NEWSದೇಶ-ವಿದೇಶರಾಜಕೀಯ

ಸರ್ಕಾರದ ರಹಸ್ಯ ಮಾಹಿತಿ ಸೋರಿಕೆ ಕ್ರಿಮಿನಲ್‌ ಅಪರಾಧ : ಮೋದಿ ವಿರುದ್ಧ ರಾಹುಲ್‌ ಕಿಡಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಸರ್ಕಾರದ ರಹಸ್ಯ ಮಾಹಿತಿಯನ್ನು ಪ್ರಧಾನಿಯೇ ಒಬ್ಬ ಪತ್ರಕರ್ತನಿಗೆ ನೀಡಿರುವುದು ಕ್ರಿಮಿನಲ್‌ ಅಪರಾಧ. ಹೀಗಾಗಿ ಈ ರಹಸ್ಯ ಮಾಹಿತಿಯನ್ನು ನೀಡಿರುವ ಹಾಗೂ ಪಡೆದಿರುವ ವ್ಯಕ್ತಿ ಗಳಿಬ್ಬರನ್ನೂ ಜೈಲಿಗೆ ಕಳಿಸಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮಾಹಿತಿ ಸೋರಿಕೆ ಹೇಗಾಯಿತು ಎಂಬ ಬಗ್ಗೆ ತನಿಖೆ ನಡೆಸಿ, ಮಾಹಿತಿ ನೀಡಿದ ಹಾಗೂ ಪಡೆದ ವ್ಯಕ್ತಿಗಳನ್ನು ಜೈಲಿಗೆ ಅಟ್ಟಬೇಕು. ಪ್ರಧಾನಿಯೇ ಈ ಪತ್ರಕರ್ತನಿಗೆ ಮಾಹಿತಿ ಕೊಟ್ಟಿರುವ ಸಾಧ್ಯತೆ ಇದೆ. ಹೀಗಾಗಿ ಈ ಕುರಿತು ತನಿಖೆ ನಡೆಯುವುದೇ ಇಲ್ಲ ಎಂದೂ ಆಪಾದಿಸಿದ್ದಾರೆ.

ಬಾಲಾಕೋಟ್‌ ಮೇಲೆ ನಡೆದ ವೈಮಾನಿಕ ದಾಳಿಗೂ ಮುನ್ನ ಈ ಮಾಹಿತಿಯನ್ನು ರಿಪಬ್ಲಿಕ್‌ ಟಿವಿ ಮುಖ್ಯ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರ ವಾಟ್ಸ್‌ಆ್ಯಪ್‌ ಚಾಟ್‌ನಲ್ಲಿ ಉಲ್ಲೇಖಿಸಲಾಗಿತ್ತು ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಈ ದಾಳಿ ಕುರಿತು ಅರ್ನಬ್ ಗೋಸ್ವಾಮಿಗೆ ಮುಂಚಿತವಾಗಿಯೇ ಮಾಹಿತಿ ಇತ್ತು ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

2019ರ ಫೆ. 26ರಂದು ಪಾಕಿ ಸ್ತಾನದ ಬಾಲಾಕೋಟ್‌ ಮೇಲೆ ಭಾರತ ವಾಯುದಾಳಿ ನಡೆಸಿತ್ತು. ಈ ದಾಳಿ ನಡೆಯುವುದಕ್ಕೂ ಕೆಲ ದಿನಗಳ ಮುಂಚೆ ರಿಪಬ್ಲಿಕ್‌ ಟಿವಿಯ ಮುಖ್ಯ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರು ಬಾರ್ಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ಥೋ ದಾಸ್‌ಗುಪ್ತಾ ಅವರೊಂದಿಗೆ ಚಾಟ್‌ ನಡೆಸಿದ್ದರು. ‍ಪಾಕಿಸ್ತಾನದ ಮೇಲೆ ಭಾರಿ ವೈಮಾನಿಕ ದಾಳಿ ನಡೆಯುವ ಕುರಿತು ಈ ಚಾಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು ಎನ್ನಲಾಗಿದೆ.

ವೈಮಾನಿಕ ದಾಳಿಯ ಬಗ್ಗೆ ಗೋಸ್ವಾಮಿಗೆ ಗೊತ್ತಿದ್ದಲ್ಲಿ ಹಾಗೂ ಈ ಬಗ್ಗೆ ಅವರು ವಾಟ್ಸ್‌ಆ್ಯಪ್‌ ಚಾಟ್‌ನಲ್ಲಿ ಪ್ರಸ್ತಾಪಿಸಿದ್ದು ನಿಜವೇ ಆಗಿದ್ದಲ್ಲಿ, ಈ ಮಾಹಿತಿ ಪಾಕಿಸ್ತಾನದವರಿಗೂ ಗೊತ್ತಿರುತ್ತದೆ. ಹೀಗಾಗಿ ಇದು ಕ್ರಿಮಿನಲ್‌ ಅಪರಾಧವಾಗುವ ಕಾರಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇವರು ತಮ್ಮನ್ನು ತಾವು ದೇಶ ಪ್ರೇಮಿಗಳು ಎಂದು ಕರೆದುಕೊಳ್ಳುತ್ತಾರೆ. ಆದರೆ, ದೇಶದ ವಾಯುಪಡೆಯನ್ನು ಅಪಾಯಕ್ಕೆ ಸಿಲುಕಿಸುವುದು, ವೈಮಾನಿಕ ದಾಳಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ದೇಶಪ್ರೇಮವಾಗದು ಎಂದು ಕಿಡಿಕಾರಿದ್ದಾರೆ.

ಇನ್ನು  ಪ್ರಧಾನಿ, ರಕ್ಷಣಾ ಮಂತ್ರಿ, ಗೃಹ ಸಚಿವ, ವಾಯುಪಡೆ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಮಾತ್ರ ಈ ವೈಮಾನಿಕ ದಾಳಿ ಕುರಿತ ಮಾಹಿತಿ ಇರುತ್ತದೆ. ಕಾರ್ಯಾಚರಣೆ ನಡೆಸುವ ಪೈಲಟ್‌ಗೂ ಈ ಬಗ್ಗೆ ಮಾಹಿತಿ ನೀಡಲಾಗುವುದಿಲ್ಲ. ಆದರೆ, ಈ ಐದು ಜನರ ಪೈಕಿಯೇ ಒಬ್ಬರು ಈ ಪತ್ರಕರ್ತನಿಗೆ ಮಾಹಿತಿ ನೀಡಿರಲು ಸಾಧ್ಯ ಎಂದು ಆರೋಪಿಸಿದರು.

 

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ