ಕರ್ನಾಟಕದ ವೀರ ಪರಂಪರೆಗೆ ಹೆಗ್ಗುರುತು ಮಾಜಿ ಪ್ರಧಾನಿ ಎಚ್‌ಡಿಡಿಗೆ ಜನ್ಮದಿನದ ಶುಭಾಶಗಳ ಮಹಾಪೂರ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಶೂನ್ಯದಿಂದ ಮೇಲೆದ್ದು ಬರುವ, ಕನ್ನಡದ ನೆಲದಿಂದ ವಿಶಾಲ ರಾಷ್ಟ್ರ ಆಳುವ, ಕನ್ನಡ, ಕರ್ನಾಟಕಕ್ಕಾಗಿ ಬೆಟ್ಟದಂತೆ ನಿಲ್ಲುವ ಕರ್ನಾಟಕದ ವೀರ ಪರಂಪರೆಗೆ ಹೆಗ್ಗುರುತಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ 89ನೇ ಜನ್ಮದಿನದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.
ಉದ್ಯಮಿಗಳು, ರಾಜಕಾರಣಿಗಳು ಮತ್ತು ನಾಡಿನ ಸಮಸ್ತ ಜನತೆ ಮಾಜಿ ಪ್ರಧಾನಿಗಳಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದು, ಇನ್ನೂ ನೂರಾರು ಕಾಲ ನಾಡಿನ ಏಳಿಗೆ ಶ್ರಮಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಗಣ್ಯರ ಶುಭಾಶಯಗಳು
ಹಿರಿಯರು ಮತ್ತು ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶೂನ್ಯದಿಂದ ಮೇಲೆದ್ದು ಬರುವ, ಕನ್ನಡದ ನೆಲದಿಂದ ವಿಶಾಲ ರಾಷ್ಟ್ರ ಆಳುವ, ಕನ್ನಡ, ಕರ್ನಾಟಕಕ್ಕಾಗಿ ಬೆಟ್ಟದಂತೆ ನಿಲ್ಲುವ ಕರ್ನಾಟಕದ ವೀರ ಪರಂಪರೆಗೆ ಹೆಗ್ಗುರುತಾಗಿರುವ ಮಾಜಿ ಪ್ರಧಾನಿಗಳಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಅಪಾರ ಅನುಭವ ನಮಗೆ ಸದಾ ದಾರಿ ದೀಪ. ನಿಮ್ಮ ಅಚಲ ಆತ್ಮವಿಶ್ವಾಸ ನಮಗೆ ಪ್ರೇರಣದಾಯಕ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕ ದೇವೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಆಯುಷ್ಯ, ಆರೋಗ್ಯ ನಿಮ್ಮದಾಗಲಿ. ರಾಜ್ಯ ಮತ್ತು ದೇಶಕ್ಕೆ ನಿಮ್ಮ ಅನುಭವದ ಮಾರ್ಗದರ್ಶನ ಸದಾ ಸಿಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ.
ಮಾಜಿ ಪ್ರಧಾನಿಗಳು ಹಾಗೂ ರಾಷ್ಟ್ರ ಕಂಡ ಹಿರಿಯ ರಾಜಕಾರಣಿಗಳಾದ ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆಯಸ್ಸು ಮತ್ತು ಉತ್ತಮ ಆರೋಗ್ಯ ನಿಮ್ಮದಾಗಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.