NEWSದೇಶ-ವಿದೇಶನಮ್ಮರಾಜ್ಯ

ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ಜೀವಿತಾವಧಿ ಕೊಡುಗೆ ನೀಡಿದ ಕೆಎಸ್​ಆರ್​ಟಿಸಿ, ಕನ್ನಡತಿ ಅದಿತಿ ಅಶೋಕ್​ಗೂ ಉಚಿತ ಪಾಸ್‌

ವಿಜಯಪಥ ಸಮಗ್ರ ಸುದ್ದಿ

ಟೋಕಿಯೋ: ಒಲಿಂಪಿಕ್ಸ್​ನ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಶತಮಾನದ ಸಾಧನೆ ಮಾಡಿರುವ ನೀರಜ್‌ ಚೋಪ್ರಾ ಅವರಿಗೆ ಇಡೀ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ) ಕೂಡಾ ಚಿನ್ನದ ಹುಡುಗನಿಗೆ ಅಭಿನಂದನೆ ಸಲ್ಲಿಸಿ ವಿಶೇಷ ಸವಲತ್ತನ್ನು ಕಲ್ಪಿಸಿಕೊಟ್ಟಿದೆ.

ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿರುವ ನೀರಜ್​ ಚೋಪ್ರಾಗೆ ಕೆಎಸ್​ಆರ್​ಟಿಸಿ ಗೋಲ್ಡನ್ ಪಾಸ್ ನೀಡಿದೆ. ಸಂಸ್ಥೆಯ 60 ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲೇ ಈ ವಿಶೇಷ ಗೌರವವನ್ನು ಬಂಗಾರದ ಪದಕಕ್ಕೆ ಕೊರಳೊಡ್ಡಿದ ಚೋಪ್ರಾಗೆ ಸಲ್ಲಿಸಲಾಗಿದ್ದು, ಈ ಬಗ್ಗೆ ಕೆಎಸ್​ಆರ್​ಟಿಸಿ ಅಧಿಕೃತ ಟ್ವಿಟರ್ ಅಕೌಂಟ್​ನಲ್ಲಿ ಟ್ವೀಟ್ ಮಾಡಿದೆ.

ಅನಂತ ಅನಂತ ಅಭಿನಂದನೆಗಳು. ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಅತ್ಯುನ್ನತ ಸಾಧನೆಯನ್ನು ಸಂಭ್ರಮಿಸಿ ಹಾರೈಸುತ್ತಾ, ಕೆಎಸ್​ಆರ್​ಟಿಸಿಯು 60 ವಸಂತಗಳನ್ನು ಪೂರೈಸಿರುವ ಸವಿನೆನಪಿನಲ್ಲಿ ನೀರಜ್ ಚೋಪ್ರಾ ಅವರಿಗೆ ಕೆಎಸ್​ಆರ್​ಟಿಸಿ ಗೋಲ್ಡನ್ ಪಾಸ್ ನೀಡಲಾಗುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

ಭಾರತವು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 7 ಪದಕಗಳನ್ನು ದಾಖಲಿಸಿ ಅತ್ಯುತ್ತಮ ಪ್ರದರ್ಶನ ನೀಡಲು ಕಾರಣರಾದ ನೀರಜ್​​ ಚೋಪ್ರಾ ನೆರವಾಗಿದ್ದು, ಅವರ ಸಾಧನೆಗೆ ಕೆಎಸ್​ಆರ್​ಟಿಸಿ ಅಭಿನಂದನೆ ಸಲ್ಲಿಸಿದೆ.

ಇನ್ನು 100 ವರ್ಷದ ಬಳಿಕ ಭಾರತಕ್ಕೆ ಒಲಿಂಪಿಕ್ಸ್‌ ಕ್ರಿಡಾಕೂಟದ ಅಥ್ಲೆಟಿಕ್ಸ್​​ ವಿಭಾಗದಲ್ಲಿ ಚಿನ್ನ ಗೆದ್ದು ಕೊಟ್ಟಿರುವ ನೀರಜ್​ಗೆ ಬಿಸಿಸಿಐ, ಹರಿಯಾಣ ರಾಜ್ಯ ಸರ್ಕಾರ, ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಸೇರಿದಂತೆ ಹಲವರು ಬಹುಮಾನ ಘೋಷಿಸಿದ್ದಾರೆ.

ಗೋಲ್ಡನ್ ಪಾಸ್ ವಿಶೇಷತೆ ಏನು?
ಕೆಎಸ್​ಆರ್​ಟಿಸಿ ಕೊಡಮಾಡುವ ಗೋಲ್ಡನ್​ ಪಾಸ್​ ಮೂಲಕ ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದು ಗೌರವ ಸೂಚಕವಾಗಿ ಕೊಡಲಾಗುವ ಸವಲತ್ತಾಗಿದ್ದು, ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ ಕಾರಣಕ್ಕಾಗಿ ನೀರಜ್​ ಚೋಪ್ರಾ ಅವರಿಗೆ ಇದನ್ನು ಕೆಎಸ್​ಆರ್​ಟಿಸಿ ನೀಡಿದೆ.

ಅದಿತಿ ಅಶೋಕ್​ಗೂ ಉಚಿತ ಪಾಸ್
ಪದಕ ಗೆಲ್ಲುವುದು ಸಾಧ್ಯವಾಗದಿದ್ದರೂ ಗಾಲ್ಫ್​ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೃದಯ ಗೆದ್ದ ಕನ್ನಡತಿ ಅದಿತಿ ಅಶೋಕ್​ ಅವರಿಗೂ ಕೆಎಸ್​ಆರ್​ಟಿಸಿ ಉಚಿತ ಪಾಸ್​ ನೀಡುವುದಾಗಿ ಘೋಷಿಸಿದೆ. ಒಲಿಂಪಿಕ್​ನಲ್ಲಿ ಅದ್ಭುತ ಆಟವಾಡಿದ ಕನ್ನಡದ ಕುವರಿ, ಅರ್ಜುನ ಪ್ರಶಸ್ತಿ ವಿಜೇತೆ ಅದಿತಿ ಅಶೋಕ್​ ಅವರಿಗೆ ಕೆಎಸ್​ಆರ್​ಟಿಸಿ ಉಚಿತ ಪಾಸ್​ ನೀಡುವ ಮೂಲಕ ಅಭಿನಂದನೆ ಸಲ್ಲಿಸುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು