NEWSನಮ್ಮರಾಜ್ಯ

ವರ್ಗಾವಣೆ ವಿಚಾರ: ಸಾರಿಗೆ ಅಧಿಕಾರಿಗಳಿಗೆ ಒಂದು ನ್ಯಾಯ ನೌಕರರಿಗೊಂದು ನ್ಯಾಯ: ವಕೀಲ ಶಿವರಾಜು ಕಿಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನಾಲ್ಕೂ ನಿಗಮಗಳಲ್ಲಿ ಈಗಾಗಲೇ ಕಳೆದ ಏಪ್ರಿಲ್‌ನಲ್ಲಿ ವರ್ಗಾವಣೆಗೊಂಡಿರುವ ನೌಕರರನ್ನು ನೀವು ವರ್ಗಾವಣೆಯಾಗಿರುವ ಸ್ಥಳದಲ್ಲೇ ಹೋಗಿ ಕರ್ತವ್ಯ ಮಾಡಬೇಕು ಎಂದು ನಿಗಮದ ಮುಖ್ಯಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಆದರೆ ಇತ್ತೀಚೆಗೆ ವರ್ಗಾವಣೆ ಮಾಡಿರುವ ವಿವಿಧ ಘಟಕಗಳ ವ್ಯವಸ್ಥಾಪಕರು ಮತ್ತು ಅಧಿಕಾರಿಗಳಲ್ಲಿ ಕೆಲವರಿಗೆ ಮೂಲ ಘಟಕದಲ್ಲೇ ಮುಂದುವರಿಯಲು ತಿಂಗಳ ಬಳಿಕ ಅದೇಶ ಹೊರಡಿಸಿದ್ದಾರೆ ಇದು ಯಾವ ನ್ಯಾಯ ಎಂದು ಸುಪ್ರೀಂಕೋರ್ಟ್‌ ಹಾಗೂ ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಕೇಳಿದ್ದಾರೆ.

ಇನ್ನು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮತ್ತೆ ಮೂಲ ಘಟಕದಲ್ಲೇ ಮುಂದುವರಿಯುವಂತೆ ಆದೇಶ ಮಾಡಿದ್ದೀರಲ್ಲ ಅದೇ ರೀತಿ ನೌಕರರ ವರ್ಗಾವಣೆಯನ್ನು ರದ್ದು ಮಾಡಿ ಅವರಿಗೂ ಅಧಿಕಾರಿಗಳಿಗೆ ನೀಡಿದಂತ ಆದೇಶವನ್ನು ನೀಡಬೇಕು. ಇಲ್ಲ ಈ ಎಲ್ಲದ ವಿರುದ್ಧ ಮುಂದಿನ ದಿನಗಳಲ್ಲಿ ಹೈ ಕೋರ್ಟ್‌ನಲ್ಲೇ ನೀವು  ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಮೂರು ದಿನಗಳವರೆಗೂ ಕಾದು ನೋಡಲಾಗುವುದು. ನೌಕರರನ್ನು ಮತ್ತೆ ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡದಿದ್ದರೆ ಈ ಸಂಬಂಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು  ತಿಳಿಸಿದ್ದಾರೆ.

ಇನ್ನು ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸು ಅಳವಡಿಸುವ ಸಂಬಂಧ ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕರ ಜತೆಗೆ ಸಭೆ ಕರೆದಿರುವುದು ಸ್ವಾಗತಾರ್ಹ. ಅದರ ಜತೆಗೆ ನಿಗಮಗಳಲ್ಲಿ ಮುಷ್ಕರ ವೇಳೆ ವಜಾ, ವರ್ಗಾವಣೆ ಮತ್ತು ಅಮಾನತು ಗೊಂಡಿರುವ ನೌಕರರ ಬಗ್ಗೆಯೂ ಸರ್ಕಾರ ಗಮನಹರಿಸಿ ಶೀಘ್ರದಲ್ಲೇ ಅವರನ್ನು ಕರ್ತವ್ಯಕ್ಕೆ ಮರಳುವಂತಹ ಕ್ರಮ ತೆಗೆದುಕೊಳ್ಳಬೇಕು ಎಂದು  ಒತ್ತಾಯಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಮಾಡಿದ ವೇಳೆ ಅಮಾಯಕ ನೌಕರರ ವಿರುದ್ಧ ಶಿಸ್ತುಪಾಲನೆ ಹೆಸರಿನಲ್ಲಿ ಕ್ರಮ ತೆಗೆದುಕೊಂಡು ಅವರ ಜೀವನವನ್ನು ನರಕವಾಗಿಸಿರುವುದು ಸರಿಯಲ್ಲ.

ಹೀಗಾಗಿ ಸರ್ಕಾರ ಅತೀ ಶೀಘ್ರದಲ್ಲೇ ದೂರದೂರುಗಳಿಗೆ ವರ್ಗಾವಣೆ ಮಾಡಿರುವ ನೌಕರರನ್ನು ಮತ್ತು ವಜಾ ಮಾಡಿರುವ ನೌಕರರಿಗೆ ಕಾನೂನಾತ್ಮಕವಾದ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ.

ಇನ್ನು ಇಂದು ಮಧ್ಯಾಹ್ನ 3.30ಕ್ಕೆ 6ನೇ ವೇತನ ಆಯೋಗದ ಶಿಫಾರಸು ಅಳವಡಿಸುವ ಸಂಬಂಧ ನಡೆಯುವ ಸಭೆಯಲ್ಲಿ ಸರ್ಕಾರದ ಇಲಾಖೆಯ ಮುಖ್ಯ, ಅಧೀನ ಕಾರ್ಯದರ್ಶಿಗಳು ಮತ್ತು ನಿಗಮಗಳ ಎಂಡಿಗಳ ಹೊರತು ಬೇರೆ ಯಾರು ಪಾಲ್ಗೊಳ್ಳಲು ಸಾಧ್ಯವಿಲ್ಲ.

ಹೀಗಾಗಿ ಅಲ್ಲಿ ಏನು ಚರ್ಚೆಯಾಯಿತು ಎಂಬುವುದು ಬಹಿರಂಗವಾಗುವುದಿಲ್ಲ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಗೌಪ್ಯವಾಗಿರುತ್ತವೆ. ಅದು ಸರ್ಕಾರದ ಮಟ್ಟದಲ್ಲಿ ನಡೆಯುವ ಸಭೆಯಾಗಿರುವುದರಿಂದ ಆ ಗೌಪ್ಯತೆ ಕಾಪಾಡಿಕೊಂಡು ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ಆ ವಿಚಾರ ಈಗ ಅಪ್ರಸ್ತುತ ಎಂದು ತಿಳಿಸಿದ್ದಾರೆ.

ಆದರೆ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುವವರೆಗೂ ವಜಾ, ವರ್ಗಾವಣೆ ಮತ್ತು ಅಮಾನತು ಶಿಕ್ಷೆಗೊಳಗಾಗಿರುವ ನೌಕರರ ಪಾಡೇನು ಎಂಬುದನ್ನು ಸರ್ಕಾರ ಗಮನದಲ್ಲಿಟ್ಟುಕೊಂಡು ಅವರಿಗೆ ಮಾನವೀಯತೆ ನೆಲೆಗಟ್ಟಿನ ಮೇಲೆ ಈ ಹಿಂದೆ (ಏ.6ರ) ಇದ್ದಂತಹ ಸ್ಥಿತಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು 6ನೇ ವೇತನ ಆಯೋಗದ ಶಿಫಾರಸು ಅಳವಡಿಸುವ ಸಂಬಂಧ ಇಂದು ನಡೆಯುವ ಸಭೆಯಲ್ಲೇ ಅಂತಿಮ ತೀರ್ಮಾನವಾಗುವುದಿಲ್ಲ. ಅದು ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಬೇಕು. ಇಲ್ಲ ಅಧಿವೇಶನಲ್ಲಿ ಅಂಗಿಕರಿಸಬೇಕು. ಅಲ್ಲಿಯವರೆಗೂ ನೌಕರರು ಕಾಯಲೇ ಬೇಕಿದೆ.

ಹೀಗಾಗಿ ಪ್ರಸ್ತುತ ನೌಕರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಹೆಚ್ಚಿನ ಗಮನ ನೀಡಬೇಕಿದೆ ಎಂದು ವಕೀಲ ಶಿವರಾಜು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ