NEWSನಮ್ಮರಾಜ್ಯ

ನೀನಾರಿಗಾದಿಯೋ ನಾಚಿಗೆಗೆಡಿಯ ಎಂಜಿಲು ಕಾಸಿನ ಸಂಘಟನೆಯ ಎಲೆ ಮಾನವಾ!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಾನಸಿಕವಾಗಿ ಕುಗ್ಗಿ ಹೋಗಿರುವ ಸಾರಿಗೆ ನೌಕರರಿಗೆ ಶಕ್ತಿ ತುಂಬುವಂತಹ ಮತ್ತು ಸತ್ತಿರುವ ಸಂಘಟನೆಗಳನ್ನು ಎಚ್ಚರಿಸಲು ಪ್ರಯತ್ನಿಸುವ ರೀತಿಯಲ್ಲಿ ಕವಿತೆಯ ರೂಪದಲ್ಲಿ ಬಂದಿರುವ ಈ ಸಂದೇಶ ಪ್ರತೀ ಸಾರಿಗೆ ನೌಕರರ ಜೀವನಕ್ಕೆ ಹಿಡಿದ ಕನ್ನಡಿಯಾಗಿದೆ….

ಬಿ.ಸಿ.ರೋಡ್‌ಗೆ ಒಂದು ದೊಡ್ಡ ಬ್ಯಾಚ್ ಬಂದಿತ್ತು ಅಂತಾ ಹೇಳಿದಿನಲ್ವಾ. ಅವರ ಮೇಲೆ ನನಗೆ ಕರುಣೆ ಇತ್ತು. ಕಾರಣ ಅವರಲ್ಲಿ ಕೆಲವರು ಡಿಸ್ಮಿಸ್ ಆಗಿಯೇ ಬಂದವರು. ಅದಕ್ಕೆ ತುಂಬಾ ಬೇಸರ ಆಗಿತ್ತು.

ಆದರೆ ಕೋರ್ಟ್ ನಿಂದ ಮರಳಿ ಕರ್ತವ್ಯಕ್ಕೆ ಬಂದ ಮೇಲೆ ಆದರೂ ಕೂಡ ಇವರಿಗೆ ಬುದ್ಧಿ ಬರಬೇಕಿತ್ತು. ಇವರ ಮೂಲವೇತನ ಹಾಳಾಯ್ತು. ಜೀವನ ಹಾಳು ಮಾಡಿಕೊಂಡರು.

ಪ್ರಸ್ತುತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಆಗದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು.

ಇಷ್ಟು ಸಮಸ್ಯೆಯಾಗಿ ಡಿಸ್ಮಿಸ್ ಆದರೂ ಕೂಡಾ ಇವರು ಇನ್ನೂ ಕೂಡಾ ಎಂಜಿಲು ಕಾಸಿಗೆ ಹಾತೋರೆಯುವುದನ್ನು ಬಿಡುತ್ತಿಲ್ಲ.

ತಮ್ಮ ಜೀವಮಾನವಿಡೀ ಸಮಸ್ಯೆಯನ್ನು ಅನುಭವಿಸಿದರು. ನ್ಯಾಯಬದ್ಧವಾಗಿ ಬರಬೇಕಾದ ಸೌಲಭ್ಯಗಳನ್ನು ಪಡೆಯುವುದನ್ನು ಬಿಟ್ಟು ನೂರಾರು ಜಾತಿ ಸಂಘಟನೆಗಳನ್ನು ಕಟ್ಟಿಕೊಂಡು ಒಣ ಧಿಮಾಕಿಗೆ ಸತ್ತರು.

ತಮ್ಮ ಜೀವನ ಹಾಳು ಮಾಡಿಕೊಂಡು ಕೆಲಸ ಕಳೆದುಕೊಂಡರು. ಕೆಲಸ ಕಳೆದುಕೊಂಡು ತಮ್ಮ ಇಡೀ ಸಂಸಾರ-ಸಂಬಂಧಿಕರಿಂದ ದೂರವಾದರು.

ಇಲಾಖೆಯನ್ನು ಸಮಸ್ಯೆಯ ಕೂಪವಾಗಿಸಿದರು. ಅಮಾನತು, ವಜಾ ಪ್ರಕರಣಗಳು ಸರ್ವೇಸಾಮಾನ್ಯವಾದವು. ಇಂತಹವುಗಳಿಗೆ ಸಂಘಟನೆಯನ್ನು ಬಳಸಿಕೊಳ್ಳದೇ ಎಂಜಿಲು ಕಾಸಿಗೆ ತಮ್ಮನ್ನು ತಾವೇ ಮಾರಿಕೊಂಡರು.

ಹೋಗಲಿ ಈ ಎಲ್ಲ ಸಮಸ್ಯೆಗಳನ್ನು ಕೊನೆಗಾಣಿಸಲೆಂದೆ ಹುಟ್ಟಿಕೊಂಡ ಯುನಿಯನ್‌ ನಿಮ್ಮ ಕಣ್ಣಿಗೆ ಕಾಣದಾಯಿತಾ ಹುಚ್ಚು ಮನಸ್ಸಿನ ಎಂಜಿಲು ಕಾಸಿನ ಸಂಘಟನೆಯ ಎಲೆ ಮಾನವಾ!

ಪ್ರಸ್ತುತ ಕೂಟ ಎಂಬ ಸಂಘಟನೆಯಿಂದ ಒಳ್ಳೆಯದಕ್ಕಿಂತಾ ಕೆಟ್ಟದ್ದೆ ಆಗಿದೆ ಇಲ್ಲಾ ಅಂತಾ ಹೇಳುವುದಿಲ್ಲಾ. ಇದಕ್ಕೆ ಕಾರಣ ಏನು ಎಂಬುದು ನಿಮಗೆ ಗೊತ್ತಾಗಲಿಲ್ಲವಾ ಎಂಜಿಲು ಕಾಸಿನ ಸಂಘಟನೆಯ ಎಲೆ ಮಾನವಾ!

ಎಷ್ಟೋ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡರು. ಅವರ ಸಂಸಾರದ ಕೂಗು ನಿನ್ನ ಕಿವಿಗೆ ಬೀಳದಾಯಿತಾ ಎಂಜಿಲು ಕಾಸಿನ ಸಂಘಟನೆಯ ಎಲೆ ಮಾನವಾ!

ಕೊರೊನಾ ರೋಗದಿಂದ ಎಷ್ಟೋ ಸಿಬ್ಬಂದಿಗಳು ತೀರಿಹೋದರು. ಅದರ ಬಗ್ಗೆ ಒಂದೇ ಒಂದು ಧ್ವನಿ ಎತ್ತದಷ್ಟು ಸ್ವಾರ್ಥಿಗಳಾದಿರಾ? ಎಂಜಿಲು ಕಾಸಿನ ಎಲೆ ಮಾನವರೇ?!

ಸತ್ತವರು ನಿಮ್ಮ ಅಣ್ಣ ತಮ್ಮ ತಂಗಿಯರು ಅಲ್ವಲ್ಲಾ? ಅವರ ಕುಟುಂಬದ ಸಂಕಷ್ಟ ನಿಮ್ಮ ಅರಿವಿಗೆ ಬಾರದಾಯಿತಾ ಗೊಸುಂಬೆ ಎಂಜಿಲು ಕಾಸಿನ ಸಂಘಟನೆಯ ಮಾನವರೇ!

ಕೂಟದ ಬೇಡಿಕೆಗಳು ಸಿಬ್ಬಂದಿಗಳ ಜೀವನಕ್ಕೆ ಪೂರಕವಲ್ಲವೇ ಗೊಸುಂಬೆ ಎಂಜಿಲು ಕಾಸಿನ ಮಾನವರೇ!

ನೀನಾರಿಗಾದಿಯೋ ನಾಚಿಗೆಗೆಡಿಯ ಸಂಘಟನೆಯ ಎಲೆ ಮಾನವಾ!

Leave a Reply

error: Content is protected !!
LATEST
BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ