Vijayapatha – ವಿಜಯಪಥ
Friday, November 1, 2024
CrimeNEWSನಮ್ಮರಾಜ್ಯ

KSRTC: ಸಾರಿಗೆ ನಿಗಮಗಳಲ್ಲಿ 150ಕ್ಕೂ ಹೆಚ್ಚು ನೌಕರರ ಆತ್ಮಹತ್ಯೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನಿಗಮಗಳಲ್ಲಿ ದಿನದಿಂದ ದಿನಕ್ಕೆ ನೌಕರರಿಗೆ ಕಿರುಕುಳ ನೀಡುತ್ತಿರುವುದು ಹೆಚ್ಚಾಗುತ್ತಲೇ ಇದೆ. ಇನ್ನೊಂದೆಡೆ ಸಮಯಕ್ಕೆ ಸರಿಯಾಗಿ ವೇತನವೂ ಸಿಗುತ್ತಿಲ್ಲ. ಈ ಎಲ್ಲದರಿಂದ ಸಮಸ್ಯೆಗೆ ಸಿಲುಕಿ ಜೀವನ ಸಾಗಿಸುವುದು ಕಷ್ಟಕರವಾಗುತ್ತಿರುವುದರಿಂದ ನೌಕರರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಧಿಕಾರಿ ಅಮಾನತು ಮಾಡಿದ ನೌಕರನಿಗೆ ಮತ್ತೆ ಕೆಲಸ ಕೊಡುವಲ್ಲಿ ನೀಡಿದ ಕಿರುಕುಳದಿಂದ ಮನನೊಂದು ಕಳೆದ ಸೆಪ್ಟೆಂಬರ್‌ 27ರಂದು ಆ ನೌಕರ ಆತ್ಮಹತ್ಯೆ ಮಾಡ.

ಕೇಶವ

ಇನ್ನು ಮುಷ್ಕರದ ವೇಳೆ ವಜಾಗೊಂಡಿದ್ದ ಬಿಎಂಟಿಸಿಯ 6ನೇ ಘಟಕದ ಚಾಲಕ ಕೇಶವ ಎಂಬುವರು ಅ.7ರಂದು ಘಟಕದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.

ಬೆಂಗಳೂರು/ಸಿಂಧಗಿ: ಸಿಂಧಗಿ ಮೂಲದ ಬಿಎಂಟಿಸಿ 41ನೇ ಡಿಪೋನ ಚಾಲಕ ಜಟ್ಟೆಪ್ಪ ಪಟೇದ ಮೇಲಧಿಕಾರಿಗಳ ಕಿರುಕುಳ ತಡೆಯಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.

ಗುಂಜೂರು ಡಿಪೋ 41 ರಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಜಟ್ಟೆಪ್ಪ ಪಟೇದ ಆರೋಪಿಸಿರುವಂತೆ ತನಗೆ ಡಿಪೋ ಮ್ಯಾನೇಜರ್ ಹಾಗೂ ಡಿಸಿ ತುಂಬಾ ತೊಂದರೆ ಕೊಡುತ್ತಿದ್ದರು. ಅನೇಕ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು.

ಡಿಪೋದಿಂದ ಡಿಪೋಗೆ ಬೇಕಂತಲೇ ವರ್ಗಾವಣೆ ಮಾಡುವ ಮೂಲಕ ಗೋಳೋಯ್ದುಕೊಳ್ಳುತ್ತಿದ್ದರು. ಅನೇಕ ಬಾರಿ ಕ್ಷಮೆ ಯಾಚಿಸಿದ್ರೂ ಅದೇ ಕಿರುಕುಳ ಮುಂದುವರಿಸಿದ್ದರು ಎಂದು ಆಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡರು.

ಮಂಗಳೂರು ಸೆ.27: ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ 3ನೇ ಘಟಕದ ಚಾಲಕ ಕಂ ನಿರ್ವಾಹಕ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದ ನಿಂಗಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಂಗಳೂರಿನ ಕುಂಟಿಕಾನ ಬಳಿಯ ಬಾಡಿಗೆ ‌ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಆತ್ಮಹತ್ಯೆಗೆ ಮೇಲಧಿಕಾರಿಗಳ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಆದರೂ ಈವರೆಗೂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ.

ಬೆಂಗಳೂರು ಅ.20 : 31 ವರ್ಷದ ಬಿಎಂಟಿಸಿಯ ಮಹಿಳಾ ನೌಕರೆ, ನಾಲ್ಕು ವರ್ಷದ ಮಗುವಿನೊಂದಿಗೆ ಜೀವನದಲ್ಲಿ ಆರ್ಥಿಕವಾಗಿ ಸಮಸ್ಯೆ ಎದುರಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಅ.20ರ ಮಂಗಳವಾರ ಮಧ್ಯಾಹ್ನ ಟೂಟಿಕೊರಿನ್-ಓಖಾ ಎಕ್ಸ್‌ಪ್ರೆಸ್ ಯಲಹಂಕದಿಂದ ರಾಜನಕುಂಟೆ ನಿಲ್ದಾಣದ ಕಡೆಗೆ ಚಲಿಸುತ್ತಿರುವಾಗ ಈ ಘಟನೆ ಸಂಭವಿಸಿದೆ. ಆಕೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಕೆಯ ಭುಜದ ಮೇಲೆ ರಕ್ತಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳೂರು ಅ.2: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಡಿಸಿ ಅರುಣ್ ಕುಮಾರ್ ಕಿರುಕುಳಕ್ಕೆ ಸಿಲುಕಿ ಅಘಾತಕ್ಕೊಳಗಾದ ಕುಂದಾಪುರ ಘಟಕದ ಅಕೌಂಟ್ಸ್‌ ಮೇಲ್ವಿಚಾರಕಿ (Accounts Supervisor) ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು.

ಕೆಎಸ್‌ಆರ್‌ಟಿಸಿ ಕುಂದಾಪುರ ಘಟಕದ ಅಕೌಂಟ್‌ ಮೇಲ್ವಿಚಾರಕರಾದ ಶಾಂತಮ್ಮ ಎಂಬುವರೆ ಡಿಸಿ ಅರುಣ್ ಕುಮಾರ್ ಕಿರುಕುಳದಿಂದ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ್ದವರು.

ಬೆಂಗಳೂರು ಅ.2:ಇದಿಷ್ಟೇ ಅಲ್ಲ ಬಿಎಂಟಿಸಿ ಪೀಣ್ಯ ಡಿಪೋದಲ್ಲಿ ನಿರ್ವಾಹಕರಾಗಿದ್ದ ಪತಿ ಪ್ರಸನ್ನಕುಮಾರ್ ವರ್ಷದ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದು, ಪ್ರಸನ್ನಕುಮಾರ್ ಸಾವಿನಿಂದ ಜೀವನ ನಿರ್ವಾಹಣೆ ಸಾಧ್ಯವಾಗದೆ ಒಂದೇ ಕುಟುಂಬದ ಮೂವರು (ಅಮ್ಮ ಮಕ್ಕಳಿಬ್ಬರು) ಅಕ್ಟೋಬರ್‌ 1 ರಂದು ಆತ್ಮಹತ್ಯೆ ಮಾಡಿಕೊಂಡರು.

ನೆಲಮಂಗಲದ ಮಾದನಾಯಕನ ಹಳ್ಳಿ ಬಳಿಯ ಪ್ರಕೃತಿ ಬಡಾವಣೆಯ ಬಿಎಂಟಿಸಿ ಪೀಣ್ಯ ಡಿಪೋ ನಿರ್ವಾಹಕ ಪ್ರಸನ್ನಕುಮಾರ್ ಅವರ ಪತ್ನಿ ವಸಂತ (40), ಪುತ್ರ ಯಶವಂತ್ (15) ಹಾಗೂ ಪುತ್ರಿ ನಿಶ್ಚಿತಾ (6) ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿ ವಸಂತ ಬರೆದ ಡೆತ್‍ನೋಟ್ ಕೂಡ ಸಿಕ್ಕಿದೆ.

ಕೊರೊನಾಕ್ಕೆ ಬಲಿಯಾದ ಬಿಎಂಟಿಸಿ ಪೀಣ್ಯ ಡಿಪೋ ನಿರ್ವಾಹಕ ಪ್ರಸನ್ನಕುಮಾರ್ ಅವರ ಕುಟುಂಬಕ್ಕೆ ಕೊರೊನಾ ಪರಿಹಾರ ನಿಧಿಯಡಿ ಬರಬೇಕಿದ್ದ 30 ಲಕ್ಷ ರೂ. ನೀಡಿದ್ದರೆ ಈ ಮೂವರು ಜೀವಗಳು ಬದುಕುಳಿಯುತ್ತಿದ್ದವು. ಆದರೆ, ಸರ್ಕಾರ ಮತ್ತು ನಿಗಮದ ಆಡಳಿತ ವರ್ಗ ಈ ನೌಕರನ ಕುಟುಂಬದ ಬಗ್ಗೆ ತೋರಿದ ನಿರ್ಲಕ್ಷ್ಯದಿಂದ ಇಂದು ಅವರು ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು.

ಇಷ್ಟೇ ಅಲ್ಲ ಮುಷ್ಕರದ ಬಳಿಕ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಂದ ಈವರೆಗೆ 150 ಕ್ಕೂ ಹೆಚ್ಚು ಮಂದಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಈವರೆಗೂ ನಿಗಮಗಳ ಯಾವೊಬ್ಬ ಅಧಿಕಾರಿಯಾಗಿಲಿ ಅಥವಾ ಇಲಾಖೆಯ ಸಚಿವರಾಗಲಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕನಿಷ್ಠ ಮಾನವೀಯತೆಯನ್ನು ತೋರಿಲ್ಲ.

ಜತೆಗೆ ಈಗಲೂ ಬಹುತೇಕ ಎಲ್ಲ ಘಟಕಗಳಲ್ಲೂ ನೌಕರರಿಗೆ ಕಿರುಕುಳ ಕೊಡುವುದು ಮುಂದುವರಿಯುತ್ತಲೇ ಇದೆ. ಇದನ್ನು ಗಮನಿಸಿದರೆ ಒಬ್ಬ ಸಾಮಾನ್ಯ ಪ್ರಜೆಗೂ ಅರ್ಥವಾಗುತ್ತದೆ. ನಿಗಮಗಳಲ್ಲಿ ಇರುವುದು ಯಾವ ಕಾನೂನು ಎಂದು.

ಇನ್ನಾದರೂ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು ನೌಕರರ ಸಮಸ್ಯೆಗೆ ಸ್ಪಂದಿಸಿ ಅವರಿಗೆ ನ್ಯಾಯಬದ್ಧವಾಗಿ ನೀಡಬೇಕಿರುವ ಸೌಲಭ್ಯಗಳನ್ನು ಕೊಡುವ ಮೂಲಕ ಇಲಾಖೆಯ ಗೌರವವನ್ನು ಉಳಿಸಿಕೊಳ್ಳಬೇಕಿದೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ