ವಿಜಯಪಥ ಸಮಗ್ರ ಸುದ್ದಿ
ಮುಂಬೈ: ಪತ್ನಿ ನಿತ್ಯ ಮಲಗುವಾಗ ಬಿಟ್ಟು ಎಲ್ಲಾ ಸಮಯದಲ್ಲೂ ತಂಬಾಕು ಜಗಿಯುತ್ತಾಳೆ ಎಂಬ ಕಾರಣ ನೀಡಿ ಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಆ ಅರ್ಜಿಯ ಪರಿಶೀಲನೆ ನಡೆಸಿದ ಬಾಂಬೆ ಹೈಕೋರ್ಟ್ ವಿಚ್ಛೇದನಕ್ಕೆ ಮಹಿಳೆ ತಂಬಾಕು ಅಗಿಯುತ್ತಾಳೆ ಎನ್ನುವ ಕಾರಣ ಸಾಕಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಮೂಲಕ ನಾಗ್ಪುರ ನಿವಾಸಿ ಒಬ್ಬರು ಸಲ್ಲಿಸಿದ ವಿವಾಹ ವಿಚ್ಛೇದನ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಎ.ಎಸ್.ಚಂದೂರ್ಕರ್ ಮತ್ತು ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರಿದ್ದ ವಿಭಾಗೀಯ ಪೀಠ 42 ವರ್ಷ ವಯಸ್ಸಿನ ದಂಪತಿ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿದೆ.
ತಂಬಾಕು ಜಗಿಯುವ ಅಭ್ಯಾಸಕ್ಕೆ ಸಂಬಂಧಿಸಿದಂತೆ ವಿಚ್ಛೇದನದ ಸುಗ್ರೀವಾಜ್ಞೆಯನ್ನು ನೀಡಲು ಬರುವುದಿಲ್ಲ ಎಂದು ನ್ಯಾಯಪೀಠ ಅರ್ಜಿಯನ್ನು ವಜಾಮಾಡಿದೆ. ಬೌದ್ಧ ವಿಧಿಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿ ಜೂನ್ 2003 ರಲ್ಲಿ ಈ ದಂಪತಿ ವಿವಾಹವಾಗಿದ್ದರು. ಅವರಿಗೆ ಓರ್ವ ಪುತ್ರಿ ಮತ್ತು ಪುತ್ರ ಇದ್ದಾರೆ.