CrimeNEWSನಮ್ಮರಾಜ್ಯ

ಹಿಟ್ ಅಂಡ್ ರನ್​: ಇಬ್ಬರು ಯುವಕರ ಬಲಿಪಡೆದ ಪ್ರಕರಣ  ಭೇದಿಸಿದ ಪೊಲೀಸರ ತನಿಖೆಯೇ ರೋಚಕ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಅದೊಂದು ಪೊಲೀಸರಿಗೆ ಸವಾಲೆಸೆದ ಕೇಸ್​​.. ಅದೇ ಕಳೆದ 15 ದಿನಗಳ ಹಿಂದೆ ಹಿಟ್ ಅಂಡ್ ರನ್​ನಲ್ಲಿ ಇಬ್ಬರು ಯುವಕರನ್ನು ಬಲಿಪಡೆದ ಪ್ರಕರಣ.

ಹೌದು! ಇಬ್ಬರು ಯುವಕರು ತೆರಳುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ವಾಹನ ನಂತರ ನಿಲ್ಲಿಸದೆ ಹೋಗಿತ್ತು. ಇನ್ನು ಆ ಚಾಲಕ ಯಾರಿಗೂ ಸುಳಿವು ಸಿಗಬಾರ್ದು ಎಂದು ವಾಹನಕ್ಕೆ ರೀಪೇಂಟ್‌ ಮಾಡಿಸಿದ್ದ. ಆದರೂ ಪೊಲೀಸರು ಪ್ರಕರಣ ಭೇದಿಯೇ ಬಿಟ್ಟಿದ್ದಾರೆ. ಈ ಮೂಲಕ 15 ದಿನಗಳ ಬಳಿಕ ಹಿಟ್ ಅಂಡ್‌ ರನ್ ಕೇಸ್​ಗೆ ಹೊಸ ತಿರುವು ಸಿಕ್ಕಿದ್ದು, ಅಪಘಾತ ಮಾಡಿ ಎಸ್ಕೇಪ್ ಆಗಿದ್ದವರು ಅಂದರ್ ಆಗಿದ್ದಾರೆ.

ಇದು ಪೊಲೀಸರಿಗೆ ದೊಡ್ಡ ಸವಾಲ್ ಆಗಿತ್ತು: ಸ್ವಲ್ಪ ಕೆಲಸ‌ ಇದೆ ಇಲ್ಲೇ ಹೋಗಿ ಬರ್ತೇವೆ ಎಂದು ಬೈಕ್ ಏರಿದ್ದ ನಾಗೇಶ್ ಹಾಗೂ ಸ್ನೇಹಿತ ದೇವರಾಜ್​ ಮನೆಗೆ ವಾಪಸಾಗಿರಲಿಲ್ಲ.. ಇಬ್ಬರು ಹಟ್ಟಿ ಚಿನ್ನದ ಗಣಿಯಲ್ಲಿ ಸ್ನೇಹಿತನ ಬರ್ತಡೇಗೆ ಹೋಗುವಾಗ ಮಾರ್ಗಮಧ್ಯೆ ಕಲಬುರಗಿ-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಎದುರಿನಿಂದ ಬಂದ ಸರ್ಕಾರಿ ಬಸ್ ಬೈಕ್​ಗೆ ಡಿಕ್ಕಿ ಹೊಡೆಯಿತು. ಇದರಿಂದ ಆ ಇಬ್ಬರೂ ಸ್ಥಳದಲ್ಲೇ ಹೆಣವಾಗಿ ಹೋಗಿದ್ದರು.

ಆದರೆ ಅಪಘಾತ ಮಾಡಿದ ವಾಹನ ಮಾತ್ರ ನಿಲ್ಲಿಸದೆ ಎಸ್ಕೇಪ್ ಆಗಿತ್ತು.. ಪರಿಣಾಮ ನಾಗೇಶ್ ಹಾಗೂ ದೇವರಾಜ್ ಸ್ಥಳದಲ್ಲೇ ಮೃತಪಟ್ಟಿದ್ರು ಯಾವುದರಿಂದ ಹೀಗಾಗಿದೆ ಎಂಬ ಸುಳಿವು ಪೊಲೀಸರಿಗೆ ಸಿಗಲೇ ಇಲ್ಲ. ಆದರೂ ಹಿಟ್ & ರನ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕೇಸ್‌ ಅನ್ನು ಸವಾಲಾಗೆ ಸ್ವೀಕರಿಸಿ ತನಿಖೆಗಿಳಿದಿದರು.

ಈ ವೇಳೆ ಅಪಘಾತ ಮಾಡಿದ ವಾಹನ ಪತ್ತೆ ಮಾಡೋದೇ ಬಹುದೊಡ್ಡ ಸವಾಲಾಗಿತ್ತು. ಅದಕ್ಕಂತಾನೇ ಪೊಲೀಸರು ಸರಿ ಸುಮಾರು 100ಕ್ಕೂ ಹೆಚ್ಚು ಬಸ್‌, ಲಾರಿಗಳ ತಪಾಸಣೆ ನಡೆಸಿದರು. ಆದರೂ ಅಪಘಾತ ಮಾಡಿದ ವಾಹನದ ಪತ್ತೆ ಮಾತ್ರ ನಿಗೂಢವಾಗುತ್ತಲೇ ಹೋಗಿತ್ತು. ಆದರೆ ಅಪರಾಧ ಎಸಗುವಾಗ ಬಿಟ್ಟು ಹೋದ ಒಂದೇ ಒಂದು ಸುಳಿವಿನ ಮೇರೆಗೆ ಎಂತಹ ಪ್ರಕರಣವಾದರೂ ಭೇದಿಸುವ ಪೊಲೀಸರಿಗೆ ಅಂಥ ಒಂದು ಸುಳಿವು ಸಿಕ್ಕಿತು. ಅದೆ  ಅಪಘಾತದ ಸ್ಥಳದಲ್ಲಿ‌ ಸಿಕ್ಕ ಅವಶೇಷಗಳು  ಕೆಎಸ್‌ಆರ್‌ಟಿ ಬಸ್​ನವು. ಆಗಲೇ ಪೊಲೀಸರಿಗೆ ಖಚಿತವಾಯಿತು.

ಅಪಘಾತದ ಬಳಿಕ 200 ಕಿಮೀ ಓಡಾಡಿದ ಬಸ್‌: ಕಲಬುರಗಿ ಜಿಲ್ಲೆಯ ಕಾಳಗಿ ಡಿಪೋದ ಈ ಬಸ್​​, ಲಿಂಗಸ್ಗೂರಿನ ಬಸ್ ನಿಲ್ದಾಣದಲ್ಲಿ ಎಂಟ್ರಿ ಮಾಡಿ ತೆರಳಿತ್ತು. ಹಾಗೆ ತೆರಳುವಾಗ ನಿಲ್ದಾಣದಲ್ಲಿ ಬಸ್​​ನ ಚಾಲಕ ಹಿಮ್ಮುಖವಾಗಿ ನಿಲ್ಲಿಸಿದ್ದ. ಕಾರಣ ಅಪಘಾತದಲ್ಲಿ ಬಸ್‌ನ ಮುಂಭಾಗ ಜಖಂಗೊಂಡಿತ್ತು. ಮೊದಲು ಇದನ್ನು ನಿಲ್ದಾಣದಲ್ಲಿರೋ‌ ಸಿಸಿ ಕ್ಯಾಮರಾಗಳ ಮೂಲಕ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಳಿಕ ಸಿಂಧನೂರು, ಸಿರಗುಪ್ಪ, ಹೀಗೆ ಬೆಂಗಳೂರು ಮಾರ್ಗದಲ್ಲಿ ಬರುವ ನಿಲ್ದಾಣಗಳಲ್ಲಿ ಎಲ್ಲೂ ಆತ ಎಂಟ್ರಿ ಮಾಡಿಸಿರಲಿಲ್ಲ. ಅದಲ್ಲದೇ ಆತನ ಬಸ್ ಜಖಂಗೊಂಡಿರೋ ವಿಡಿಯೋಗಳು ಚಳ್ಳಕೆರೆ ಚೆಕ್ ಪೋಸ್ಟ್ ಬಳಿಯೂ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿವೆ. ಆದರೂ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಅದರ ಚಾಲಕ ಬಸ್‌ಅನ್ನು ಬೆಂಗಳೂರು ತಲುಪಿಸಿದ್ದ.

ಅಷ್ಟೇ ಅಲ್ಲ ಬೆಂಗಳೂರಿನ ಕೆಂಗೇರಿಯಲ್ಲಿರೋ ಖಾಸಗೀ ಗ್ಯಾರೇಜೊಂದರಲ್ಲಿ ಡ್ಯಾಮೇಜ್‌ ಆದ ಬಸ್ ರಿಪೇರಿ ಮಾಡಿಸಿದ್ದ. ರೀ ಪೇಂಟ್ ನಂತರ ಡಿಪೋಗೆ ತಂದು ಬಸ್ ನಿಲ್ಲಿಸಿದ ಆದರೂ ಘಟಕದಲ್ಲಿ ಯಾರಿಗೂ ಅನುಮಾನ ಬಂದಿರಲಿಲ್ಲ. ಆದರೆ ತನಿಖೆಯಿಂದ ಎಲ್ಲವೂ ತಿಳಿದುಬಂತು ಎಂದು ಸರ್ಕಲ್​​​ ಇನ್ಸ್​ಪೆಕ್ಟರ್ ಮಹಾಂತೇಶ್ ಸಜ್ಜನ್ ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದ ಈ ಹಿಟ್ ಅಂಡ್‌ ರನ್ ಕೇಸ್​ ಭೇದಿಸುವಲ್ಲಿ ಪೊಲೀಸರು ಕೊನೇಗೂ ಯಶಸ್ವಿಯಾಗಿದ್ದಾರೆ. ಲಿಂಗಸುಗೂರು ಪೊಲೀಸರು ಸತತ 15 ದಿ‌ನಗಳು ಹುಚ್ಚರಂತೆ ಸುಮಾರು 2000 ಕಿ.ಮೀ. ಸುತ್ತಾಡಿ ಬಸ್ ಚಾಲಕ ಆರೋಪಿ ಶ್ರೀಕಾಂತ್​ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

error: Content is protected !!
LATEST
BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ