ಬೆಂಗಳೂರು: ಕಲಬುರಗಿ ಗೆದ್ದಿದ್ದೇವೆ. ಹುಬ್ಬಳಿ-ಧಾರವಾಡ ಇಂಪ್ರೂವ್ ಆಗಿದೆ ಈ ಮೂಲಕ ಕಾಂಗ್ರೆಸ್‍ಗೆ ಸ್ಥಳೀಯ ಸಂಸ್ಥೆ ಚುನಾವಣೆ ಜತೆಗೆ ಕೆಲವು ಬೈ ಎಲೆಕ್ಷನ್ ಫಲಿತಾಂಶದಲ್ಲಿ ನನಗೆ ಸಮಾಧಾನಕರ ಕಾಣುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೂರು ಮಹಾನಗರ ಪಾಲಿಕೆಗಳಿಗೆ ಮೊನ್ನೆ ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು ಹೊರಬೀಳುತ್ತಿದ್ದು, ಈ ಹೊತ್ತಿನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಲ್ ಬಾಡಿ ಎಲೆಕ್ಷನ್ ಲೋಕಲ್ ಕ್ಯಾಂಡಿಡೇಟ್ ಮೇಲೆ ಡಿಪೆಂಡ್ ಆಗಿರುತ್ತದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ನಮ್ಮ ಕ್ಯಾಂಡಿಡೇಟ್ ಇರ್ತಿರಲಿಲ್ಲ. ಅಲ್ಲಿ ಹಾಕುವುದು ಬೇಡ ಅಂತ ನಮ್ಮಲ್ಲೆ ಒತ್ತಡ ಇತ್ತು. ಈ ಬಾರಿ ಹಾಕಿದ್ದೇವೆ ಬೆಸ್ಟ್ ಇಂಪ್ರೂವ್ ಆಗಿದೆ ಇನ್ನು ಮುಂದೆ ಇನ್ನಷ್ಟು ಜಾಗೃತರಾಗಿ ಮುಂಜಾಗೃತೆಯಿಂದ ಕೆಲಸ ನಿರ್ವಹಿಸುತ್ತೇವೆ ಎಂದರು.
ಹುಬ್ಬಳ್ಳಿ-ಧಾರವಾಡದಲ್ಲಿ ನಮ್ಮವರೇ 7-8 ಜನ ರೆಬೆಲ್ ಆಗಿದ್ದಾರೆ. ಅದರಲ್ಲಿ 3-4 ಜನ ಗೆದ್ದಿದ್ದಾರೆ ಏನು ಮಾಡೋದು. ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ಗಾಬರಿ ಆಗುವಂತ ಫಲಿತಾಂಶ ಏನು ಹೊರಬಿದ್ದಿಲ್ಲ. ಸಮಾಧಾನ ತಂದಿದೆ. ಕೋವಿಡ್ ನಿಯಮದಲ್ಲಿ ನಮಗೆ ಪ್ರಚಾರಕ್ಕೆ ಅವಕಾಶ ಇರಲಿಲ್ಲ.
ಬಿಜೆಪಿಯವರು ಅಧಿಕಾರ ಮಿಸ್ ಯೂಸ್ ಮಾಡಿಕೊಂಡು ಪ್ರಚಾರ ಮಾಡಿದರು. ತರಿಕೆರೆ ಅವರದ್ದೇ ಎಂಎಲ್‍ಎ ಇತ್ತು ನಾವೇ ಗೆದಿದ್ದೇವೆ. ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲಾ ಎಂದಿದ್ದಾರೆ.