ರಾಯಚೂರು: ತಾಲೂಕಿನ ಅರಸಿಗೇರಾ ಗ್ರಾಮದಲ್ಲಿ ಸಿಡಿಲು ಬಡಿದು ನಾಲ್ಕು ಜಾನುವಾರು ಮೃತಪಟ್ಟಿವೆ.
ಜಮೀನಿನಲ್ಲಿ ಜೋಪಡಿ ಹಾಕಿ ಅಲ್ಲಿಯೇ ಜಾನುವಾರುಗಳನ್ನು ಕಟ್ಟಿ ಹಾಕಲಾಗಿದ್ದ.ರೈತ ಶೇಖರಯ್ಯ ಎನ್ನುವವರಿಗೆ ಸೇರಿದ ಎರಡು ಎತ್ತು ಎರಡು ಹಸುಗಳು ಸಿಡಿಲಿಗೆ ಬಲಿಯಾಗಿವೆ. ಮಂಗಳವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಮಳೆಯಿಂದ ಇನ್ನು ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಜಾನುವಾರುಗಳು ಸಿಡಿಲಿಗೆ ಬಲಿಯಾಗಿರುವುದರಿಂದ ರೈತನ ಜೀವನಕ್ಕೆ ಆಸರೆಯಾಗಿದ್ದ ಜೀವಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗುವಂತೆ ಆಗಿದೆ.
ಇನ್ನು ರಾತ್ರಿ ಬೀಸಿದ ಭಾರಿ ಗಾಳಿಗೆ ಜಿಲ್ಲೆಯಲ್ಲಿ ಹಾನಿ ಸಂಭವಿಸಿದೆ. ನಗರದ ಇಂಜಿನಿಯರ್ ಕಾಲನಿಯಲ್ಲಿ ವಿದ್ಯುತ್ ವೈಯರ್‌ಗಳು ಒಂದಕ್ಕೊಂದು ತಾಗುಗೊಂಡು ತುಂಡಅಗಿ ಬಿದ್ದಿವೆ., ತಾಲೂಕಿನ ಶಕ್ತಿನಗರದ ಯಾದವ ಕಾಲೋನಿಯಲ್ಲಿ ಮರ ಗಿಡಗಳು ಧರೆಗುರುಳಿವೆ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚಿವೆ.ಇದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಪಟ್ಟಣದಲ್ಲೂ ಕರೆಂಟ್ ಕಟ್ಟಾಗಿದ್ದರಿಂದ ಸಮಸ್ಯೆಯೇ ಆಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail