ನ್ಯೂಡೆಲ್ಲಿ: ಕೊರೊನಾ ಸೋಂಕು ತಗುಲಿರುವವರಿಗೆ ಖಾಸಗಿ ಆಸ್ಪತ್ರೆಗಳು ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಲು ಸಿದ್ದವಿದ್ದಾವೆಯೇ ಎಂದು ಆಸ್ಪತ್ರೆ ಆಡಳಿತ ಮಂಡಳಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಚಿಕಿತ್ಸಾ ವೆಚ್ಚ ಹೆಚ್ಚಿಸುವಂತೆ ಖಾಸಗಿ ಆಸ್ಪತ್ರೆಗಳು ಸರ್ಕಾರದ ಬೆನ್ನು ಬಿದ್ದಿರುವ ಹೊತ್ತಿನಲ್ಲೇ ಕೋರ್ಟ್ ಈ ಯೋಜನೆಯಡಿಯಲ್ಲಿ ನಿಗದಿ ಮಾಡಲಾದ ದರಗಳಲ್ಲೇ ಕೊರೊನಾ ಚಿಕಿತ್ಸೆ ನೀಡಲು ನೀವು ಸಿದ್ದರಿದ್ದೀರಾ ಎಂದು ಕೇಳಿದ್ದು, ಈ ಬಗ್ಗೆ ಎರಡು ವಾರ ಸಮಯ ತೆಗೆದುಕೊಂಡು ಉತ್ತರ ನೀಡಿ ಎಂದೂ ಸಲಹೆ ನೀಡಿದೆ.
ಶುಕ್ರವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವ ಪೀಠ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ಮೂಲಕ ಇಂತಹುದೊಂದು ಪ್ರಶ್ನೆ ಕೇಳಿದ್ದು, ಕೊರೊನಾ ಪೀಡಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಎಂದು ನಾವು ಕೇಳುತ್ತಿಲ್ಲ. ಆದರೆ ಆಯುಷ್ಮಾನ್ ಭಾರತ್ ಯೋಜನೆಯಡಿ ನಿಗದಿ ಮಾಡಲಾದ ದರದಲ್ಲೇ ನೀಡಲು ಸಾಧ್ಯವೇ ಎಂದು ಪೀಠ ಪ್ರಶ್ನಿಸಿದೆ.
ಈ ಬಗ್ಗೆ ವಿವರ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಎರಡು ವಾರಗಳ ಕಾಲ ಸಮಯಾವಕಾಶ ನೀಡಿ ವಿಚಾರಣೆಯನ್ನು ಎರಡು ವಾರಗಳು ಮುಂದೂಡಿದೆ.
ಇದಕ್ಕೂ ಮುನ್ನಾ ಸರ್ಕಾರ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬಡವರಿಗೆ ಸರ್ಕಾರಿ ಯೋಜನೆಗಳ ಮೂಲಕ ದುಬಾರಿ ಕೊರೊನಾ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಕೇಂದ್ರ ಸರ್ಕಾರ ಉತ್ತಮ ರೀತಿಯಲ್ಲಿ ಈ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದರು.
There’s сertainly a lott to learn abоut this issսe.
I love all the points you have made. https://qwertty.net/