NEWSದೇಶ-ವಿದೇಶವಿಜ್ಞಾನ

ಕೋವಿಡ್-19 ಎದುರಿಸಲು ವಿಜ್ಞಾನಿಗಳಿಂದ ಸೋಂಕು ನಿವಾರಕ ಸಿಂಪಡಣಾಯಂತ್ರ ಅಭಿವೃದ್ಧಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ದುರ್ಗಾಪುರದ ಸಿಎಸ್ ಐ ಆರ್ –ಕೇಂದ್ರೀಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಸಿಎಂಇಆರ್ ಐ) ವಿಜ್ಞಾನಿಗಳು ಎರಡು ಸಂಚಾರಿ ಒಳಾಂಗಣ ಸೋಂಕು ನಿವಾರಕಾ ಸಿಂಪಡಣಾ ಯಂತ್ರಗಳ (ಸ್ಪ್ರೇಯರ್) ಘಟಕಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಘಟಕಗಳನ್ನು ಶುಚಿಗೊಳಿಸಲು ಮತ್ತು ವೈರಾಣುಗಳ ವಿರುದ್ಧ ಸೋಂಕು ನಿವಾರಣೆಗೆ ವಿಶೇಷವಾಗಿ ಆಸ್ಪತ್ರೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಸಂಸ್ಥೆಯ  ಪ್ರೊ. ಹರೀಶ್ ಹಿರಾನಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟರಿ ಆಧಾರಿತ ಸೋಂಕು ನಿವಾರಕಾ ಸಿಂಪಡಣಾ ಯಂತ್ರ (ಬಿಪಿಡಿಎಸ್) ಮತ್ತು ನ್ಯುಮ್ಯಾಟಿಕಲ್ ಆಪರೇಟೆಡ್ ಮೊಬೈಲ್ ಇಂಡೋರ್ ಡಿಸ್ಇನ್ಫೆಕ್ಷನ್(ಪಿಒಎಂಐಡಿ) ಎಂದು ಈ ಘಟಕಗಳನ್ನು ಕರೆಯಲಾಗುತ್ತಿದ್ದು, ಇವುಗಳನ್ನು ಪದೇ ಪದೇ ಬಳಸಬಹುದಾದಂತಹ ನೆಲದ ಮೇಲೆ ಸೋಂಕು ನಿವಾರಕಗೊಳಿಸಲು ಮತ್ತು ಶುಚಿಗೊಳಿಸಲು ಉಪಯೋಗಿಸಬಹುದು ಹಾಗೂ ಟೇಬಲ್, ಡೋರ್ ನಾಬ್ಸ್, ದೀಪದ ಸ್ವಿಚ್ಚುಗಳು, ಕೌಂಟರ್ ಟಾಪ್ ಗಳು, ಹ್ಯಾಂಡಲ್, ಡೆಸ್ಕ್, ಫೋನ್, ಕೀಬೋರ್ಡ್, ಶೌಚಾಲಯ, ನಲ್ಲಿಗಳು, ಸಿಂಕ್ ಮತ್ತು ಕಾರ್ಡ್ ಬೋರ್ಡ್ ಗಳನ್ನು ಶುಚಿ ಮತ್ತು ಸೋಂಕು ನಿವಾರಣೆ ಸಿಂಪಡಿಸಬಹುದಾಗಿದೆ. ಈ ಸೋಂಕು ನಿವಾರಕ ಘಟಕಗಳನ್ನು ನಿರಂತರವಾಗಿ ಬಳಕೆ ಮಾಡಬಹುದಾಗಿದ್ದು, ಇದರಿಂದ ಸೋಂಕಿತ ವ್ಯಕ್ತಿ ಏನಾದರು ಬಂದು ಇವುಗಳನ್ನು ಮುಟ್ಟಿದ್ದರೆ ಅಂತಹ ಸಂದರ್ಭಗಳಲ್ಲಿ ಕೊರೊನಾ ಸೋಂಕು ಜನರಿಗೆ ಹರಡುವ ಅಪಾಯವನ್ನು ತಗ್ಗಿಸುತ್ತದೆ ಎಂದುವಿವರಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

“ಸೋಂಕು ನಿವಾರಕದ ಕಣಗಳ ಗಾತ್ರ ಮತ್ತು ಸಂಖ್ಯೆ ಎರಡೂ ಕೂಡ ಪ್ರಮುಖ ಮಾನದಂಡಗಳಾಗಿದ್ದು, ಅವುಗಳು ಸೋಂಕು ನಿವಾರಕ ಸಿಂಪಡಣೆಯ ಪರಿಣಾಮವನ್ನು ನಿರ್ಧರಿಸುತ್ತವೆ. ಕೋವಿಡ್-19 ಹರಡದಂತೆ ತಡೆಯುವ ಪರಿಣಾಮಕಾರಿ ತಂತ್ರಜ್ಞಾನ ಅಭಿವೃದ್ಧಿಗೆ ಸಿಎಸ್ ಐಆರ್ –ಸಿಎಂಇಆರ್ ಐ ನಿರಂತರವಾಗಿ ಗಮನಹರಿಸುತ್ತಿದೆ. ಮುಂದಿನ ಹಂತದಲ್ಲಿ 360 ಡಿಗ್ರಿ ವ್ಯಾಪ್ತಿಯ ಸೋಂಕು ನಿವಾರಕಯಂತ್ರ ಅಭಿವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ. ಅವುಗಳನ್ನು ಶುಚಿಗೊಳಿಸುವ ಸಿಂಪಡಣಾ ಯಂತ್ರಗಳನ್ನಾಗಿ ರೂಪಿಸಿ, ಅವುಗಳನ್ನು ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಬಳಕೆ ಮಾಡಬಹುದಾಗಿದೆಎಂದು ಹೇಳಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಈ ಸಿಂಪಡಣಾ ಯಂತ್ರಗಳು ಸ್ವಚ್ಛಗೊಳಿಸಬಹುದಾದ ಅಂಶಗಳು ಹಾಗೂ ವಿಸ್ತರಿಸಬಹುದಾದ ತೋಳನ್ನು ಹೊಂದಿರಲಿದ್ದು, ಅವು ಗುಪ್ತ ಪ್ರದೇಶಗಳಿಗೆ ಸುಲಭವಾಗಿ ತಲುಪಲಿದೆ ಮತ್ತು ಸಮಗ್ರವಾಗಿ ಶುಚಿಗೊಳಿಸಲಿದೆ. ಸದ್ಯದ ಕೋವಿಡ್-19 ಬಿಕ್ಕಟ್ಟಿನ ನಂತರವೂ ಈ ತಂತ್ರಜ್ಞಾನದ ಪ್ರಸ್ತುತತೆ ಇರುತ್ತದೆ. ಏಕೆಂದರೆ ವೈರಾಣುಗಳು ಮುಂದುವರಿಯಲಿದ್ದು, ಜ್ವರದಂತಹ ಹಲವು ಬಗೆಯ ಪ್ರಕರಣಗಳು ಜಾಗತಿಕವಾಗಿ ಪ್ರತಿ ವರ್ಷ ಹರಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಪ್ರೊ. ಹರೀಶ್ ಹಿರಾನಿ ಅವರು, ಈ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಮುಂದಾಗುವಂತೆ ದೇಶದ ಎಂಎಸ್ಎಂಇಗಳಿಗೆ ಕರೆ ನೀಡಿದರು ಹಾಗೂ ಭವಿಷ್ಯದಲ್ಲಿ ಶುಚಿತ್ವ ಮತ್ತು ಆರೋಗ್ಯ ರಕ್ಷಣಾ ಉಪಕರಣಗಳ ಬೇಡಿಕೆಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

 

Leave a Reply

error: Content is protected !!
LATEST
ಸಾವಿರ ವರ್ಷಗಳ ಇತಿಹಾಸವಿರುವ ಈಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಚಾಲನೆ: ನೇಮಿರಾಜ್ ಕೃಷಿ ಸಚಿವರ ತವರು ನೆಲದಲ್ಲೇ ಕೊಬ್ಬರಿ ಮಾರಿದ ರೈತರ ಪರದಾಟ : ರೈತ ಸಂಘ ಕಿಡಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ ಪಿಂಚಣಿಗಾರರ ಬೃಹತ್ ಪ್ರತಿಭಟನೆ- ಆಕ್ರೋಶ ಮಳೆ ನೀರ ನೇರವಾಗಿ ಒಳಚರಂಡಿಗೆ ಬಿಡುವವರ ವಿರುದ್ಧ ಜಲಮಂಡಳಿ ಕ್ರಮಕ್ಕೆ ಆಕ್ಷೇಪ: ಡಿಸಿಎಂ ಡಿಕೆಶಿಗೆ ಎಎಪಿ ಬಹಿರಂಗ ಪತ್ರ ಕಿಟಕಿ ಮೂಲಕ ನುಸುಳಿ ಹಣ ದೋಚುತ್ತಿದ್ದ ಖತರ್ನಾಕ್‌ ಅಕ್ಕ-ತಮ್ಮ ಅಂದರ್‌ KSRTC: ನೌಕರರ ಸಮಸ್ಯೆ ನೀಗಿಸುವ ಸಮರ್ಥ ಪಡೆಯೂ ಇಲ್ಲ ಸಮರ್ಥ ನಾಯಕನೂ ಇಲ್ಲ! ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ ಮಹರ್ಷಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ: ಸಚಿವ ನಾಗೇಂದ್ರ ಸ್ಪಷ್... ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಮಂತ್ರಿಯ ಸಂಪುಟದಿಂದ ಕಿತ್ತುಹಾಕಿ: ಎಎಪಿ KKRTC: ಡಬಲ್ ಡ್ಯೂಟಿ, ದೂರದ ಪ್ರಯಾಣಕ್ಕೆ ವಿಶ್ರಾಂತಿ ಕಡ್ಡಾಯ ಆದರೆ ದೇವದುರ್ಗ ಘಟಕದ ನೌಕರರಿಗೆ ಮರೀಚಿಕೆ!