ಬೀಜಿಂಗ್: ವಿಶ್ವಾದ್ಯಂತ ಕೊರೊನಾ ಸೋಂಕು ತನ್ನ ರೌದ್ರನರ್ತ ಮುಂದುವರಿಸಿರುವ ಈ ಸಮಯದಲ್ಲಿ ಭಾರತ ಈ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವದ ಔಷಧಾಲಯದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಂಘೈನ ಸಹಕಾರ ಸಂಸ್ಥೆ ಮೆಚ್ಚುಗೆಯ ಮಾತುಗಳನ್ನಾಡಿದೆ.
ಭಾರತ ಔಷಧದಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದು, ಅನೇಕ ಪ್ರಾದೇಶಿಕ ಮತ್ತು ಜಾಗತಿಕ ಉಪಕ್ರಮಗಳಿಗೆ ನಾಂದಿ ಹಾಡಿದೆ. ಜತೆಗೆ ಕೊರೊನಾ ವಿರುದ್ಧ ಹೋರಾಡಲು 133 ದೇಶಗಳಿಗೆ ಔಷಧವನ್ನು ರಫ್ತು ಮಾಡಿದೆ ಇದು ಇಡೀ ಜಗತ್ತೆ ಮೆಚ್ಚುವ ಕೆಲಸವೆಂದು ಹೇಳಿದೆ.
ವಿಶ್ವವೇ ಒಂದು ಎಂಬ ದೃಷ್ಟಿಯಿಂದ ನೋಡುತ್ತಿರುವ ಭಾರತದ ಔದಾರ್ಯ ತೋರಿಸಲು ಇದು ಸಾಕಲ್ಲವೆ ಎಂದು ಶ್ಲಾಘಿಸಿದೆ.
ಇನ್ನು ರಾಷ್ಟ್ರ ಮಟ್ಟದಲ್ಲಿ ರೋಗವನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ನಮ್ಮ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ಸಂದರ್ಶನವೊಂದರಲ್ಲಿ ಸಂಸ್ಥೆ ವಿವರಿಸಿದೆ.