NEWSವಿದೇಶ

ಇಂದು ಬಾಹ್ಯಾಕಾಶಕ್ಕೆ ಜಿಗಿಯಲಿದ್ದಾರೆ ರಿಚರ್ಡ್ ಬ್ರಾನ್ಸನ್, ಸಿರಿಶಾ ಬಾಂದ್ಲಾ

ವಿಜಯಪಥ ಸಮಗ್ರ ಸುದ್ದಿ

ವಾಷಿಗ್ಟನ್: ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಹ್ಯಾಕಾಶಕ್ಕೆ ಹಾರುತ್ತಿರುವ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದು ಪಾತ್ರರಾಗುತ್ತಿದ್ದಾರೆ.

ಹೌದು! ಸ್ಪೇಸ್ ಟೂರಿಸಂ ಕನಸು ಕಂಡಿರುವ `ವೆಲ್ತೀ ಡೇರ್ ಡೆವಿಲ್ ಮೊಘಲ್’ ಹೆಸರುವಾಸಿ ವರ್ಜಿನ್ ಕಂಪನಿಯ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ 10 ವರ್ಷಗಳ ಸಾಹಸ ಇಂದು ಸಾಕಾರವಾಗಲಿದ್ದು, ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಏರೋನಾಟಿಕಲ್ ಇಂಜಿನಿಯರ್ 34ರ ಹರೆಯದ ಸಿರಿಶಾ ಬಾಂದ್ಲಾ ಸಹ ವರ್ಜಿನ್ ಗ್ಯಾಲಕ್ಟಿಕ್ ಗಗನ ನೌಕೆಯೊಂದಿಗೆ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.

ವರ್ಜಿನ್ ಗ್ಯಾಲಾಕ್ಟಿಕ್ ಹೋಲ್ಡಿಂಗ್ ಇಂಕ್ ಕಂಪನಿ ನಾಳೆ ಮೊದಲ ಪ್ರಯಾಣಿಕರ ಸ್ಪೇಸ್ ರಾಕೆಟ್ ಅನ್ನು ಲಾಂಚ್ ಮಾಡುತ್ತಿದೆ. ‘ವಿಎಸ್‍ಎಸ್ ಯುನಿಟಿನಿಟಿ’ ಗಗನ ನೌಕೆಯಲ್ಲಿ ಪ್ರಯಾಣಿಸಲಿರುವ ಆರು ಗಗನಯಾತ್ರಿಗಳಲ್ಲಿ ಇಬ್ಬರು ಮಹಿಳೆಯರಿದ್ದು, ಅದರಲ್ಲಿ ಸಿರಿಶಾ ಕೂಡ ಒಬ್ಬರು.

90 ನಿಮಿಷಗಳ ಈ ಮಹಾತ್ಸಾಧನೆಯಲ್ಲಿ ಎಲ್ಲವೂ ಸರಿಯಾದರೆ ನ್ಯೂ ಮೆಕ್ಸಿಕೋ ಮರಳುಗಾಡಿನ ಮೇಲೆ ಭೂಮಿಯ ಪರಿಧಿಯಿಂದ 50 ಮೈಲಿ ಎತ್ತರಕ್ಕೆ ಯುನಿಟಿ-22 ರಾಕೆಟ್ ಹಾರಲಿದೆ. ಇಬ್ಬರು ಪೈಲಟ್‍ಗಳು, ರಿಚರ್ಡ್ ಬ್ರಾನ್ಸನ್ ಸೇರಿ ನಾಲ್ವರು ತರಬೇತಿ ಹೊಂದಿರುವ ತಜ್ಞರು ಸ್ಪೇಸ್ ಸ್ಟೇಷನ್ ಅಂಚಿನಲ್ಲಿ ಕೆಲ ನಿಮಿಷ ರೋಚಕ ಅನುಭವ ಅನುಭವಿಸಲಿದ್ದಾರೆ.

Leave a Reply

error: Content is protected !!
LATEST
ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ