Vijayapatha – ವಿಜಯಪಥ
Friday, November 1, 2024
NEWSನಮ್ಮರಾಜ್ಯ

ಸಾರಿಗೆ ನೌಕರರಿಗಾಗಿರುವ ಅನ್ಯಾಯದ ವಿರುದ್ಧ ನಾಳೆ-ಸೆ.20ರಂದು ಸಿಐಟಿಯು ಪ್ರತಿಭಟನಾ ಧರಣಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮುಷ್ಕರದ ವೇಳೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಮಾಡಿರುವ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್‌ ಪ್ರಕರಣಗಳನ್ನು ವಾಪಸ್‌ ಪಡೆಯಲು ಒತ್ತಾಯಿಸಿ ಸೆ.20 ರಂದು ಒಂದುದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌.ಮಂಜುನಾಥ್ ತಿಳಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ನಾಳೆ (ಸೆ.20) ಬಳಗ್ಗೆ 10ಗಂಟೆಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ (ಫ್ರೀಡಂ ಪಾರ್ಕ್‌)  ಧರಣಿ ಹಮ್ಮಿಕೊಂಡಿದ್ದು ನೌಕರರು ಸೇರಿದಂತೆ ಸಾರಿಗೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಸೆ. 13ರಂದು ನಡೆದ ಸಭೆಯಲ್ಲಿ ನೌಕರರು ಯಾರು ಭಯಪಡುವ ಅಗತ್ಯವಿಲ್ಲ. ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ಳತ್ತಾರೆ ಎಂಬ ವಿಶ್ವಾಸ ನಮಗಿದೆ. ಹೀಗಾಗಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ನಾವು ಕೂಡ ಸಚಿವರ ಮೇಲೆ ವಿಶ್ವಾಸವಿಟ್ಟು ಸೆ.20ರವರೆಗೂ ನಮ್ಮ ಹೋರಾಟವನ್ನು ಮುಂದೂಡೋಣ ಎಂಬ ನಿರ್ಧಾರ ತೆಗೆದುಕೊಂಡಿದ್ದವು. ಆದರೆ ಸಚಿವರು ಇನ್ನು ಪೂರ್ಣ ಪ್ರಮಾಣದಲ್ಲಿ ನಿರ್ಧಾರ ತೆಗೆದುಕೊಳ್ಳದಿರುವುದರಿಂದ ನಾಳೆಯ ಧರಣಿ ಅನಿವಾಗಿದೆ ಎಂದು ತಿಳಿಸಿದರು.

ನಾವು ಯಾವುದೇ ಸರ್ಕಾರ ಆಡಳಿತದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ನಮ್ಮ ನೆರವಿಗೆ ಬಂದಿರುವ ಸಿಐಟಿಯು ಸಂಘಟನೆಗೆ ಎಲ್ಲರೂ ಬೆಂಬಲಿಸುವುದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ ಎಂಬುದು ನಿಮ್ಮಗೆ ತಿಳಿದಿರಲಿ. ಇದನ್ನು ನಿಮ್ಮ ಎಲ್ಲ ಸ್ನೇಹಿತರಿಗೂ ತಿಳಿಸಿ ಹೋರಾಟಕ್ಕೆ ಬೆಂಬಲಿಸಿ ಎಂದು ಸಭೆ ಸೇರಿದ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಒಕ್ಕೊರಲಿನಿಂದ ತೀರ್ಮಾನಿಸಿದ್ದರು.

ಕರಾರಸಾರಿಗೆ ನಿಗಮಗಳಲ್ಲಿ ಏಪ್ರಿಲ್- 2021ರ ಮುಷ್ಕರದ ವೇಳೆಯಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದ ಘಟಕದಿಂದ ದೂರದ ವಿಭಾಗಕ್ಕೆ ಆ ವಿಭಾಗದಲ್ಲಿ ಯಾವ ಡಿಪೋ ದೂರವೋ ಅಂತಹ ಘಟಕಗಳಿಗೆ ಸಾವಿರಾರು ನೌಕರರನ್ನು ವರ್ಗಾವಣೆ ಮಾಡಿದರು.

ಇಂತಹ ಕಿರುಕುಳಗಳ ವರ್ಗಾವಣೆಯಿಂದ ಸಾರಿಗೆ ನಿಗಮಗಳು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶಕ್ಕೆ ಪೂರಕವಾಗಿಲ್ಲ. ಚಾಲಕ- ನಿರ್ವಾಹಕ- ತಾಂತ್ರಿಕ ಮತ್ತು ಇತರ ಆಡಳಿತ ಸಿಬ್ಬಂದಿ ತಮ್ಮ ಕುಟುಂಬಗಳು ಒಂದು ಕಡೆ ಅವರು ಇನ್ನೊಂದು ಕಡೆ ಇದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಿಗೆ ಗುರಿಯಾಗಬೇಕಾಗುತ್ತದೆ.

ಸಾವಿರಾರು ನೌಕರರನ್ನು ಕಿರುಕುಳಗಳ ವರ್ಗಾವಣೆಗೆ ಗುರಿಪಡಿಸಲಾಗಿದೆ. ಆದ್ದರಿಂದ ಇಂತಹ ಸೇಡಿನ ಕ್ರಮ ಹಾಗೂ ಬಲಿಪಶು ಮಾಡುವ ವರ್ಗಾವಣೆಗಳನ್ನು ರದ್ದುಮಾಡಿ ಎಲ್ಲ ಕಾರ್ಮಿಕರನ್ನು ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಪೋಗಳಿಗೆ ವಾಪಸ್‌ ತರಬೇಕೆಂದು ಸರ್ಕಾರ ಮತ್ತು ಆಡಳಿತ ವರ್ಗಗಳಿಗೆ ಕಳೆದ 5 ತಿಂಗಳಿಗಳಿಂದ ಮನವಿ ಸಲ್ಲಿಸುತ್ತ ಬರಲಾಗಿತ್ತು.

ಆಡಳಿತ ವರ್ಗಗಳು ಮೊದಲ ಸಲ ಸುಮಾರು ಕಾರ್ಮಿಕರನ್ನು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಡಿಪೋಗಳಿಗೆ ವಾಪಸ್‌ ತಂದರು. ಇಂತಹ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಈಗ ಸೆ.14, 16 ರಂದು ಆಡಳಿತ ವರ್ಗ ಆದೇಶ ಮಾಡಿ ಕೆಲವು ನೌಕರರನ್ನು ಹಿಂದೆ ಕೆಲಸ ನಿರ್ವಹಿಸುತ್ತಿದ್ದ ವಿಭಾಗಗಳಿಗೆ ಕೋರಿಕೆ ಮೇರೆಗೆ ಎಂದು ವರ್ಗಾವಣೆ ಮಾಡಿದ್ದಾರೆ‌. ಇದು ಸಹ ಅನ್ಯಾಯದ ಕ್ರಮವಾಗಿದೆ ಎಂದು ಹೇಳಿದರು.

ಕೋರಿಕೆ ಮೇಲೆ ಎಂದು ಪರಿಗಣಿಸಿದರೆ ಕಾರ್ಮಿಕರು ಬಡ್ತಿ ಜೇಷ್ಠತೆಯನ್ನು ಕಳೆದು ಕೊಳ್ಳಬೇಕಾಗುತ್ತದೆ. ಸಾರಿಗೆ ಕಾರ್ಮಿಕರು ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಅವರಿಗೆ ಒಂದು ವರ್ಷದ ಸೇವೆಯೂ ಸಹ ಅತೀ ಮುಖ್ಯ. ಸಾವಿರಾರು ಕಾರ್ಮಿಕರು ಹತ್ತಾರು ವರ್ಷಗಳು ಸೇವೆ ಸಲ್ಲಿಸಿದ್ದವರು ಇದ್ದಾರೆ.

ಆದ್ದರಿಂದ ಸಾರಿಗೆಯ 4 ನಿಗಮಗಳು ಮಷ್ಕರದ ವೇಳೆಯಲ್ಲಿ ಮಾಡಿರುವ ಕಿರುಕುಳ ಮತ್ತು ಬಲಿಪಶು ಮಾಡುವ ಉದ್ದೇಶದಿಂದ ವರ್ಗಾವಣೆ ಮಾಡಿದ್ದ ಎಲ್ಲ ಕಾರ್ಮಿಕರನ್ನು ಆಡಳಿತಾತ್ಮಕ ವರ್ಗಾವಣೆ ಎಂದು ಪರಿಗಣಿಸಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಘಟಕಗಳು/ ಸ್ಥಳಗಳಿಗೆ ನಿಯೋಜಿಸಬೇಕೆಂದು ಸಿಐಟಿಯು ಫೆಡರೇಶನ್ ಅಧ್ಯಕ್ಷ ಎಚ್‌.ಡಿ. ರೇವಪ್ಪ ಒತ್ತಾಯಿಸಿದ್ದಾರೆ.

ಇನ್ನು ಪುನಃ ಕಿರುಕುಳ ಮತ್ತು ಭ್ರಷ್ಟಾಚಾರದ ಆಡಳಿತಕ್ಕೆ ಅನುವು ಮಾಡಿಕೊಟ್ಟಂತೆ ಆಗುತ್ತದೆ. ಆದ್ದರಿಂದ ಸಾರಿಗೆ ಸಚಿವರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸೆ.14 ಮತ್ತು 16ರ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಹಾಗೂ ಮುಷ್ಕರದ ವೇಳೆ ಮಾಡಿದ್ದ ಎಲ್ಲ ನೌಕರರನ್ನು ಅವರು ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಪೋಗಳಿಗೆ ನಿಯೋಜನೆ ಮಾಡಬೇಕೆಂದು ಆಗ್ರಹಿಸಿ ಸೆ.20 ರಂದು ಧರಣಿ ಮಾಡುತ್ತಿರುವುದಾಗಿ ಸಿಐಟಿಯು ಫೆಡರೇಶನ್ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ತಿಳಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ