ಬೆಂಗಳೂರು: ಸಾರಿಗೆ ಸಂಸ್ಥೆಗಳಲ್ಲಿ ವಜಾ ಶಿಕ್ಷೆಗೆ ಒಳಗಾಗಿರುವ ಬಹುತೇಕ ನೌಕರರು ಸುಮಾರು 5 – 6 ತಿಂಗಳು ಸಂಬಳ ಇಲ್ಲದೇ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಾರೆ. ಆದ್ದರಿಂದ ಈಗ ಕೆಲಸದಲ್ಲಿ ಇರುವ ನೌಕರರು ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಮುಂದಾಗಬೇಕಿದೆ.
ಇಲ್ಲಿ ನೀವು ಯಾವುದೇ ಸಂಘಟನೆಗಳ ಮರ್ಜಿಗೆ ಒಳಗಾಗದೇ ನಿಮ್ಮ ಕಾರ್ಮಿಕ ಸಹೋದ್ಯೋಗಿಗಳಿಗಾಗಿ ಅವರ ಪರ ಪ್ರತ್ಯಕ್ಷವಾಗಿಯಾದರೂ ಸರಿ ಇಲ್ಲ ಪರೋಕ್ಷವಾಗಿಯಾದರೂ ಸರಿ ಅವರನ್ನು ಆರ್ಥಿಕವಾಗಿ ಸುಧಾರಿಸುವತ್ತ ಗಮನಹರಿಸಬೇಕಾದ ಅವಶ್ಯಕತೆ ಬಹಳವಿದೆ.
ಇನ್ನು ನಿಮ್ಮೆಲ್ಲರ ಹಿತಕ್ಕಾಗಿ ಹೋರಾಟದ ವೇಳೆ ಹಲವು ನೌಕರರು ತಮ್ಮದಲ್ಲದ ತಪ್ಪಿಗಾಗಿ ಸಂಸ್ಥೆಯಿಂದ ಶಿಕ್ಷೆ ಅನುಭವಿಸುತ್ತಿದ್ದು, ಜೀವನದ ಬಂಡಿಯನ್ನು ಎಳೆಯಲು ಸಾಧ್ಯವಾಗದೆ ಪ್ರಾಣಕಳೆದುಕೊಳ್ಳುವತ್ತ ಯೋಚಿಸುತ್ತಿದ್ದಾರೆ. ಹೀಗಾಗಿ ಅವರಿಗೆ ನಿಮ್ಮ ಸಹಾಯ ಬಹಳವಿದೆ.
ಒಳರಾಜಕೀಯ ಮಾಡಿಕೊಂಡು ನೌಕರರನ್ನು ಸಮಸ್ಯೆಗೆ ದೂಡುವ ಕೆಲಸ ಮಾಡಬಾರದು. ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕಾನೂನಾತ್ಮಕ ಹೊರಾಟಕ್ಕೆ ನೌಕರರ ಪರ ಸಂಸ್ಥೆಯ ಸಂಘಟನೆಗಳು ನಿಲ್ಲಬೇಕಿದೆ.
ಇನ್ನು ಸಹಾಯ ಮಾಡುವ ಮನಸ್ಸಿನಿಂದ ಸಹೃದಯಿ ಕೆಲಸದಲ್ಲಿರುವ ನೌಕರರು ಸಹಾಯ ಹಸ್ತ ನೀಡಲು ಮುಂದೆ ಬಂದರೆ ಅದು ನಿಮ್ಮೆಲ್ಲ ಕಾರ್ಮಿಕ ಒಗ್ಗಟ್ಟನ್ನು ತೋರಿಸುತ್ತದೆ.
ನಿಮ್ಮ ಹೋರಾಟಕ್ಕೆ ಮುಂದೊಂದು ದಿನ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ. ಹೀಗಾಗಿ ಯಾರು ಖಿನ್ನತೆಗೆ ಒಳಗಾಗದೇ ಜೀವನವನ್ನು ಧೈರ್ಯದಿಂದ ಸಾಗಿಸಲು ಮುಂದಾಗಬೇಕಿದೆ.
ಇನ್ನು ಭಯಗೊಂಡು ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಂಡರೆ ನಿಮ್ಮ ಕುಟುಂಬಗಳ ಗತಿಯೇನು ಎಂಬುದನ್ನು ನೌಕರರು ಯೋಚಿಸಬೇಕಿದೆ. ಅಂದರೆ, ಸಾವೇ ಎಲ್ಲದಕ್ಕೂ ಪರಿಹಾರವಲ್ಲ. ಪ್ರಕೃತಿ ಕೊಟ್ಟಿರುವ ಮಾನವ ಜೀವನವನ್ನು ಸಾರ್ಥಕವಾಗಿಸುವ ನಿಟ್ಟಿನಲ್ಲಿ ಸಾಗಿಸೋಣ.
ನಡೆಯುವವರು ಎಡವಿ ಬೀಳದೆ ಕುಳಿತಿರುವವರು ಎಡವಿ ಬೀಳಲು ಸಾಧ್ಯವೆ. ಇದನ್ನು ಅರಿತು ಜೀವನವನ್ನು ಸಾಗಿಸಬೇಕು. ಅನ್ನು ಬಿಟ್ಟು ಯಾರೋ ಲಂಚಬಾಕ ಅಧಿಕಾರಿ ಕೊಡುವ ಒಂದು ಸಣ್ಣ ಕಿರುಕುಳಕ್ಕೆ ಜೀವನ, ಜೀವವನ್ನು ಕಳೆದುಕೊಳ್ಲೂವುದು ಹೇಡಿತನದ ಲಕ್ಷಣ .
ಅದೇನೆ ಇರಲಿ ಕೆಲವು ನೌಕರರಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಅವರನ್ನು ತಾತ್ಕಾಲಿಕವಾಗಿ ಕಾಪಾಡುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ ಅದನ್ನು ಮರೆಯದೆ ನಿಮ್ಮ ನಿಮ್ಮ ಘಟಕಗಳಲ್ಲೇ ವಜಾಗೊಂಡ ನೌಕರರಿಗೆ ನೆರವಾಗುವ ಮೂಲಕ ದೈರ್ಯ ತುಂಬುವ ಕೆಲಸ ಮಾಡಬೇಕಿದೆ.