NEWSದೇಶ-ವಿದೇಶ

ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ಹೊತ್ತು ಮಾಲೆಯಿಂದ ನಿರ್ಗಮಿಸಿತು INS ಜಲಶ್ವಾ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಸ್ವದೇಶಕ್ಕೆ ಕರೆತರುವ ಭಾರತೀಯ ನೌಕಾಪಡೆಯ ಸಮುದ್ರ ಸೇತು ಕಾರ್ಯಾಚರಣೆಯ ಭಾಗವಾಗಿ ನೌಕಾಪಡೆಯ ಹಡಗು ಜಲಶ್ವಾ, 588 ಭಾರತೀಯ ಪ್ರಜೆಗಳನ್ನು ಹೊತ್ತು ಮಾಲೆ ಬಂದರಿನಿಂದ  ಮೇ 15ರಂದು ನಿರ್ಗಮಿಸಿದೆ.  ಅದು 588 ಜನರನು ಹೊತ್ತು ತರುತ್ತಿದ್ದು ಅದರಲ್ಲಿ ಆರು ಗರ್ಭಿಣಿಯರು ಮತ್ತು 21 ಮಕ್ಕಳಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಮಾಲೆಯಲ್ಲಿ ಮಳೆ ಹಾಗೂ ಗಂಟೆಗೆ 30-40 ಮೈಲು ವೇಗದ ಬಿರುಗಾಳಿಯ ನಡುವೆಯೇ ಹಡಗಿನ ಸಿಬ್ಬಂದಿ ಪ್ರಯಾಣಿಕರಿಗೆ ವೈದ್ಯಕೀಯ ಶಿಷ್ಟಾಚಾರ ಮತ್ತು ಸುರಕ್ಷತಾ ಕ್ರಮಗಳು ಸೇರಿದಂತೆ ತಪಾಸಣೆ ಹಾಗೂ ಇನ್ನಿತರ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ ನಿರ್ಗಮನದ ಮುಂಚಿನ ಎಲ್ಲ ಅಗತ್ಯ ತಪಾಸಣಾ ಚಟುವಟಿಕೆಗಳನ್ನು ಹಡಗಿನಲ್ಲೇ ಕೈಗೊಳ್ಳಲಾಯಿತು. ಹಡಗು ಇಂದು ಮುಂಜಾನೆ ಮಾಲೆಯಿಂದ ಕೊಚ್ಚಿಯತ್ತ ಪ್ರಯಾಣ ಬೆಳೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

Leave a Reply