NEWSದೇಶ-ವಿದೇಶವಿದೇಶ

ಅಂದು ಮಾಹಿತಿ ತಂತ್ರಜ್ಞಾನ ಸಚಿವ ಇಂದು ಆಹಾರ ಡೆಲಿವರಿ ಬಾಯ್‌

ವಿಜಯಪಥ ಸಮಗ್ರ ಸುದ್ದಿ

ಬರ್ಲಿನ್: ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ತಾಲಿಬಾನಿ ಉಗ್ರರ ದರ್ಬಾರ್‌ ನಡೆಯುತ್ತಿದ್ದು ಅಲ್ಲೆ ಅಶಾಂತಿಯ ವಾತಾವರಣ  ನಿರ್ಮಾಣವಾಗಿದೆ. ಇದನ್ನು ಒಂದು ವರ್ಷದ ಹಿಂದೆಯೇ ಅರಿತ ಅಫ್ಘಾನಿಸ್ತಾನದ ಸಚಿವರೊಬ್ಬರು ಅಫ್ಘಾನಿಸ್ತಾನ ತೊರೆದು ಪ್ರಸ್ತುತ ಜರ್ಮನಿಯ ಲೀಪ್ಜಿಗ್‌ನಲ್ಲಿ ಆಹಾರ ಡೆಲಿವರಿ ಕೆಲಸ ಮಾಡುತ್ತಿದ್ದಾರೆ.

ಹೌದು! ಅಫ್ಘಾನಿಸ್ತಾನದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವರಾಗಿದ್ದ ಸಯ್ಯದ್ ಅಹ್ಮದ್ ಶಾ ಸಾದತ್, ಪ್ರಸ್ತುತ ಜರ್ಮನಿಯ ಲೀಪ್ಜಿಗ್‌ನಲ್ಲಿ ಆಹಾರ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದಾರೆ. ಜರ್ಮನಿಯ ಬೀದಿಗಳಲ್ಲಿ ಪಿಜ್ಜಾ ಡೆಲಿವರಿ ಮಾಡುವಾಗ ಅವರನ್ನು ಕೆಲವರು ಗುರುತಿಸಿದ್ದಾರೆ.

ಅಂದು ಅಫ್ಘಾನಿಸ್ತಾನ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಜತೆಗಿನ ಮನಸ್ತಾಪದ ಬಳಿಕ ಸಾದತ್ ಅವರು ವರ್ಷದ ಹಿಂದೆ ದೇಶವನ್ನು ತೊರೆದಿದ್ದರು. ತಾಲಿಬಾನ್ ಮರು ಸ್ಥಾಪನೆಯ ಸುಳಿವು ಇದ್ದಿದ್ದರಿಂದ ಅವರು ಮುನ್ನೆಚ್ಚರಿಕೆಯಿಂದ ದೇಶದಿಂದ ಹೊರ ಹೋಗಿ ಜರ್ಮನಿಯಲ್ಲಿ ಆಶ್ರಯ ಪಡೆದಿದ್ದಾರೆ.

ಇನ್ನು ನಿತ್ಯದ ಜೀವನ ಸಾಗಿಸಲು ಅವರು ಪಿಜ್ಜಾ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇನ್ನು ಅಲ್ಲಿ ಪಿಜ್ಜಾ ಡೆಲಿವರಿ ಮಾಡುವಾಗ ಜರ್ಮನಿಯ ಪತ್ರಕರ್ತರೊಬ್ಬರ ಕಣ್ಣಿಗೆ ಬಿದ್ದಿದ್ದಾರೆ.

ಈ ವೇಳೆ ಆ ಪತ್ರಕರ್ತರು ಸಾದತ್ ಅವರನ್ನು ವಿಚಾರಿಸಿದಾಗ ಹೌದು ನಾವು ಒಬ್ಬ ಸಚಿವರಾಗಿದ್ದವರು ಎಂದು ಹೇಳಿಕೊಂಡಿದ್ದಾರೆ. ಜತೆಗೆ ಈಗ ಮಾಡುತ್ತಿರುವ ಕೆಲಸದ ಬಗ್ಗೆಯೂ ನನಗೆ ತುಂಬ ಗೌರವವಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಈಗ ನಾನು ಬಹಳ ಸರಳವಾದ ಜೀವನ ನಡೆಸುತ್ತಿದ್ದೇನೆ. ಜರ್ಮನಿಯಲ್ಲಿ ಸುರಕ್ಷಿತವಾಗಿರುವ ಅನುಭವವಾಗುತ್ತಿದೆ. ಲೀಪ್ಜಿಗ್‌ನಲ್ಲಿ ಕುಟುಂಬದೊಂದಿಗೆ ಸಂತೋಷವಾಗಿದ್ದೇನೆ.

ಜರ್ಮನ್ ಕೋರ್ಸ್ ಮಾಡಲು ಹಾಗೂ ಮತ್ತಷ್ಟು ಓದಲು ಹಣ ಉಳಿಸಲು ಬಯಸಿದ್ದೇನೆ. ನಾನು ಅನೇಕ ಕೆಲಸಗಳಿಗೆ ಅರ್ಜಿ ಸಲ್ಲಿಸಿದ್ದೇನೆ, ಆದರೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಜರ್ಮನಿಯ ದೂರಸಂಪರ್ಕ ಕಂಪೆನಿಯಲ್ಲಿ ಕೆಲಸ ಮಾಡುವುದು ನನ್ನ ಕನಸು’ ಎಂದು ಅವರು ಹೇಳಿಕೊಂಡಿದ್ದಾರೆ.

ಸುಶಿಕ್ಷಿತರಾಗಿರುವ ಸಾದತ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸಂವಹನಗಳು ಮತ್ತು ಸಾಫ್ಟ್‌ವೇರ್ ಇಂಜಿನಿಯರಿಂಗ್‌ನ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಈ ಮೊದಲು ಅವರು ಅರಾಮ್ಕೋ ಮತ್ತು ಸೌದಿ ದೂರಸಂಪರ್ಕ ಕಂಪನಿಯಲ್ಲಿ ಸಹ ಕೆಲಸ ಮಾಡಿದ್ದರು.

2018ರಲ್ಲಿ ಅಶ್ರಫ್ ಘನಿ ನೇತೃತ್ವದ ಅಫ್ಘನ್ ಸರ್ಕಾರದಲ್ಲಿ ಸಚಿವರಾಗಿ ಸೇರಿಕೊಂಡಿದ್ದ ಅವರು, 2020ರಲ್ಲಿ ರಾಜೀನಾಮೆ ನೀಡಿದ್ದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಜರ್ಮನಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಗೆ ಸ್ಥಳಾಂತರಗೊಂಡ ಕೆಲವೇ ಸಮಯದಲ್ಲಿ ಹಣಕಾಸಿನ ಕೊರತೆ ಉಂಟಾಯಿತು. ಹೀಗಾಗಿ ದೈನಂದಿನ ಜೀವನಕ್ಕಾಗಿ ಆಹಾರ ಪೂರೈಕೆ ಕೆಲಸಕ್ಕೆ ಸೇರಿಕೊಂಡರು.

ನಿತ್ಯವೂ ಸೈಕಲ್ ಏರಿ ಮನೆಯಿಂದ ಮನೆಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಒಂದು ದೇಶದ ಸಚಿವನಾಗಿ ಉನ್ನತ ಹುದ್ದೆಯಲ್ಲಿದ್ದವರು ಪಿಜ್ಜಾ ಡೆಲಿವರಿ ಮಾಡುವ ಸ್ಥಿತಿಗೆ ಬಂದಿದ್ದು ಬೇಸರ ಉಂಟುಮಾಡುತ್ತಿಲ್ಲವೇ? ಎಂದು ಕೇಳಿದರೆ, ತಮಗೆ ಕಾರ್ಮಿಕನ ಘನತೆ ತಿಳಿದಿದೆ. ಈ ಕೆಲಸ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳುತ್ತಾರೆ.

ಒಂದು ದೇಶದಲ್ಲಿ ಗೌರವಯುತ ಹುದ್ದೆ ಅಲಂಕರಿಸಿ ಈಗ ಆ ಹುದ್ದೆಗೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಸರಳ ಜೀವನ ನಡೆಸಲು ಹೊರಟಿರುವ ಅಫ್ಘಾನಿಸ್ತಾನದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವರಾಗಿದ್ದ ಸಯ್ಯದ್ ಅಹ್ಮದ್ ಶಾ ಸಾದತ್ ಅವರ ನಡೆಗೆ ಎಲ್ಲೆಡೆ ಪ್ರಸಂಶೆಯ ಮಹಪೂರವೇ ಹರಿದು ಬರುತ್ತಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ