ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆಗೆ ಇಳಿದಿದ್ದು, ಇದರ ಮಧ್ಯೆ ಬಸ್‌ಗಳನ್ನು ಬೆರಳೆಣಿಕೆಯ ಬಸ್‌ಗಳು ರಸ್ತೆಗೆ ಇಳಿದ್ದರಿಂದ ಬಸ್ ಕಿಟಕಿಯ ಗಾಜುಗಳು ಪುಡಿಪುಡಿಗಿರುವ ಮತ್ತು ಚಾಲಕರು ಗಾಯಗೊಂಡಿರುವ ಘಟನೆಗಳು ನಡೆದಿವೆ.
ಆನೇಕಲ್ ಬಳಿ ಬಿಎಸ್‌ಟಿಸಿ ಬಸ್ ಮೇಲೆ ಕಲ್ಲು ತೂರಿದ್ದು ಚಾಲಕನ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ರಾಮನಗರದಲ್ಲಿ ಸಂಚರಿಸುತ್ತಿದ್ದ ಬಸ್ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ. ಅದೇರೀತಿ ಕೋಲಾರದ ಬಂಗಾರಪೇಟೆಯಲ್ಲೂ ಬಸ್ ಮೇಲೆ ಕಲ್ಲು ತೂರಿ ಮುಂದಿನ ಗ್ಲಾಸ್ ಪುಡಿಪುಡಿ ಮಾಡಲಾಗಿದೆ.
ಕಲಬುರಗಿಯ ಕೋರ್ಟ್ ಬಳಿ ಕಲ್ಲು ತೂರಾಟ ಮಾಡಿದ್ದು ಬಸ್ ಜಖಂಗೊಂಡಿದೆ. ಇದನ್ನು ಪ್ರತಿಭಟನಾ ನಿರತರು ಮಾಡುತ್ತಿದ್ದಾರೋ ಇಲ್ಲ ಕಿಡಿಗೇಡಿಗಳು ಮಾಡುತ್ತಿದ್ದಾರೋ ಎಂಬುವುದು ಮಾತ್ರ ತಿಳಿದು ಬಂದಿಲ್ಲ. ಒಟ್ಟಾರೆ ಸಾರಿಗೆ ನೌಕರರ ಮುಷ್ಕರದಿಂದ ಕೆಲ ಅಹಿತಕರ ಘಟನೆಗಳು ನಡೆಯುತ್ತಿವೆ. ಇನ್ನೊಂದೆಡೆ ಕೆಲ ಆಟೋ ಚಾಲಕರು ಪ್ರಯಾಣಿಕರ ಜೇಬಿಗೆ ನೇರವಾಗಿಯೇ ಕತ್ತರಿಯಾಕುತ್ತಿದ್ದು, ದುಪ್ಪಟ್ಟು ವಸೂಲಿಗೆ ಇಳಿದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.
Horata shanthiyuthavagi nadeyali