ಮೈಸೂರು: ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದು, ಅಂತ್ಯಕ್ರಿಯೆ ಇಂದು ನಡೆಯಬೇಕಿದೆ. ಆದರೆ ಇತ್ತ ಸಾವಿನ ನೋವಲ್ಲಿಯೂ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯೊಬ್ಬಳು ಮೈಸೂರಿನ ರೂಪಾನಗರದ ಪರೀಕ್ಷೆ ಕೇಂದ್ರದಲ್ಲಿ ಎಕ್ಸಾಂ ಬರೆಯುತ್ತಿದ್ದಾಳೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಬೀರಿಹುಂಡಿಯ ಲಕ್ಷ್ಮಮ್ಮ ಗುರುವಾರ ನಿಧನರಾದರು. ಅವರ ಅಂತ್ಯಕ್ರಿಯೆ ಇಂದು ನಡೆಯುತ್ತಿದ್ದು, ಈ ನಡುವೆ ತಾಯಿ ಮೃತಪಟ್ಟಿದ್ದಾರೆ ನಾನು ಪರೀಕ್ಷೆ ಬರೆಯಲು ಹೋಗ ಲ್ಲ ಎಂದು ವಿದ್ಯಾರ್ಥಿನಿ ದುಃಖದಿಂದ ಕುಳಿತಿದ್ದಳು.
ವಿದ್ಯಾರ್ಥಿನಿಗೆ ಈ ವೇಳೆ ಧೈರ್ಯ ತುಂಬಿದ ಬೀರಿಹುಂಡಿ ಗ್ರಾಪಂ ಮಾಜಿ ಸದಸ್ಯ ಶಿವಣ್ಣ ಇಂದು ನಡೆಯುತ್ತಿರುವ ಹಿಂದಿ ಪರೀಕ್ಷೆ ಬರೆಯಲು ಕರೆದುಕೊಂಡು ಬಂದಿದ್ದಾರೆ.
ಶಿವಣ್ಣ ತಮ್ಮ ಕಾರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪ್ರೋತ್ಸಾಹಿಸಿದ್ದು, ಪರೀಕ್ಷೆ ನಡೆದ ನಂತರ ಇಂದು (ಶುಕ್ರವಾರ) ಮಧ್ಯಾಹ್ನ ತಾಯಿಯ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
Samadanave elladakku pradana