ಬೆಂಗಳೂರು: ಏಪ್ರಿಲ್ 29ರಿಂದ ಚಂದನ ವಾಹಿನಿಯಲ್ಲಿ ಆರಂಭಿಸಲಾಗಿರುವ ಎಸ್ ಎಸ್ ಎಲ್ ಸಿ ಪುನರ್ಮನನ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿಯೂ ಸಹ ಮೇ 9ರಿಂದ ಪ್ರಾರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಆರಂಭಿಸಲಾಗಿರುವ ಪುನರ್ಮನನ ತರಗತಿಗಳನ್ನು ರಾಜ್ಯದ ವಿದ್ಯಾರ್ಥಿ ಸಮೂಹ ಬೃಹತ್ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿದ್ದು, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೂ ಉಪಯೋಗವಾಗುವಂತೆ ಪುನರ್ಮನನ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಮುಂದಿನ 30 ದಿನಗಳ ಅವಧಿಯಲ್ಲಿ ಮೊದಲ 16 ದಿನ ಗಣಿತ ಹಾಗೂ ವಿಜ್ಞಾನ, ನಂತರದ 10 ದಿನ ಸಮಾಜ ವಿಜ್ಞಾನ ತರಗತಿಗಳನ್ನುಆಂಗ್ಲಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ಸಮಾಜ ವಿಜ್ಞಾನ ಬೋಧನೆ ಪೂರ್ಣಗೊಂಡ ಬಳಿಕ 6 ದಿನಗಳ ಕಾಲ ಹಿಂದಿ, ಸಂಸ್ಕೃತ ಹಾಗೂ ಉರ್ದು ಮೊದಲ ಭಾಷೆಗಳ ತರಗತಿಗಳನ್ನೂ ಸಹ ಬೋಧಿಸಲಾಗುವುದು ಎಂದು ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇ 9ರಿಂದ ಪ್ರತಿದಿನ ಬೆಳಗ್ಗೆ 9.30ರಿಂದ 11ಗಂಟೆವರೆಗೆ ಚಂದನ ವಾಹಿನಿಯಲ್ಲಿ ಈ ತರಗತಿಗಳು ಪ್ರಸಾರವಾಗುವುದಿದ್ದು, ಈ ತರಗತಿಗಳ ಮುದ್ರಿತ ಭಾಗವನ್ನು ಮಕ್ಕಳ ವಾಣಿ ಯೂ-ಟ್ಯೂಬ್ ವಾಹಿನಿಯಲ್ಲೂ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail