ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಬೆಂಕಿಯಿಂದ ಸುಟ್ಟ ಸ್ಥಿತಿಯಲ್ಲಿ ಅನುಮಾನಾಷ್ಪದ ರೀತಿ ಗೃಹಿಣಿ ಮೃತಪಟ್ಟಿದ್ದು, ಇದು ಸಹಜ ಸಾವಲ್ಲ, ಕೊಲೆ ಎಂದು ಆಕೆ ಸಹೋದರ ಆರೋಪಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಲೂಕಿನ ಹಿಟ್ನಹಳ್ಳಿ ಗ್ರಾಮದ ಮಂಜು ಎಂಬುವವರ ಪತ್ನಿ ಸುನೀತಾ (20) ಮೃತರು. ನರಳಾಪುರ ಗ್ರಾಮದ ನಿವಾಸಿಯಾಗಿದ್ದು ಒಂದು ವರ್ಷದ ಹಿಂದಷ್ಟೇ ಹಿಟ್ನಹಳ್ಳಿ ಗ್ರಾಮದ ಮಂಜು ಎಂಬುವವರನ್ನು ವಿವಾಹವಾಗಿದ್ದರು.
ಮದುವೆಯ ಸಂದರ್ಭದಲ್ಲಿ 200 ಗ್ರಾಂ ಚಿನ್ನ, 3.2 ಲಕ್ಷ ರೂ. ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ ಗಂಡನ ಮನೆಯವರು ಮತ್ತೆಮತ್ತೆ ಹಣಕ್ಕಾಗಿ ಪೀಡಿಸಿ ಆಕೆಯನ್ನು ಬೆಂಕಿಗೆ ನೂಕಿ ಕೊಲೆ ಮಾಡಿದ್ದಾರೆ ಎಂದು ಸುನೀತಾಳ ತಮ್ಮ ಆರೋಪಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.