Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

ಬೇಡಿಕೆ ಈಡೇರಿಸದೆ ಮುಷ್ಕರ ಹತ್ತಿಕ್ಕಲು ಹೊಂಚುಹಾಕಿದರೆ ರಸ್ತೆಗಿಳಿಯಲ್ಲಿದ್ದಾರೆ 10ಲಕ್ಷ ಮಂದಿ: ಸರ್ಕಾರಕ್ಕೆ ನೌಕರರ ಕುಟುಂಬಗಳ ಎಚ್ಚರಿಕೆ

ಸಾರಿಗೆ ಸಚಿವರೇ ನೀಡಿದ ಭರವಸೆ ಈಡೇರಿಸದೇ ಮಾತು ತಪ್ಪುತ್ತಿದ್ದಾರೆ * ಒಂದೊಂದು ತೊಟ್ಟು ವಿಷ ಕೊಟ್ಟುಬಿಡಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸರ್ಕಾರ ಪರ ಕೆಲ ಕನ್ನಡ ದೃಶ್ಯ ಸುದ್ದಿ ಮಾಧ್ಯಮಗಳು ನಿಂತು ಸಾರಿಗೆ ನೌಕರರ ಹೋರಾಟವನ್ನು ಹತ್ತಿಕ್ಕುವ ರೀತಿ ಸುದ್ದಿ ಪ್ರಸಾರ ಮಾಡುತ್ತಿವೆ. ಹೀಗಾಗಿ ಅಂತ ಮಾಧ್ಯಮಗಳನ್ನು ನೋಡದೆ ನ್ಯಾಯಯುತವಾಗಿ ಇರುವ ಸಮಸ್ಯೆ ಬಿಂಬಿಸುವಂತ ದೃಶ್ಯ ಮಾಧ್ಯಮಗಳನ್ನು ನೋಡಿ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳು ನೌಕರರಿಗೆ ಮನವಿ ಮಾಡಿದ್ದಾರೆ.

ಜತೆಗೆ ನಮ್ಮ ಹೋರಾಟ ಅಚಲವಾಗಿದೆ. ನಮ್ಮ ಬೇಡಿಕೆ ಈಡೇರುವವರಗೂ ನಾವು ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್‌ ಪಡೆಯುವುದಿಲ್ಲ.  ಕೆಲ ಮಾಧ್ಯಮಗಳಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯುತ್ತಿವೆ. ಸಂಜೆಯೊಳಗೆ ಇನಷ್ಟು ಬಸ್‌ಗಳು ರಸ್ತೆಗಿಳಿಯಲಿವೆ ಎಂದು ಸುಳ್ಳು ಸುತ್ತಿದ್ದಿಯನ್ನು ಹರಿಯಬಿಡುತ್ತಿವೆ. ಇದಕ್ಕೆ ನೌಕರರು ಗೊಂದಲಕ್ಕೆ ಒಳಗಾಗುವುದು ಬೇಡ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದು ಹೇಳಿದ್ದಾರೆ.

ಸಾರಿಗೆ ನೌಕರರ ಕುಟುಂಬದಿಂದ ಪ್ರತಿಭಟನೆ: https://fb.watch/4Ko46To5Oy/

ಇನ್ನು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ನಾವು ಅವರನ್ನು ಮಾತುಕತೆಗೆ ಕರಿಯುವುದಿಲ್ಲ ಬೇಕಿದ್ದರೆ ಅವರೇ ಬರಲಿ ಎಂದು. ನಾವು ಹೇಳುತ್ತಿದ್ದೇವೆ ನಾವು ಅವರ ಬಳಿ ಮಾತುಕತೆಗೆ ಹೋಗಲು ಸಿದ್ಧವಿದ್ದೇವೆ ಆದರೆ ಸಿಎಂ ಒಂದು ರೀತಿಯ ಮೊಂಡುತನ ಪ್ರದರ್ಶಿಸಿ ರಾಜ್ಯದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಹೀಗಾಗಿ ನಾವು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ನೌಕರರಿಗೆ ಮಾನಸಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಒಕ್ಕೂಟದ ಪದಾಧಿಕಾರಿಗಳು ಮಾಡುತ್ತಿದ್ದಾರೆ.

ಸಾರಿಗೆ ನೌಕರರಲ್ಲಿ ಇರುವ ಗೊಂದಲ ನಿವಾರಣೆಗೆಗಾಗಿ ಫೇಸ್‌ಬುಕ್‌ ಪೇಜ್‌ನಲ್ಲಿ ಲೈವ್‌ವಾಗಿ ಬಂದು ಹೋರಾಟದ ಹಿನ್ನೆಲೆಯನ್ನು ವಿವರಿಸುತ್ತಿದ್ದಾರೆ. ಜತೆಗೆ ತಮಗೆ ಆಗುತ್ತಿರುವ ತೊಂದರೆ ಸಮಸ್ಯೆಯನ್ನು ಜನರ ಮುಂದಿಡುತ್ತಿದ್ದಾರೆ.

ಸಾರಿಗೆ ಸಚಿವರೇ ನೀಡಿದ ಭರವಸೆ ಈಡೇರಿಸದೇ ಮಾತು ತಪ್ಪುತ್ತಿದ್ದಾರೆ
ನಾವು ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಾಗ ಅದು ಸಾಧ್ಯವಿಲ್ಲ. ಹೀಗೆ ಮಾಡಿದರೆ ಬೇರೆ ನಿಗಮಗಳು ನಮ್ಮನ್ನೂ ಮಾಡಿ ಎಂದು ಬರುತ್ತವೆ. ಹೀಗಾಗಿ ನಿಮಗೆ 6ನೇ ವೇತನ ಆಯೋಗ ಜಾರಿ ಮಾಡಿ ಸರ್ಕಾರಿ ನೌಕರರಂತೆ ವೇತನಕೊಡುತ್ತೇವೆ ಎಂದು ಹೇಳಿದರು. ಆದ್ರೆ ಕೊಟ್ಟ ಮಾತಿಗೆ ತಪ್ಪಿದ ಸಚಿವ ಈಗ ಅದೂ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ.

ಅಂದರೆ ನೀವು ಕೊಟ್ಟ ಮಾತನ್ನು ತಪ್ಪುವಲ್ಲಿ ನಿಪುಣರು, ನಿಮಗೆ ಒಂದು ನಾಲಿಗೆ ಇಲ್ಲ ಎಂಬುದನ್ನು ತೋರಿಸುತ್ತಿದ್ದೀರಿ ಅಲ್ವ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟಾದರೂ ಸಿಎಂ ಯಡಿಯೂರಪ್ಪ ಅವರು ಕೂಡ ಒಂದು ರೀತಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ನೌಕರರು ಕಿಡಿಕಾರುತ್ತಿದ್ದಾರೆ.

ಒಂದೊಂದು ತೊಟ್ಟು ವಿಷ ಕೊಟ್ಟುಬಿಡಿ
ಒಂದು ಕಡೆ ಸಾರ್ವಜನಿಕರಿಗೆ ತುಂಬ ತೊದರೆ ಆಗುತ್ತಿದೆ. ಇತ್ತ ನಮಗೆ ಅರ್ಧ ಹೊಟ್ಟೆ ತುಂಬುವಂತೆ ಮಾಡುತ್ತಿದ್ದಾರೆ. ಈ ನೌಕರಿಯನ್ನೇ ನಂಬಿರುವ ನಾವು ಕುಟುಂಬ ನಿರ್ವಾಹಣೆ ಮಾಡಲು ಆಗುತ್ತಿಲ್ಲ. ಹೀಗಾಗಿ ನಮ್ಮ 1.30 ಲಕ್ಷ ನೌಕರರ ಮತ್ತು ಕುಟುಂಬಕ್ಕೆ ಒಂದೊಂದು ತೊಟ್ಟು ವಿಷ ಕೊಟ್ಟುಬಿಡಿ ಎಂದು ಮನವಿ ಮಾಡುತ್ತಿದ್ದಾರೆ.

ಇಷ್ಟಾದರೂ ಸರ್ಕಾರ ತನ್ನ ಹಠಮಾರಿ ಧೋರಣೆ ಮುಂದುವರಿಸಿರುವುದು, ಒಂದು ರೀತಿ ಭಂಡತನ ಪ್ರದರ್ಶಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಕೆಲ ನೌಕರರನ್ನು ಬೆದರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡುತ್ತಿದೆ. ಇದು ಸರಿಯಲ್ಲ ನೀವು ಹೀಗೆ ನಡೆದುಕೊಂಡರೆ 1.30 ಲಕ್ಷ ನೌಕರರು ಮತ್ತು ಕುಟುಂಬದವರು ಅಂದರೆ ಸರಿ ಸುಮಾರು 10ಲಕ್ಷ ಮಂದಿ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

Leave a Reply

error: Content is protected !!
LATEST
ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್ ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ