ಮೈಸೂರು: ಕೆ.ಆರ್. ಆಸ್ಪತ್ರೆಯ ಸ್ಟಾಫ್ ನರ್ಸ್‌ಗಳು ನಮಗೆ ಸರಿಯಾದ ಸೌಲಭ್ಯ ನೀಡುತ್ತಿಲ್ಲ, ಕೊರೊನಾ ಪೀಡಿತರನ್ನು ನೋಡಿಕೊಳ್ಳುವ ವೇಳೆ ಯಾವುದೇ ರಕ್ಷಣೆ ಕವಚಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಸೋಮವಾರ ಪ್ರತಿಟನೆ ನಡೆಸಿದ ನರ್ಸ್‌ಗಳು ಸರ್ಕಾರ ನಮ್ಮ ಬೇಡಿಕೆಗೆ ಕೂಡಲೇ ಸ್ಪಂದಿಸಬೇಕು. ಆಸ್ಪತ್ರೆಯಲ್ಲಿ 150 ಸ್ಟಾಫ್ ನರ್ಸ್‌ಗಳು ಇದ್ದೇವೆ. ಕೊರೊನಾ ಶಂಕಿತ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೂ ಕ್ವಾರಂಟೈನ್‌ಗೆ ಅವಕಾಶ ಇಲ್ಲವಾಗಿದೆ. ನಿರಂತರ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹಾಕಲಾಗುತ್ತಿದೆ. ಅಲ್ಲದೇ ಆಡಳಿತ ಮಂಡಳಿ ಕೇವಲ 10 ಸಾವಿರ ವೇತನ ನೀಡಿ ಹೆಚ್ಚುವರಿ ಕೆಲಸ ಮಾಡಿಸಿಕೊಳ್ಳುತ್ತಿದೆ ಎಂದು ದೂರಿದರು.
ಯಾವುದೇ ಜೀವ ವಿಮೆ ಇಲ್ಲ. ಕೂಡಲೇ ಶಿಷ್ಯವೇತನ ಸ್ಪಾಪ್ ನರ್ಸ್‌ಗಳನ್ನು ಕಾಯಂಗೊಳಿಸಬೇಕು. ಜತೆಗೆ ಕಾಯಂ ನರ್ಸ್‌ಗಳಿಗೆ ನೀಡುತ್ತಿರುವ ಏಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಕೊರೊನಾ ಮಹಾಮಾರಿಯಂತ ಇಂಥ ಸಮಯದಲ್ಲಿ ನಮಗೆ ಸಮರ್ಪಕವಾಗಿ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.