NEWSಕೃಷಿನಮ್ಮರಾಜ್ಯ

ತೆಂಗಿನ ಬೆಳೆಯಲ್ಲಿ ರುಗೋಸ್ ಬಿಳಿನೋಣದ ನಿರ್ವಹಣೆಗೆ ಇಲ್ಲಿದೆ ಔಷಧ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಕೃಷಿಸುದ್ದಿ
ಹಾವೇರಿ: ತೆಂಗಿನ ಬೆಳೆಗೆ ಬಾಧಿಸುತ್ತಿರುವ ರುಗೋಸ್ ಬಿಳಿನೊಣ ಇತ್ತೀಚೆಗೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂದ್ರ ಪ್ರದೇಶ ರಾಜ್ಯಗಳಲ್ಲಿ ವರದಿಯಾಗಿದೆ. ಇದು ಹೊರದೇಶದ ಕೀಟವಾಗಿದ್ದು ಹೆಲಿಕೋನಿಯ, ಪೇರು, ಗೋರಂಟಿ, ಮಾವು, ಅಡಿಕೆ, ತಾಳೆ ಮರ, ಅಲಂಕಾರಿಕ ಗಿಡ ಮತ್ತು ಕೆಲವು ಹಣ್ಣಿನ ಗಿಡಗಳಿಗೂ ಬಾಧೆ ಮಾಡುತ್ತದೆ. ಆದರೆ ತೆಂಗು ಮತ್ತು ಬಾಳೆ ಬೆಳೆಗಳು ಅತೀ ಹೆಚ್ಚು ಬಾಧೆಗೊಳಗಾಗುವ ಬೆಳೆಗಳಾಗಿವೆ.

ಬಾಧೆಯ ಲಕ್ಷಣಗಳು: ತೆಂಗಿನಗಿಡದಲ್ಲಿ ಮರಿ ಹಾಗೂ ಪ್ರೌಢ ಬಿಳಿನೊಣಗಳು ಗುಂಪು ಗುಂಪಾಗಿ ಎಲೆಯ ಕೆಳಬಾಗದಲ್ಲಿ ಕೂತುರಸ ಹೀರುತ್ತವೆ. ಈ ಕೀಟಗಳು ಅಂಟಿನ ದ್ರವವನ್ನು ಸ್ರವಿಸುವುದರಿಂದ ಕಪ್ಪು ಶಿಲೀಂದ್ರದ ಬೆಳವಣಿಗೆಯಿಂದ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಡ್ಡಿ ಉಂಟಾಗಿ ಎಲೆಗಳು ಒಣಗುವುದನ್ನು ಕಾಣುತ್ತೇವೆ.

ರುಗೋಸ್ ಬಿಳಿನೊಣದ ಪ್ರೌಢ ಕೀಟವು ಇತರೆ ಸಾಮಾನ್ಯ ಬಿಳಿನೊಣಗಳಿಗಿಂತ ಮೂರು ಪಟ್ಟು ದೊಡ್ಡದಾಗಿರುತ್ತದೆ ಹಾಗೂ ಚಲನವಲನಗಳು ಮಂದಗತಿಯಲ್ಲಿರುತ್ತದೆ. ರುಗೋಸ್ ಹೆಣ್ಣು ಬಿಳಿನೊಣವು ಎಲೆಯ ಕೆಳಬಾಗದಲ್ಲಿ ವೃತ್ತಾಕಾರವಾಗಿ ಸುರುಳಿಯಾಕಾರವಾಗಿ ಮೊಟ್ಟೆಯನ್ನಿಡುವುದರಿಂದ ಇದಕ್ಕೆ ರುಗೋಸ್ ಸುರುಳಿ ಬಿಳಿನೊಣ ಎಂದು ಕರೆಯಲಾಗುತ್ತದೆ.

ತಾತ್ಕಾಲಿಕ ನಿರ್ವಹಣಾ ಕ್ರಮಗಳು: ಕೀಟನಾಶಕಗಳ ಸಿಂಪರಣೆ ಮಾಡಬಾರದು, ಎಲೆಗಳ ಮೇಲೆ 1% ಸ್ಟಾರ್ಚ್ (ಗಂಜಿ ತಿಳಿ) ಸಿಂಪರಣೆ ಮಾಡುವುದರಿಂದಕಪ್ಪು ಶಿಲೀಂದ್ರ ಉದುರಿ ಹೊಗುವುದು. ಕಾಂಡದ ಮೇಲೆ ಹಳದಿ ಅಂಟಿನ ಪಟ್ಟಿ ಹಚ್ಚುವುದು ಅಥವಾ ಹಳದಿ ಬಣ್ಣದ ಹಾಳೆಗೆ ಹರಳೆಣ್ಣೆ ಹಚ್ಚಿಕಾಂಡಕ್ಕೆ ಹಚ್ಚುವುದು ಹಾಗೂ ತೆಂಗಿನ ನರ್ಸರಿಗಳಲ್ಲಿ ಮಾತ್ರ ಇಮಿಡಾಕ್ಲೋಪ್ರಿಡ್ 0.2 ಮಿ.ಲೀ/ಲೀ ಅನ್ನು ಸಿಂಪಡಸಿ ರುಗೋಸ್ ಬಿಳಿ ನೊಣವನ್ನು ನಾಶಪಡಿಸಬಹುದು.

ತೋಟದ ಪರಿಸರದ ವ್ಯವಸ್ಥೆಯಲ್ಲಿ ಯಾವುದೇ ಕೀಟನಾಶಕಗಳನ್ನು ಸಿಂಪಡಿಸದೆ, ಪರಾವಲಂಬಿ ಜೀವಿ (ಎನ್ಕಾರ್ಶೀಯಾ ಗ್ವಾಡಿಲೋಪೆ) ಅಥವಾ ಇತರೆ ಪರಭಕ್ಷಕ ಕೀಟಗಳನ್ನು ಸಂರಕ್ಷಿಸಬೇಕು. ಬಾಧೆಯು ತೀವ್ರವಾದಲ್ಲಿ ಶೇ. 0.5% ಬೇವಿನ ಎಣ್ಣೆ ಪ್ರತೀ ಲೀಟರ್ ನೀರಿಗೆ ಮತ್ತು 10 ಗ್ರಾಂ ಸಾಬೂನು ಪುಡಿ (ಒಂದು ಟ್ಯಾಂಕಿಗೆ) ಬೆರಸಿ ಸಿಂಪಡಿಸಬೇಕು ಎಂದು ದೇವಿಹೊಸೂರು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿನಯಕುಮಾರ್ ಎಂ.ಎಂ.( 9164405294) ತಿಳಿಸಿದ್ದಾರೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್