Please assign a menu to the primary menu location under menu

NEWSನಮ್ಮರಾಜ್ಯಸಿನಿಪಥ

ಹೆಸರು ಬದಲಿಸಿಕೊಳ್ಳಲು ಮುಂದಾದ ಕ್ರೇಜಿಸ್ಟಾರ್‌ ರವಿಚಂದ್ರನ್​

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹುಟ್ಟಿದಾಗಿನಿಂದ ಬಂದಿರುವ ಹೆಸರನ್ನು ಈಗ ಬದಲಿಸಿಕೊಳ್ಳಲು ವಿ.ರವಿಚಂದ್ರನ್​ ನಿರ್ಧಾರ ಮಾಡಿದ್ದಾರೆ.

ಚಿತ್ರರಂಗಕ್ಕೆ ಹೊಸದಾಗಿ ಬರುವವರು ಹೆಸರು ಬದಲಾವಣೆ ಮಾಡಿಕೊಳ್ಳುವುದು ಸಹಜ. ಆದರೆ ಇಷ್ಟು ವರ್ಷಗಳ ಬಳಿಕ ಈಗ ರವಿಚಂದ್ರನ್​ ಯಾಕೆ ಹೆಸರು ಬದಲಾಯಿಸಿಕೊಳ್ಳುತ್ತಾರೆ? ಆ ಪ್ರಶ್ನೆಗೆ ಉತ್ತರವೂ ಇಲ್ಲಿದೆ..

ರವಿಚಂದ್ರನ್​ ಎಂಬ ಒಂದೇ ಒಂದು ಹೆಸರಿಗೆ ದೊಡ್ಡ ಶಕ್ತಿ ಇದೆ. ಚಿತ್ರರಂಗದಲ್ಲಿ ಹಲವು ದಶಕಗಳಿಂದ ಪಟ್ಟ ಶ್ರಮದಿಂದಾಗಿ ಅವರ ಹೆಸರಿಗೆ ಶಕ್ತಿ ಬಂದಿದೆ. ಆದರೆ ಈಗ ಅವರು ಆ ಹೆಸರನ್ನೇ ಬದಲಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಇದು ಗಾಸಿಪ್​ ಅಲ್ಲವೇ ಅಲ್ಲ. ಸ್ವತಃ ರವಿಚಂದ್ರನ್​ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್​ ಬದಲಿಗೆ ರವಿಚಂದ್ರ ವಿ. ಎಂದು ಬದಲಿಸಿಕೊಳ್ಳುವಂತೆ ಅವರಿಗೆ ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಹೆಸರನ್ನು ಬಲಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹೊಸದಾಗಿ ಒಬ್ಬರು ಜ್ಯೋತಿಷಿ ಬಂದರು. ಒಂದೇ ಒಂದು ಅಕ್ಷರವನ್ನು ಹಿಂದೆ-ಮುಂದೆ ಮಾಡಿಕೊಳ್ಳುತ್ತೀರಾ ಎಂದು ಕೇಳಿದರು. ಯಾಕೆ ಎಂದೆ. ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದರು. ಆದರೆ ಎಲ್ಲರೂ ನನ್ನನ್ನು ರವಿಚಂದ್ರನ್​ ಅಂತಾನೇ ಕರೆಯುವುದು. ಈಗ ಯಾರು ಹೊಸದಾಗಿ ರವಿಚಂದ್ರ ವಿ. ಅಂತ ಕರೀತಾರೆ?

ಯಾರೂ ಕರೆಯುವುದಿಲ್ಲ ಎಂದಮೇಲೆ ಏನು ಪ್ರಯೋಜನ? ಇತ್ಯಾದಿ ಪ್ರಶ್ನೆ ನನ್ನದು. ಅವರು ನನ್ನಿಂದ ಹಣ ನಿರೀಕ್ಷಿಸಿಲ್ಲ. ಪ್ರೀತಿಯಿಂದ ಬಂದು ಹೇಳಿದರು. ಸರಿ ಎಂದೆ. ಈಗ ಅವರು ರವಿಚಂದ್ರ ವಿ. ಅಂತ ಹೆಸರು ಬದಲಾಯಿಸಿದ್ದಾರೆ ಎಂದು ಕ್ರೇಜಿ ಸ್ಟಾರ್​ ಹೇಳಿದ್ದಾರೆ.

ಇನ್ನು ನಂತರದ ದಿನಗಳಲ್ಲಿ ರವಿಚಂದ್ರನ್​ ಬದಲಿಗೆ ರವಿಚಂದ್ರ ವಿ. ಎಂದೆ ಅಭಿಮಾನಗಳು ಕರೆಯಬೇಕಿದೆ. ಇದರಿಂದ ಅವರ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದರೆ  ಅಭಿಮಾನಿಗಳು ಖಷಿ ಪಡುತ್ತಾರೆ ಅಲ್ಲವೇ.

Editordev
the authorEditordev

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...