Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

ಚುನಾವಣೆ- ಗಾಬರಿ ಆಗುವಂತ ಫಲಿತಾಂಶ ಏನು ಹೊರಬಿದ್ದಿಲ್ಲ: ಡಿಕೆಶಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಲಬುರಗಿ ಗೆದ್ದಿದ್ದೇವೆ. ಹುಬ್ಬಳಿ-ಧಾರವಾಡ ಇಂಪ್ರೂವ್ ಆಗಿದೆ ಈ ಮೂಲಕ ಕಾಂಗ್ರೆಸ್‍ಗೆ ಸ್ಥಳೀಯ ಸಂಸ್ಥೆ ಚುನಾವಣೆ ಜತೆಗೆ ಕೆಲವು ಬೈ ಎಲೆಕ್ಷನ್ ಫಲಿತಾಂಶದಲ್ಲಿ ನನಗೆ ಸಮಾಧಾನಕರ ಕಾಣುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮೂರು ಮಹಾನಗರ ಪಾಲಿಕೆಗಳಿಗೆ ಮೊನ್ನೆ ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು ಹೊರಬೀಳುತ್ತಿದ್ದು, ಈ ಹೊತ್ತಿನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಲ್ ಬಾಡಿ ಎಲೆಕ್ಷನ್ ಲೋಕಲ್ ಕ್ಯಾಂಡಿಡೇಟ್ ಮೇಲೆ ಡಿಪೆಂಡ್ ಆಗಿರುತ್ತದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ನಮ್ಮ ಕ್ಯಾಂಡಿಡೇಟ್ ಇರ್ತಿರಲಿಲ್ಲ. ಅಲ್ಲಿ ಹಾಕುವುದು ಬೇಡ ಅಂತ ನಮ್ಮಲ್ಲೆ ಒತ್ತಡ ಇತ್ತು. ಈ ಬಾರಿ ಹಾಕಿದ್ದೇವೆ ಬೆಸ್ಟ್ ಇಂಪ್ರೂವ್ ಆಗಿದೆ ಇನ್ನು ಮುಂದೆ ಇನ್ನಷ್ಟು ಜಾಗೃತರಾಗಿ ಮುಂಜಾಗೃತೆಯಿಂದ ಕೆಲಸ ನಿರ್ವಹಿಸುತ್ತೇವೆ ಎಂದರು.

ಹುಬ್ಬಳ್ಳಿ-ಧಾರವಾಡದಲ್ಲಿ ನಮ್ಮವರೇ 7-8 ಜನ ರೆಬೆಲ್ ಆಗಿದ್ದಾರೆ. ಅದರಲ್ಲಿ 3-4 ಜನ ಗೆದ್ದಿದ್ದಾರೆ ಏನು ಮಾಡೋದು. ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ಗಾಬರಿ ಆಗುವಂತ ಫಲಿತಾಂಶ ಏನು ಹೊರಬಿದ್ದಿಲ್ಲ. ಸಮಾಧಾನ ತಂದಿದೆ. ಕೋವಿಡ್ ನಿಯಮದಲ್ಲಿ ನಮಗೆ ಪ್ರಚಾರಕ್ಕೆ ಅವಕಾಶ ಇರಲಿಲ್ಲ.

ಬಿಜೆಪಿಯವರು ಅಧಿಕಾರ ಮಿಸ್ ಯೂಸ್ ಮಾಡಿಕೊಂಡು ಪ್ರಚಾರ ಮಾಡಿದರು. ತರಿಕೆರೆ ಅವರದ್ದೇ ಎಂಎಲ್‍ಎ ಇತ್ತು ನಾವೇ ಗೆದಿದ್ದೇವೆ. ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲಾ ಎಂದಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...