NEWSಕೃಷಿನಮ್ಮರಾಜ್ಯವಿಜ್ಞಾನ

ಖಾಸಗಿಯವರಿಗೂ ಪರಿಸರ ನಿರ್ವಹಣೆ ಜವಾಬ್ದಾರಿ ಕೊಡಿ

 ಸಚಿವ ಸೋಮಶೇಖರ್ ನಿರ್ದೇಶನ l ಜೂನ್ 5 ರ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಪೂರ್ವಭಾವಿ ಸಭೆ 

ವಿಜಯಪಥ ಸಮಗ್ರ ಸುದ್ದಿ
  • ನರೇಗಾ ಯೋಜನೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಸದುಪಯೋಗವಾಗಲಿ

ಮೈಸೂರು:  ಕೆಲವು ಬಡಾವಣೆ, ಪಾರ್ಕ್‍ಗಳು ಸೇರಿದಂತೆ ಒಂದೊಂದು ಕಡೆ ಎಷ್ಟು ಗಿಡಗಳನ್ನು ನೆಡಬಹುದು? ಅವುಗಳ ನಿರ್ವಹಣೆ ಹೊಣೆಯನ್ನು ಬಡಾವಣೆಗಳ ಅಸೋಸಿಯೇಷನ್ ಇಲ್ಲವೇ ಸಮೀಪ ಇರುವ ಕಾರ್ಖಾನೆಗಳಂತಹ ಖಾಸಗಿಯವರ ಸುಪರ್ದಿಗೂ ವಹಿಸಿ ನಿರ್ವಹಣೆ ಜವಾಬ್ದಾರಿ ನೀಡಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದರು.

ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಎಷ್ಟು ಗಿಡಗಳನ್ನು ನೆಡಬಹುದು? ಈ ಬಾರಿ ನೀವು ಎಷ್ಟು ಗಿಡಗಳನ್ನು ನೆಡುತ್ತೀರಿ ಎಂಬ ನಿಗದಿತ ಗುರಿಹಾಕಿಕೊಂಡು ಕಾರ್ಯನಿರ್ವಹಿಸಿ. ಹೇಳುವ ಲೆಕ್ಕವೊಂದು, ನೆಡುವ ಲೆಕ್ಕ ಇನ್ನೊಂದು ಎಂಬುದಾಗಬಾರದು ಎಂದು ವಿವಿ ಕುಲಸಚಿವರಿಗೆ ಸಚಿವರು ಸೂಚಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಇನ್ನೊಂದು ಪ್ರಮುಖ ಸಂಗತಿಯೆಂದರೆ ಕಾರ್ಪೊರೇಷನ್‌ ಆಡಳಿತಕ್ಕೆ ಎಷ್ಟು ಗಿಡ ಹಾಗೂ ಯಾವ ಯಾವ ಜಾತಿ, ತಳಿಯ ಗಿಡಗಳನ್ನು ನೆಡಬೇಕು ಎಂಬ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿ ಕೇಳಿದರೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ನರೇಗಾ ಯೋಜನೆ ಸದುಪಯೋಗವಾಗಲಿ
ಇತ್ತ ಸಾರ್ವಜನಿಕರಿಗೆ ಉದ್ಯೋಗವೂ ಸಿಗಬೇಕು, ಅತ್ತ ಜಿಲ್ಲೆ ಹಸಿರೀಕರಣವೂ ಆಗಬೇಕು ಎಂಬ ನಿಟ್ಟಿನಲ್ಲಿ ಯೋಜನೆಯನ್ನು ಅನುμÁ್ಠನಕ್ಕೆ ತರಬೇಕು. ಈಗ ನಿರ್ಧಾರ ಮಾಡಲಾಗಿರುವಂತೆ ಮನ್ರೇಗಾ ಯೋಜನೆಯಡಿಯಲ್ಲಿ ಗಿಡಗಳನ್ನು ನೆಡುವುದು ಉತ್ತಮ ಕಾರ್ಯಕ್ರಮವಾಗಿದೆ. ಆದರೆ, ಇದು ಕೇವಲ ಪೇಪರ್ ವರ್ಕ್ ರೀತಿ ಆಗಬಾರದು. ಕೆಲಸ ಮಾಡಿದವರಿಗೂ ಹಣ ಸಿಗುವ ಜೊತೆಗೆ ಗಿಡಗಳನ್ನೂ ಸಮರ್ಪಕವಾಗಿ ನೆಡಬೇಕು ಎಂದು ಸಚಿವರು ಸೂಚನೆ ನೀಡಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಚಾಮುಂಡಿ ಬೆಟ್ಟಕ್ಕೂ ವಿಶೇಷ ಆದ್ಯತೆ
ಕಂದಾಯ ಸಚಿವರು, ಆ ಇಲಾಖೆ ಕಾರ್ಯದರ್ಶಿ  ಹಾಗೂ ಅರಣ್ಯ ಸಚಿವರು, ಆ ಇಲಾಖೆಯ ಕಾರ್ಯದರ್ಶಿಗಳ ಬಳಿ ಚಾಮುಂಡಿಬೆಟ್ಟ ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಸಭೆ ನಡೆಸುವಂತೆ ಕೋರಿದ್ದೇನೆ. ಸಭೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಗಿಡಗಳನ್ನು ನೆಡುವ ಬಗ್ಗೆ, ಎಷ್ಟು ಗಿಡಗಳನ್ನು ನೆಡುವುದು ಹಾಗೂ ಅವುಗಳ ನಿರ್ವಹಣೆ ಹೇಗೆ? ಮೂರು ವರ್ಷಗಳ ಕಾಲ ಯಾರು ನಿರ್ವಹಣೆ ಮಾಡುತ್ತಾರೆ ಎಂಬ ಇತ್ಯಾದಿ ವಿಷಯಗಳ ಬಗ್ಗೆ ಅವರ ನೇತೃತ್ವದಲ್ಲಿ ಇನ್ನು ಎರಡ್ಮೂರು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಗಿಡಗಳು ಎಷ್ಟು ಇವೆ? ಯಾವ ಗಿಡಗಳನ್ನು ಯಾವ ಪ್ರದೇಶದಲ್ಲಿ ನೆಡಬೇಕು? ಅವುಗಳನ್ನು ನೆಡಲು ಯಾವ ರೀತಿ ಯೋಜನೆ ಹಾಕಿಕೊಂಡು ಅಧಿಕಾರಿಗಳು ಬಂದಿದ್ದಾರೆ ಎಂಬುದು ಮುಖ್ಯ ಎಂದು ಹೇಳಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ವಿದ್ಯುತ್ ತಂತಿಗಳ ಕೆಳಗೆ ಯಾವ ಗಿಡಗಳನ್ನು ಬೆಳೆಯಬೇಕು? ಎಷ್ಟು ಎತ್ತರದ ಗಿಡಗಳನ್ನು ನೆಡಬಹುದು? ಒಮ್ಮೆ ಅವುಗಳು ಬೆಳೆದ ಮೇಲೆ ಮತ್ತೆ ಕಡಿಯುವಂತಾಗಬಾರದು. ಅಲ್ಲದೆ, ಗಿಡಗಳನ್ನು ಖಾಸಗಿಯವರು ಪ್ರೀತಿಯಿಂದ ನರ್ಸರಿಯಲ್ಲಿ ಬೆಳೆಸುತ್ತಿದ್ದಾರೆ. ಅವುಗಳನ್ನು ನಾವು ಪಡೆದು ಪರಿಸರ ದಿನದಂದು ನೆಟ್ಟು ಸುಮ್ಮನಾಗಿ ಕೊನೆಗೆ ಅತ್ತ ಮುಖ ಹಾಕದೇ ಇದ್ದರೆ ಮಾಡಿದ ಕೆಲಸ ಸಾರ್ಥಕವಾಗದು. ಇವುಗಳ ಬಗ್ಗೆ ನಿಗಾ ಬೇಕು ಎಂದು ತಿಳಿಸಿದರು.

ನೆಟ್ಟ ಗಿಡ ಉಳಿಯುವಂತೆ ಪ್ಲಾನ್ ಆಗಲಿ
ಈಗಿನ ಗಿಡ ನೆಡುವ ಮಾದರಿ ಬದಲಾಗಬೇಕು. ಸುಮ್ಮನೆ ಬಂದು ಸಿಕ್ಕ ಜಾಗದಲ್ಲಿ ನೆಟ್ಟು ಹೋಗುವಂತಾಗಬಾರದು. ಯಾವ ರಸ್ತೆಯಲ್ಲಿ? ಯಾವ ಪ್ರದೇಶದಲ್ಲಿ? ಗಿಡಗಳನ್ನು ನೆಡುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಎಲ್ಲಿ ಎತ್ತರದ ಗಿಡಗಳನ್ನು ನೆಡಬೇಕು ಹಾಗೂ ಎಲ್ಲಿ ಚಿಕ್ಕ ಗಿಡಗಳನ್ನು ಬೆಳೆಯಬೇಕು ಎಂಬ ಬಗ್ಗೆಯೂ ಯೋಜನೆ ಸಿದ್ಧವಾಗಬೇಕು ಎಂದು ಶಾಸಕರಾದ ರಾಮದಾಸ್ ಅವರು ಹೇಳಿದಾಗ, ಸಚಿವರೂ ಸಹಮತ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾತನಾಡಿ, ಪರಿಸರ ಪೋಷಣೆ ಜವಾಬ್ದಾರಿಯನ್ನು ಕೈಗಾರಿಕೆಗಳಿಗೂ ಕೊಡುವಂತಾಗಬೇಕು. ಕೈಗಾರಿಕೋದ್ಯಮಿಗಳು ಖಾಸಗಿಯಾಗಿ ಪಾರ್ಕ್ ನಿರ್ವಹಣೆಗಳಂತಹ ಚಟುವಟಿಕೆಯಲ್ಲಿ ತೊಡಗಿಕೊಂಡು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್