ ಹೆಚ್ಚುವರಿ 1.5 ಲಕ್ಷ ಕೋಟಿ ರೂ. ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್
11,000 ನೋಂದಣಿಗೊಂಡ ಪ್ರವಾಸಿ ಗೈಡ್‌ಗಳಿಗೆ ಆರ್ಥಿಕ ಸಹಾಯ. ಪ್ರಯಾಣ ಮತ್ತು ಪ್ರವಾಸೋದ್ಯಮ ಏಜೆಂಟ್‌ಗಳಿಗೆ ಸರ್ಕಾರದಿಂದ 100 ಶೇ. 10 ಲಕ್ಷ ರೂ. ಮತ್ತು 1 ಲಕ್ಷ ರೂ. ಸಾಲ ವ್ಯವಸ್ಥೆ.
5 ಲಕ್ಷ ಮಂದಿಗೆ ಉಚಿತ ವೀಸಾ ನೀಡುವ ಯೋಜನೆ. ಆತ್ಮ ನೀರ್ಭರ್ ರೋಜ್ಗಾರ್ ಯೋಜನೆ ವಿಸ್ತರಣೆ. 11 ಸಾವಿರಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿಗಳು ಟ್ರಾವೆಲ್ ಮತ್ತು ಇತರ ಪ್ರವಾಸೋದ್ಯಮ ವಲಯಗಳಲ್ಲಿ ತೊಡಗಿಕೊಂಡವರಿಗೆ ಒದಗಿಸಲಾಗುತ್ತದೆ
ಡಿಎಪಿ ಮತ್ತು ಪಿ ಅಂಡ್ ಕೆ ಗೊಬ್ಬರದ ಮೇಲೆ ಹೆಚ್ಚುವರಿ ಸಬ್ಸಿಡಿ – ಈ ಹಿಂದೆ ಇದ್ದಂತೆ. ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ ವಿಸ್ತರಣೆ -ಹಿಂದೆ ಇದ್ದಂತೆ
ಮಕ್ಕಳು ಮತ್ತು ಮಕ್ಕಳ ಆರೈಕೆಗೆಯ ಕುರಿತು ಪ್ರಾಥಮಿಕ ಗಮನ ಹರಿಸಲು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ 23,220 ಕೋಟಿ ರೂ. ಘೋಷಣೆ.