Vijayapatha – ವಿಜಯಪಥ
Saturday, November 2, 2024
NEWSನಮ್ಮರಾಜ್ಯ

ಅಧಿಕಾರಿಗಳ ದರ್ಪ, ಯೂನಿಯನ್‌ಗಳ ಗೊಂದಲ, ಸ್ವಪ್ರತಿಷ್ಠೆಗೆ ಬಲಿಯಾಗುತ್ತಿರುವುದು ಸಾರಿಗೆ ನೌಕರರು

55 ವರ್ಷ ವಯಸ್ಸಾಗಿದ್ದೆ ತಪ್ಪಾ l ವಜಾಗೊಂಡ ಹಿರಿಯ ನೌಕರರ ಕಿಡಿನುಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅಥವಾ ಸರ್ಕಾರವೇ ಭರವಸೆಕೊಟ್ಟಂತೆ 6ನೇ ವೇತನ ಆಯೋಗ ಜಾರಿಯಾಗಬೇಕು ಎಂಬ ಪ್ರಮುಖ ಬೇಡಿಕೆಯ ಜೊತೆಗೆ ಇತರ ಕೆಲವೊಂದು ಬೇಡಿಕೆಗಳನ್ನು ಇಟ್ಟುಕೊಂಡು ಸಾರಿಗೆ ನೌಕರರು ಕಳೆದ ಏಪ್ರಿಲ್‌ನಲ್ಲಿ ಹಮ್ಮಿಕೊಂಡಿದ್ದ ಮುಷ್ಕರದ ವೇಳೆ ಅಧಿಕಾರಿಗಳು ದರ್ಪ ಮೆರೆದು ಕಾರ್ಮಿಕಾ ಕಾನೂನನ್ನೇ ಉಲ್ಲಂಘಿಸಿ ವಜಾ, ವರ್ಗಾವಣೆ ಮತ್ತು ಅಮಾನತಿನ ಶಿಕ್ಷೆ ನೀಡಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇತ್ತ ಯೂನಿಯನ್‌ಗಳ ಗೊಂದಲ, ಸ್ವಪ್ರತಿಷ್ಠೆಗೆ ನೌಕರರ ಪರ ನಿಲ್ಲಬೇಕಾದ ಸಂಘಟನೆಗಳ ಪದಾಧಿಕಾರಿಗಳು ಸಾರಿಗೆ ನೌಕರರನ್ನು ಬೀದಿಗಿಳಿಸಿ ಏನು ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಇದರಿಂದ ಕಳೆದ ಏಪ್ರಿಲ್‌ನಲ್ಲಿ ವಜಾಗೊಂಡ 2170 ಮಂದಿ ನೌಕರರು ಇನ್ನೂ ಕೆಲಸಕ್ಕೆ ಮರು ನಿಯೋಜನೆಯಾಗದೆ ಒಂದು ರೀತಿ ಸಮಸ್ಯೆಗೆ ಸಿಲುಕಿದ್ದಾರೆ.

ಇನ್ನು ಕಾರ್ಮಿಕ ಕಾನೂನಿನ ಉಲ್ಲಂಘನೆಯಾಗಿರುವುದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದರೂ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಬದಲಿಗೆ ಅವರನ್ನೇ ರಕ್ಷಿಸಲು ಕಾರ್ಮಿಕ ಇಲಾಖೆ ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಇನ್ನು ಯಾವ ಮಾನದಂಡದ ಮೇಲೆ ಸಾರಿಗೆ ಅಧಿಕಾರಿಗಳು ವಜಾ ಮಾಡಿದ್ದಾರೆ ಎಂಬುವುದಕ್ಕೆ ತಕ್ಕುದಾದ ದಾಖಲೆಗಳನ್ನು ಕೊಡುವುದರಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅಂದರೆ 55 ವರ್ಷ ಮೇಲ್ಪಟ್ಟ ಚಾಲಕ ಮತ್ತು ನಿರ್ವಾಹಕರನ್ನು ವಜಾ ಮಾಡಿದ್ದಾರೆ. ಜತೆಗೆ ತಮಗೆ ನಿಷ್ಠೆಯಿಂದ (ಬಕೆಟ್‌ ಹಿಡಿದಿಲ್ಲ) ನಡೆದುಕೊಂಡಿಲ್ಲ ಎಂದು ಇನ್ನು ಹಲವು ಕಾರ್ಮಿಕರನ್ನು ವಜಾ ಮಾಡಿದ್ದಾರೆ. ಆದರೆ, ವಜಾ ಮಾಡಿರುವುದಕ್ಕೆ ಸಮಂಜಸವಾದ ದಾಖಲೆ ಕೊಟ್ಟಿಲ್ಲ. ಹೀಗೆ ಉದಾಸೀತೆಯಿಂದ ಅಧಿಕಾರಿಗಳು ನಡೆದುಕೊಂಡಿದ್ದಾರೆ.

ಇನ್ನು ಸಬೂಬು ಹೇಳಿಕೊಂಡೇ ಸಾರಿಗೆ ಸಚಿವರ ದಾರಿ ತಪ್ಪಿಸುತ್ತಿರುವ ಅಧಿಕಾರಿಗಳು ಈಗ ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವ ಬದಲಿಗೆ ವಜಾಗೊಂಡಿರುವ ನೌಕರರು ಕೋರ್ಟ್‌ ಮೂಲಕವೇ ಮರು ನಿಯೋಜನೆಯಾಗಲಿ ಎಂದು ಸಚಿವರಿಗೆ ಕಾನೂನು ಹೀಗಿದೆ ಹಾಗಿದೆ ಎಂದು ಭಯ ಹುಟ್ಟಿರುವ ಮೂಲಕ ತಾವು ಪಾರಾಗಲು ವಾಮ ಮಾರ್ಗ ಹಿಡಿದಿದ್ದಾರೆ.

ಅಂದರೆ ಇಲ್ಲಿ ಕೋರ್ಟ್‌ ತೀರ್ಪುಬಂದು ನೌಕರರು ಮರು ನಿಯೋಜನೆಯಾಗಲು ವರ್ಷಗಟ್ಟಲೆ ತೆಗೆದುಕೊಳ್ಳುತ್ತದೆ. ಅಷ್ಟರಲ್ಲಿ ನಾವು ಬೇರೆಡೆಗೆ ವರ್ಗಾವಣೆಯಾಗಿರುತ್ತೇವೆ. ಇದರಿಂದ ಮುಂದೆ ಬರುವ ಅಧಿಕಾರಿ ಕೋರ್ಟ್‌ಗೆ ಉತ್ತರದಾಯಿ ಆಗುತ್ತಾರೆ ಎಂಬ ಲೆಕ್ಕಚಾರದಲ್ಲಿ ಅಮಾಯಕ ನೌಕರರನ್ನು ಬಲಿಕೊಡುತ್ತಿದ್ದಾರೆ ಈ ನೀಚ ಅಧಿಕಾರಿಗಳು.

ಇಂಥ ಅಧಿಕಾರಿಗಳ ಮಾತನ್ನೇ ನಂಬಿಕೊಂಡು ನೌಕರರಿಗೆ ಅನ್ಯಾಯ ಮಾಡುವ ನಿಟ್ಟಿನಲ್ಲಿ ಈಗ ಸಾರಿಗೆ ಸಚಿವ ಕಲಿಯುಗದ ಶ್ರೀರಾಮುಲು ಹೊರಟಂತೆ ಕಾಣುತ್ತಿದೆ. ಕಾರಣ ಇವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ ಈಗಾಗಲೇ ವಜಾಗೊಂಡಿರುವ ಎಲ್ಲ ನೌಕರರು ಮರು ನಿಯೋಜನೆಗೊಂಡು ಎರಡು ತಿಂಗಳು ಕಳೆದಿರಬೇಕಿತ್ತು. ಆದರೆ ಆ ಮಾತನ್ನು ಉಳಿಸಿಕೊಳ್ಳದೆ ಈಗ ನೌಕರರು ಎಲ್ಲಿ ಬಂದು ನಮ್ಮನ್ನು ಕೇಳುತ್ತಾರೊ ಎಂಬ ಭಯದಲ್ಲಿ ಬಳ್ಳಾರಿಯಲ್ಲೇ ಠಿಕಾಣಿ ಹೂಡಿದ್ದಾರೆ.

ಇತ್ತ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ನೌಕರರನ್ನು ಸಚಿವರ ಈ ನಡೆಯಿಂದ ಇನ್ನಷ್ಟು ಕಾಡುತ್ತಿದ್ದಾರೆ. ಅಂದರೆ ತಿಂಗಳು ಪೂರ್ತಿ ದುಡಿಸರೂ ಪೂರ್ಣ ಪ್ರಮಾಣದಲ್ಲಿ ವೇತನ ನೀಡದೆ ತಮಗೆ ಇಷ್ಟ ಬಂದಾಗ ಅರ್ಧವೇತನ ಹಾಕುವುದು. ಸಂಸ್ಥೆ ನಷ್ಟದಲ್ಲಿದೆ ಎಂದು ಹೇಳಿ ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ.

ಈ ರೀತಿ ಸಂಸ್ಥೆಗೆ ಮತ್ತು ನೌಕರರಿಗೆ ವಂಚನೆ ಎಸಗುತ್ತಿರುವ ಕೆಲ ಅಧಿಕಾರಿಗಳು ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಇದು ಈಗಿನ ಸಚಿವರಿಗೇನು ಗೊತ್ತಿಲ್ಲ ಎಂದಲ್ಲ. ಅದು ತಿಳಿದಿದ್ದರೂ ಅವರು ಅಧಿಕಾರಿಗಳು ಎಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ. ಈ ಸಚಿವ ಸ್ಥಾನವೇ ನನಗೆ ಬೇಡ ಎಂದು ಕೈ ಚೆಲ್ಲಿ ಕುಳಿತ್ತಂತೆ ನಡೆದುಕೊಳ್ಳತ್ತಿದ್ದಾರೆ.

ಒಂದು ಕಡೆ ಅಧಿಕಾರಿಗಳ ದರ್ಪ ಇನ್ನೊಂದು ಕಡೆ ಯೂನಿಯನ್‌ಗಳ ಗೊಂದಲ, ಸ್ವಪ್ರತಿಷ್ಠೆ ಮಗದೊಂದುಕಡೆ ಸಚಿವರ ನಿರಾಸಕ್ತಿ. ಇದರಿಂದ ನಾವು ಕೂಡ ಕೆಲಸಕ್ಕೆ ಸರಿಸಮಾನವಾದ ವೇತನ ಪಡೆಯುತ್ತೇವೆ ಎಂದು ಬೀದಿಗಿಳಿದ ನೌಕರರು ಈಗ ಬೀದಿಯಲ್ಲೇ ನಿಲ್ಲುವಂತಾಗಿ. ಇನ್ನಾದರೂ ಸಂಬಂಧಪಟ್ಟ ಯೂನಿಯನ್‌ಗಳು ಸ್ವಪ್ರತಿಷ್ಠೆ ಬದಿಗೊತ್ತಿಲ್ಲ ನೌಕರರ ಸಮಸ್ಯೆಗೆ ಹೆಗಲುಕೊಟ್ಟು ನಿಲ್ಲಬೇಕಿದೆ.

ಈ ಮೂಲಕ ಭ್ರಷ್ಟ, ದರ್ಪ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ. ಇಲ್ಲದಿದ್ದರೆ ನಾವು ಸಾರಿಗೆ ಯೂನಿಯನ್‌ಗಳು ಎಂದು ಹೇಳಿಕೊಳ್ಳದೆ ತಮ್ಮ ಯೂನಿಯನ್‌ಗಳನ್ನು ವಿಸರ್ಜಿಸಬೇಕಿದೆ.

ಇನ್ನು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿತ ನೌಕರರು ಏಪ್ರಿಲ್‌ನಲ್ಲಿ ಒಳ್ಳೆ ಹೋರಾಟವನ್ನೇ ಮಾಡಿದರು. ಆದರೆ ಕೆಲವರ ಸ್ವಪ್ರತಿಷ್ಠೆಯಿಂದ ಆ ಒಗ್ಗಟ್ಟು ಸ್ವಲ್ಪ ಛಿದ್ರವಾಗಿದೆ. ಆದರೆ ಇನ್ನೂ ಮುರಿದಿಲ್ಲ. ಈಗಲೂ ಎಲ್ಲರೂ ಒಂದಾಗಿ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ಹೋರಾಟಕ್ಕೆ ದುಮುಕುವ ಮೂಲಕ ಸರ್ಕಾರಕ್ಕೆ ಮತ್ತು ದರ್ಪದಿಂದ ಮೆರೆಯುತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.

1 Comment

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ