ಇಡುಕ್ಕಿ (ಕೇರಳ): ಕೊರೊನಾ ವಿಶ್ವಮಾರಿ ಪ್ರಪಂಚದ ಜನರನ್ನು ಕಾಡುತ್ತಿರುವ ಈ ಹೊತ್ತಿನಲ್ಲಿ ಸ್ನೇಹಿತರು, ಸಂಬಂಧಿಗಳಿಗೆ ಆಶ್ರಯ ಕೊಡುವ ಮುನ್ನ ಸ್ವಲ್ಪ ಯೋಜಿಸಬೇಕಾಗಿದೆ.
ಇದೇನು ಸ್ನೇಹಿತರು ಮತ್ತು ಸಂಬಂಧಿಗಳಿಗೆ ಆಶ್ರಯ ಕೊಡುವುದಕ್ಕೆ ಏಕೆ ಯೋಚಿಸಬೇಕು ಎಂದುಕೊಳ್ಳುತ್ತಿದ್ದಾರೆ. ಇಲ್ಲೇ ಇರೋದು. ಅದೇನಪ್ಪ ಅಂದರೆ ಪರ ಊರಿನಿಂದ ಕೆಲಸದ ನಿಮಿತ್ತ ಬಂದಿದ್ದ ಗೆಳೆಯನಿಗೆ ತನ್ನ ಮನೆಯಲ್ಲಿ ಉಳಿದುಕೊಳ್ಳಲು ಗೃಹಸ್ತ ಆಶ್ರಯ ನೀಡಿದ್ದ. ಆದರೆ ಆತ ಸ್ನೇಹಿತನ ಮನೆಯಲ್ಲೇ ಇದ್ದುಕೊಂಡು ಆ ಪ್ರಾಣ ಸ್ನೇಹಿತನ ಹೆಂಡತಿಯೊಡನೆ ಸಲುಗೆ ಬೆಳೆಸಿಕೊಂಡು ಬಳಿಕ ಆಕೆಯೊಂದಿಗೇ ಪರಾರಿಯಾಗಿದ್ದಾನೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇದು ಕತೆಯೇನು ಎಂದು ಯೋಚಿಸುತ್ತಿದ್ದೀರ ಇಲ್ಲಕಣ್ರಿ ಇದು ಸತ್ಯವಾಗಿ ನಡೆದಿರೋದು. ಅದು ಎಲ್ಲಿ ನಡೆದಿದೆ ಏನಾಯಿತು ಎಂಬುದರ ಪೂರ್ಣ ಮಾಹಿತಿಯನ್ನು ನಿಮಗೆ ಕೊಡುತ್ತೇನೆ ಮುಂದೆ ಓದಿ.
ಈ ಘಟನೆ ನಡೆದಿರೋದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ. ಈ ಘಟನೆಯಿಂದ ಆ ಮಹಿಳೆ ಮನೆಯವರಿಗೆಲ್ಲರಿಗೂ ಆಘಾತ ಉಂಟಾಗಿದೆ. ಲಾಕ್‌ಡೌನ್ ವೇಳೆ ಗೆಳೆಯನ ಮನೆಗೆ ಆಶ್ರಯ ಬೇಡಿ ಬಂದು ಆಶ್ರಯ ಪಡೆದ ಬಳಿಕ ಸ್ನೇಹಿತನ ಪತ್ನಿಯನ್ನೆ ಪುಸಲಾಯಿಸಿದ್ದಾನೆ ಎಂದರೆ ಆತ ಎಂಥ ಕತರ್‌ನಾಕ್ ಎಂದು ನೀವೆ ಯೋಚನೆ ಮಾಡಿ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
32 ವರ್ಷದ ಲೋಥಾರಿಯೋ ಎಂಬಾತನೇ ಸ್ನೇಹಿತ ಪತ್ನಿಯನ್ನು ಪುಸಲಾಯಿಸಿಕೊಂಡು ಹೋಗಿರುವಾತ. ಎರ್ನಾಕುಲಂನ ಖಾಸಗಿ ಕಂಪನಿಯೊಂದರ ಉದ್ಯೋಗಿರುವ ಈತ, ಮಾರ್ಚ್‌ನಲ್ಲಿ ಲಾಕ್‌ಡೌನ್ ಆರಂಭವಾದ ವೇಳೆ ಉಳಿದುಕೊಳ್ಳುವುದಕ್ಕೆ ಆಶ್ರಯವಿಲ್ಲದೆ ಪರದಾಡುತ್ತಿದ್ದ. ಆಗ 20 ವರ್ಷದ ಹಿಂದೆ ಇದ್ದ ಸ್ನೇಹಿತ ನೆನಪಾಗಿದೆ. ನಂತರ ತನ್ನ ಆ ಬಾಲ್ಯ ಸ್ನೇಹಿತನ ಸಂಪರ್ಕಕ್ಕೆ ಯತ್ನಿಸಿದ್ದಾನೆ. ಆತನ ಸಂಪರ್ಕ ಸಿಕ್ಕಿದ್ದು ಆತನಿಗೆ ಕರೆ ಮಾಡಿ ಮಾತನಾಡಿ ಇದ್ದ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾನೆ. ಅದರಿಂದ ಸ್ನೇಹಿತ ನಮ್ಮ ಮನೆಗೆ ಬಾ ಎಂದು ಹೇಳಿದ್ದಾನೆ.
ಸರಿ ಎಂದು ಮನೆಗೆ ಬಂದಿದ್ದಾನೆ. ಮನೆಗೆ ಆಗಮಿಸಿದ ಆತ ಬಳಿಕ ಏಪ್ರಿಲ್ ಅಂತ್ಯದವರೆಗೂ ಊಟ ವಸತಿ ನೀಡಿದ್ದ. ಆದರೆ ಇಷ್ಚು ದಿನವಾದರೂ ಈತ ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳುತ್ತಿಲ್ಲ ಎಂಬ ಸಂಶಯ ಗೆಳೆಯನಿಗೆ ಮೂಡಿತ್ತು. ಅದನ್ನು ಅರಿತ ಇಬ್ಬರು ಪರಾರಿಯಾಗಿದ್ದಾರೆ. ಬಳಿಕ ನನ್ನ ಪತ್ನಿ ಮತ್ತು ಸ್ನೇಹಿತ ಇಬ್ಬರು ಕಳೆದ ವಾರ ನಮ್ಮ ಮಕ್ಕಳ ಸಹಿತ ಓಡಿಹೋಗಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ನೊಂದ ಪತಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು, ಕಳೆದ ವಾರ ಮಕ್ಕಳೊಂದಿಗೆ ಇಬ್ಬರು ಪೊಲೀಸರ ಮುಂದೆ ಹಾಜರಾಗಿದ್ದಾರೆ. ಈ ವೇಳೆ ಮಹಿಳೆ ತಾನು ಪತಿಯ ಸ್ನೇಹಿತನ ಜೊತೆಯೇ ಇರುತ್ತೇನೆ ಎಂದು ಹೇಳಿದ್ದಾಳೆ. ಪೊಲೀಸರು ಮತ್ತು ಸಂಬಂಧಿಕರು ಎಷ್ಟೇ ತಿಳುವಳಿಕೆ ಹೇಳಿದರೂ ಆಕೆ ಗಂಡನ ಜತೆ ಜೀವನ ಮಾಡಲು ನಿರಾಕರಿಸಿದ್ದು, ಪತಿಯ ಸ್ನೇಹಿತ ಜತೆಯೇ ಇರುತ್ತೇನೆ ಎಂದು ಹೇಳಿ ಹೋಗಿದ್ದಾಳೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail