NEWSನಮ್ಮಜಿಲ್ಲೆ

ವಿನಂತಿಸಿದ 24 ತಾಸಿನೊಳಗೆ ನಿರ್ಗತಿಕರಿಗೆ ಆಹಾರ ಕಿಟ್‍ ವಿತರಣೆ

ಸಾವಿರ ಬಡಕುಟುಂಬಗಳಿಗೆ ನೆರವಾದ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕೋವಿಡ್-19 ನಿಂದ ಲಾಕ್‍ಡೌನ್ ಆಗಿರುವ ಹಿನ್ನೆಲೆ ಇನ್ಫೋಸಿಸ್ ಫೌಂಡೇಷನ್‌ ವತಿಯಿಂದ ಬಡ ಹಾಗೂ ನಿರ್ಗತಿಕ ಕುಟುಂಬಳಿಗೆ, ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯ ಕಾರ್ಮಿಕರೊಳಗೊಂಡ ಒಟ್ಟು ಒಂದು ಸಾವಿರ ಕುಟುಂಬಗಳಿಕೆ ಅಕ್ಕಿ, ಎಣ್ಣೆ, ಹಿಟ್ಟುಗಳು ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಹೊಂದಿರುವ 1000 ಕಿಟ್‍ಗಳನ್ನು ವಿತರಿಸಲಾಯಿತು.

ಮೈಸೂರು ಜಿಲ್ಲಾಡಳಿತದ ಪರವಾಗಿ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ  ನಿರ್ಗತಿಕರಿಗೆ ನೆರವಾಗುವಂತೆ ಕೋವಿಡ್-19 ಸಹಾಯ ಟಾಸ್ಕ್ ಫೋರ್ಸ್‍ನ ಸದಸ್ಯರಾಗಿರುವ ಇನ್ಫೋಸಿಸ್‍ನ ಫಾಥಾಹೀನ್ ಮಿಸ್ಬಾ ಮೂಲಕ ವಿನಂತಿಸಲಾಗಿದ್ದು, ಇದಕ್ಕೆ ತಕ್ಷಣೆವೇ ಸ್ಪಂದಿಸಿದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು 24 ಗಂಟೆಯಲ್ಲೇ ನಿರ್ಗತಿಕರಿಗೆ ಅಗತ್ಯ ಆಹಾರ ಸಾಮಗ್ರಿಗಳುಳ್ಳ ಕಿಟ್‍ಗಳನ್ನು ಒದಗಿಸಿ ನೆರವಾಗಿದ್ದಾರೆ. ಇದು ವಿಶ್ವಾಸಾರ್ಹ ಸಂಸ್ಥೇಯಾಗಿದೆ ಎಂದು ಹೇಳಿದ ಪಾಲಿಕೆ ಆಯುಕ್ತ ಗುರುದತ್ ಅವರು, ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಂಬಲ ನೀಡಿದಕ್ಕೆ ಇನ್ಫೋಸಿಸ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

ಈ ವೇಳೆ ಪಾಲಿಕೆಯ ಬಿಳಿಗಿರಿರಂಗ, ಪಟ್ಟಣ ಯೋಜನಾ ಜಂಟಿ ನಿರ್ದೇಶಕರಾದ ಶ್ರೀ ಜಯಸಿಂಹ, ಇನ್ಫೋಸಿಸ್ ಸಂಸ್ಥೆಯ ಫಾಥಾಹೀನ್ ಮಿಸ್ಬಾ, ಶಾಜಿ ಮ್ಯಾಥು, ರಾಘವೇಂದ್ರ ಉಡುಪ, ಜೆ.ಎಸ್.ಎಸ್ ಫೌಂಡೇಶನ್‍ನ ಯೋಗಾತ್ಮ ಶ್ರೀಹರಿ ಸೇರಿ ಇತರರು ಉಪಸ್ಥಿತರಿದ್ದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!