NEWSವಿಜ್ಞಾನಸಂಸ್ಕೃತಿ

ಆಂಧ್ರಪ್ರದೇಶದಲ್ಲಿ ಅನಿಲ ದುರಂತ: ಎಲ್‌ಜಿ ಪಾಲಿಮರ್ಸ್ ಎಂಡಿ, ಸಿಇಒ ಸೇರಿ 12 ಮಂದಿ  ಬಂಧನ

ವಿಜಯಪಥ ಸಮಗ್ರ ಸುದ್ದಿ

ವಿಶಾಖಪಟ್ಟಣಂ: ವಿಶಾಖಪಟ್ಟಣಂನಲ್ಲಿ ಸಂಭವಿಸಿದ ಅನಿಲ ಸೋರಿಕೆಯಿಂದ 12 ಮಂದಿಯ ಮೃತಪಟ್ಟಿದ್ದ  ಪ್ರಕರಣ ಸಂಬಂಧ  ಎಲ್‌ಜಿ ಪಾಲಿಮರ್ಸ್ ನ ಎಂಡಿ, ಸಿಇಒ ಸೇರಿ 12 ಮಂದಿಯನ್ನು ಬಂಧಿಸಲಾಗಿದೆ.

ವಿಷಾನಿಲಕ್ಕೆ ಸಂಬಂಧಪಟ್ಟ ಅಂಶಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಕರ್ತವ್ಯ ಲೋಪ ಎಸಗಿದ್ದ ಆರೋಪದ ಅಡಿಯಲ್ಲಿ 12 ಮಂದಿಯನ್ನು ಜು.6 ರಂದು ರಾತ್ರಿ ಬಂಧಿಸಲಾಗಿದೆ. ಜತೆಗೆ ಆಂಧ್ರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಫ್ಯಾಕ್ಟರಿ ಇಲಾಖೆಗಳ ಅಧಿಕಾರಗಳನ್ನೂ ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ.

ಇತರರ ಜೀವಕ್ಕೇ ಹಾನಿಯಾಗಬಹುದೆಂದು ಗೊತ್ತಿದ್ದರೂ ಸಹ ಈ ಎಲ್ಲಾ ಆರೋಪಿಗಳ ಬೇಜವಾಬ್ದಾರಿತನದಿಂದ ಎಂ 6 ಸ್ಟೈರೀನ್ ಶೇಖರಣಾ ಟ್ಯಾಂಕ್ ನಲ್ಲಿ ಈ ಅವಗಢ ಸಂಭವಿಸಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಆರ್.ಕೆ. ಮೀನಾ ಹೇಳಿದ್ದಾರೆ.

ಸಮರ್ಪಕ ಕೂಲಿಂಗ್ ವ್ಯವಸ್ಥೆ ಇಲ್ಲದ, ಸರ್ಕ್ಯುಲೇಷನ್ ಸಿಸ್ಟಮ್ ರಹಿತ, ಅಸಮರ್ಪಕ ಅಳತೆ ನಿಯತಾಂಕಗಳು, ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಹೊಂದಿಲ್ಲದ ಎಂ6 ಟ್ಯಾಂಕ್‌ಕಳಪೆಯಾಗಿರಿಸಿದ್ದೇ ಈ ಅವಘಡಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ಎಲ್‌ಜಿ ಪಾಲಿಮರ್ಸ್ ನ ತಾಂತ್ರಿಕ ನಿರ್ದೇಶಕ ಡಿಎಸ್ ಕಿಮ್, ಪಿಟ್ಚುಕ ಪೂರ್ಣ ಚಂದ್ರ ಮೋಹನ್ ರಾವ್, ಸಂಸ್ಥೆಯ ಹೆಚ್ಚುವರಿ ನಿರ್ದೇಶಕರು ಸೇರಿ ಎಚ್ಒಡಿ, ಎಸ್ಎಂಎಚ್ ಇನ್ ಚಾರ್ಜ್ ಶ್ರೀನಿವಾಸ್ ಕಿರಣ್ ಕುಮಾರ್, ಟೀಮ್ ಲೀಡರ್ (ಪ್ರೊಡಕ್ಷನ್)  ರಾಜು ಸತ್ಯನಾರಾಣ, ಇಂಜಿನಿಯರ್ ಗಳಾದ ಚೆಡುಂಪುಪತಿ ಚಂದ್ರಶೇಖರ್, ಕೆ ಚಕ್ರಪಾಣಿ, ಕೆ. ಗೌರಿ ಶಂಕರ, ನಾಗೇಂದ್ರ ರಾಮು, ಆಪರೇಟರ್ ಮುದ್ದು ರಾಜೇಶ್, ಪಿ.ಬಾಲಾಜಿ, ನೈಟ್ ಡ್ಯೂಟಿ ಆಫೀಸರ್, ಆಪರೇಷನ್ಸ್, ಜಿಪಿಪಿಎಸ್ ನ ಎಸ್. ಅಚ್ಯುತ್, ನೈಟ್ ಶಿಫ್ಟ್ ನ ಸೇಫ್ಟಿ ಆಫೀಸರ್ ಕೆ.ವೆಂಕಟ ನರಸಿಂಹ ರಮೇಶ್ ಪಟ್ನಾಯಕ್ ಬಂಧನಕ್ಕೊಳಗಾದ ಸಂಸ್ಥೆ  ಉದ್ಯೋಗಿಗಳಾಗಿದ್ದು, ಕೋರ್ಟ್ ಎದುರು ಹಾಜರುಪಡಿಸಲಾಗಿದೆ.

1 Comment

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್