NEWSನಮ್ಮರಾಜ್ಯಸಿನಿಪಥ

ಕೊರೊನಾ ಸಂಕಷ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಸಿನಿಮಾ ಸ್ಟಾರ‍್ಸ್‌ !: ಉಪ್ಪಿ, ಅಪ್ಪು, ಶಿವಣ್ಣ ರಾಗಿಣಿ ಮಾಡುತ್ತಿರುವುದೇನು?

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಿನಿಮಾ ರಂಗದಲ್ಲಿ ಜನರಿಂದಲೇ ಸ್ಟಾರ್‌ಗಿರಿ ಪಡೆದುಕೊಂಡ ನಟರು, ಈಗ ಅದೇ ಜನರ ಸಂಕಷ್ಟಕ್ಕೆ ಸ್ಪಂದಿಸಲೇ ಬೇಕಾದ ಕಾಲ ಎದುರಾಗಿದೆ. ಅದಕ್ಕೆ ಮಾನಸಿಕವಾಗಿ ಹಲವು ಸ್ಟಾರ್ ನಟ, ನಟಿಯರು ಈಗಾಗಲೇ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಪರೋಕ್ಷವಾಗಿ ಇನ್ನೂ ಜಾಣಕುರುಡು ಪ್ರದರ್ಶಿಸುತ್ತಿರುವ ಒಂದಷ್ಟು ಸ್ಟಾರ್‌ಗಳ ಕಣ್ತೆರೆಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.

ಹೌದು! ಕೇವಲ ಪ್ರತಿಭೆಯೊಂದರಿಂದಲೇ ಸ್ಟಾರ್‌ ಪಟ್ಟ ಪಡೆದುಕೊಂಡವರು ವಿರಳ. ಆದರೆ, ಜನರಿಂದ.. ಪ್ರೇಕ್ಷಕರಿಂದ ಇಂದು ಸ್ಟಾರ್‌ ಅನ್ನಿಸಿಕೊಂಡವರು ಹಲವರು. ಇದೆಲ್ಲ ಪಕ್ಕಕ್ಕೆ ಸರಿಸಿ ಬಿಡೋಣ, ಬಿಡಿ.

ಕೊರೊನಾ ಸಂಕಷ್ಟದಲ್ಲಿ ಚಂದನವನದ ತಾರೆಯರ ಹೃದಯ ಮಿಡಿದಿದ್ದರು, ಕಷ್ಟಕ್ಕೆ ಸಲುಕಿರುವ ಹಲವರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಹೌದುರಿ.. ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಸ್ಥಗಿತ ಗೊಂಡು ಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರು ಹಾಗೂ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲಾಗದೆ ಕಂಗಾಲಾಗಿರುವ ರೈತರ ನೆರವಿಗೆ ರಿಯಲ್ ಸ್ಟಾರ್ ಉಪೇಂದ್ರ ಧಾವಿಸಿದ್ದು, ರೈತರು ಬೆಳೆಗಳಿಗೆ ಸೂಕ್ತ ಬೆಲೆ ಕೊಟ್ಟು ಅವರಿಂದಲೇ ಖರೀದಿಸಿ ಅದನ್ನು ದಿನಸಿ ಕಿಟ್ ರೂಪದಲ್ಲಿ ಕಾರ್ಮಿಕರಿಗೆ ಕೊಡಲು ಮುಂದಾಗಿದ್ದು, ರೈತರು ಮೊ. ನಂ:    ವಾಟ್ಸ್ ಆ್ಯಪ್ +919845763396 ರ ಮೂಲಕ ಸಂಪರ್ಕಿಸಬಹುದು ಎಂದು ಟ್ವೀಟ್ ಮಾಡಿದ್ದರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಿಎಂ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದರೆ, ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಕೊರೊನಾ ಮೊದಲ ಅಲೆ ವೇಳೆ ಎನ್ ಜಿಒದೊಂದಿಗೆ ಕೈಜೋಡಿಸಿ ಸಿನಿಮಾ ಕಾರ್ಮಿಕರು ಹಾಗೂ ಜನರಿಗೆ ಆಹಾರ ಪೂರೈಕೆ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಂಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ನವರಸನಾಯಕ ಜಗ್ಗೇಶ್ ಸೇರಿದಂತೆ ಹಲವು ಕಲಾವಿದರು ಜನರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ.

ಇನ್ನು ನಟಿ ರಾಗಣಿ ಕೂಡ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದು, ಹಸಿದವರಿಗೆ ಅನ್ನ ನೀಡಿದರೆ, ಕಾಮಿಡಿ ನಟ ಚಿಕ್ಕಣ್ಣ ಮೈಸೂರಿನಲ್ಲಿರುವ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಮೊಗ್ಗಿನ ಮನಸ್ಸಿನ ನಟಿ ಶುಭಾಪೂಂಜಾ ಕೂಡ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದು ಇವರ ಹೃದಯ ವೈಶಾಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಜತೆಗೆ ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಆಗಿರುವುದನ್ನು ಅರಿತು ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಪ್ಪ ಅವರು ತಮ್ಮ ಭುವನ್ ಪೊನ್ನಪ್ಪ ಫೌಂಡೇಶನ್ ವತಿಯಿಂದ 30ಕ್ಕೂ ಹೆಚ್ಚು ಆಟೋಗಳನ್ನು ಆಕ್ಸಿಜನ್ ಆಂಬುಲೆನ್ಸ್ ರೀತಿ ಪರಿವರ್ತನೆ ಮಾಡಿರುವುದಲ್ಲದೆ ಜನರಿಗೆ ರೇಷನ್ ಕಿಟ್ ಹಾಗೂ ರೋಗಿಗಳಿಗೆ ಔಷಧ ವ್ಯವಸ್ಥೆ ಮಾಡಿದ್ದಾರೆ. ಈ ಹಿಂದೆ ಕೊಡಗು, ಉತ್ತರ ಕರ್ನಾಟಕದ ಲ್ಲಿ ಪ್ರವಾಹ ಉಂಟಾದಾಗಲೂ ನಿರಾಶ್ರಿತರಿಗೆ ನೆರವು ನೀಡಿದ್ದರು.

ಕೆಜಿಎಫ್ ನಿರ್ಮಾಪಕ ವಿಜಯ್ ಕಿರಂಗದೂರು ಮಂಡ್ಯದಲ್ಲಿ 50 ಐಸಿಯು ಬೆಡ್ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ ಅವರು ಸಮಾನ ಮನಸ್ಕರೊಂದಿಗೆ ಕೂಡಿಕೊಂಡು ಉಸಿರು ತಂಡ ಸ್ಥಾಪಿಸಿ ಆಕ್ಸಿಜನ್ ಪೂರೈಕೆ ಮಾಡಲು ಮುಂದಾಗಿದ್ದಾರೆ.

ಕೊರೊನಾ ನಿರಾಶ್ರಿತರ ಪಾಲಿನ ದೇವರೇ ಆಗಿದ್ದಾರೆ
ತೆರೆ ಮೇಲೆ ವಿಲನ್ ಆಗಿರುವ ನಟ ಸೋನು ಸೂದ್ ಕೊರೊನಾ ನಿರಾಶ್ರಿತರ ಪಾಲಿನ ದೇವರೇ ಆಗಿದ್ದಾರೆ. ಕೊರೊನಾ ಲಾಕ್ ಡೌನ್ ವೇಳೆ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದವರ ನೆರವಿಗೆ ಧಾವಿಸಿದ ಸೂದ್ ಸ್ವಂತ ಖರ್ಚಿನಲ್ಲಿ ವಿಮಾನ, ರೈಲು, ಬಸ್‌ಗಳ ಮೂಲಕ ಊರುಗಳಿಗೆ ಕಳುಹಿಸಿ ಕೊಟ್ಟರು. ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ತಮ್ಮ ಒಡೆತನದ ಬಹುಮಹಡಿ ಕಟ್ಟಡವನ್ನೇ ಮೀಸಲಿಟ್ಟಿದ್ದರು. ಸೂದ್ ಇಂಡಿಯಾ ಫೈಟ್ಸ್ ವಿತ್ ಕೋವಿಡ್ ಎಂಬ ಆಪ್ ಆರಂಭಿಸಿದ್ದು, ಅಗತ್ಯ ವಿರುವವರಿಗೆ ಆಸ್ಪತ್ರೆಯಲ್ಲಿ ಬೆಡ್, ಔಷಧ, ಆಕ್ಸಿಜನ್ ವ್ಯವಸ್ಥೆ ಮಾಡುತ್ತಿರುವುದಲ್ಲದೆ ಬ್ಲಡ್ ಬ್ಯಾಂಕ್ ಸ್ಥಾಪಿಸಿರುವ ಸೂದ್ ಅದರ ಮೂಲಕ ರಕ್ತ ಪೂರೈಕೆ ಮಾಡುತ್ತಿದ್ದಾರೆ.

ವಿಕ್ಕಿಕೌಶಲ್ 1 ಕೋಟಿ ರೂ.ದೇಣಿಗೆ ನೀಡಿದರೆ, ಸುನೀಲ್ ಶೆಟ್ಟಿ ಮಿಷನ್ ಮಿಲನ್ ಏರ್ ಮೂಲಕ ಆಕ್ಸಿಜನ್ ಕಂಟೈನರ್ ಪೂರೈಕೆ ಮಾಡಿದ್ದಾರೆ. ನಟಿ ಶ್ರದ್ಧಾಕಪೂರ್ ಪ್ಲಾಸ್ಮಾ ದಾನ ಮಾಡಿದರೆ, ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜತೆ ಕೈಜೋಡಿಸಿ ಕೊರೊನಾ ನಿಧಿ ಪರಿಹಾರ ಅಭಿಯಾನ ಆರಂಭಿಸಿದ್ದಾರೆ. ಪ್ರಿಯಾಂಕ ಚೋಪ್ರಾ, ಅಲಿಯಾ ಭಟ್, ಭೂಮಿ ಪಡ್ನೇಕರ್, ಊರ್ವಶಿರೌಟೇಲಾ, ಶಿಲ್ಪಾ ಶೆಟ್ಟಿ ಅವರು ಹಸಿದವರಿಗೆ ಊಟ, ದಿನಸಿ ಸಾಮಾಗ್ರಿ ಪೂರೈಕೆ ಮಾಡುತ್ತಿದ್ದಾರೆ.

ವೈಶಾಲತೆಯ ಬಿಗ್‌ಬಿ!
ಸಮಾಜ ಸೇವೆಯಲ್ಲಿ ಸದಾ ಮುಂದಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕೊರೊನಾ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ ನೀಡಿರುವುದಲ್ಲದೆ, ಪೋಲೆಂಡ್ ನಿಂದ 50 ಆಕ್ಸಿಜನ್ ಸಾಂದ್ರಕ , 20 ವೆಂಟಿಲೇಟರ್ ಖರೀದಿಸಿ ಆಸ್ಪತ್ರೆಗಳಿಗೆ ವಿತರಿಸಿದ್ದಾರೆ.

ಕೊರೊನಾ ಮೊದಲ ಅಲೆಯ ಲಾಕ್ ಡೌನ್ ವೇಳೆ 5000 ಕಾರ್ಮಿಕರಿಗೆ ಉಚಿತವಾಗಿ 1 ತಿಂಗಳ ಕಾಲ ಆಹಾರ ಅಭಿಯಾನ ಆರಂಭಿಸಿದ್ದ ಬಿಗ್ ಬಿ 2800 ಕಾರ್ಮಿಕರು ಊರಿಗೆ ತೆರಳಲು ರೈಲು, 3 ಇಂಡಿಗೋ ವಿಮಾನದ ವ್ಯವಸ್ಥೆ ಮಾಡಿದ್ದರಲ್ಲದೆ,1500 ರೈತರ ಸಾಲವನ್ನು ತೀರಿಸಿದ್ದಾರೆ.

ಇನ್ನು ಅಕ್ಷಯ್ ಕುಮಾರ್ ಪಿಎಂ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿರುವುದಲ್ಲದೆ,1000 ಆಕ್ಸಿಜನ್ ಕಂಟೈನರ್, 5000 ನಸಲ್ ಕನ್ಸಲ್ ವ್ಯವಸ್ಥೆ ಮಾಡಿದ್ದಾರೆ. ಬ್ಯಾಡ್ ಬಾಯ್ ಸಲ್ಮಾನ್ ಖಾನ್ 2500 ಸಿನಿಮಾ ಕಾರ್ಮಿಕರಿಗೆ ತಲಾ 1500 ರೂ. ಪರಿಹಾರ ಧನ ನೀಡಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...