NEWSನಮ್ಮರಾಜ್ಯ

ನೌಕರರ ಬಾಯಿಗೆ ಮಣ್ಣು ಹಾಕಿ, ಕೈಗೆ ಚಿಪ್ಪು ಕೊಟ್ಟು ಹೋದ ನಿಕಟಪೂರ್ವ ಸಾರಿಗೆ ಸಚಿವ: ನೊಂದ ನೌಕರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಕಟಪೂರ್ವ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರ ಭಾವಚಿತ್ರವುಳ್ಳ ಬ್ಯಾನರ್‌ಗಳು ಮತ್ತು ಕಟೌಟ್‌ಗಳಿಗೆ ಬಹುತೇಕ ಎಲ್ಲ ಘಟಕ ಮಟ್ಟದಲ್ಲಿ ಹಾಗೂ ರಾಜ್ಯಾದ್ಯಂತ ಹಾಲಿನಭಿಷೇಕ ಮಾಡಿ ನೌಕರರು ತಮ್ಮ ಬೇಡಿಕೆ ಈಡೇರಲಿದೆ ಎಂಬ ಸಂತಸದಲ್ಲಿದ್ದರು. ಆದರೆ ಅವರು ಮಾತ್ರ ಮಾಡಬಾರದ ಕೆಲಸ ಮಾಡಿ ಹೋದರು.

ಮುಷ್ಕರದ ಸಮಯದಲ್ಲಿ ಆಗಿರುವ ವಜಾ, ಅಮಾನತು, ವರ್ಗಾವಣೆ ಆಗಿರುವ ಎಲ್ಲ ನೌಕರರನ್ನು ಯಥಾವತ್ ಆಗಿ ಮುಷ್ಕರದ ಹಿಂದಿನಂತೆ ಖಡ್ಡಾಯವಾಗಿ ಮಾಡಿಕೊಡುವುದರ ಜೊತೆಗೆ ಸಾರಿಗೆ ನೌಕರರ ಕುಟುಂಬ ಸದಸ್ಯರಲ್ಲಿ ನಾನೂ ಒಬ್ಬ, ನಿಮ್ಮ ಎಲ್ಲ ಕಷ್ಟಗಳನ್ನು ನೋಡಿದ್ದೇನೆ. ನಾನು ಶತಾಯ ಗತಾಯ 6ನೇ ವೇತನ ಆಯೋಗವನ್ನು ಜಾರಿಗೆ ತಂದೇ ತರುತ್ತೇನೆ.

ನೌಕರರಿಗೆ ಅನುಕೂಲಕರವಾದ ಕಾನೂನುಗಳನ್ನು ತಂದು ಅವರ ಸಂಸಾರ ಸುಧಾರಿಸಿಕೊಳ್ಳುವ … ಹಾಗೆ ಹೀಗೆ ಎಂದು ಸುಳ್ಳು ಆಶ್ವಾಸನೆಗಳನ್ನು ಪ್ರತಿ ಸಭೆ ಸಮಾರಂಭಗಳಲ್ಲೂ ನೀಡಿ ಕೊನೆಗೆ ನೌಕರರನ್ನು ಇನ್ನಷ್ಟು ಸಮಸ್ಯೆಯ ಕೂಪಕ್ಕೆ ತಳ್ಳಿ ಹೊರ ಹೋದರು.

ಹೀಗೆ ಸಾರಿಗೆ ನೌಕರರ ಬಾಯಿಗೆ ಮಣ್ಣು ಹಾಕಿ ಕೈಗೆ ಚಿಪ್ಪು ಕೊಟ್ಟು ಹೋದರು. ಮುಂದಿನ ದಿನಗಳಲ್ಲಿ ಇಂತಹ ಲಕ್ಷ್ಮಣ ಸವದಿ ಅವರಿಗೆ ನೌಕರರು ತಕ್ಕ ಪಾಠ ಕಲಿಸುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.

ಇದೀಗ ಬಸವರಾಜು ಬೊಮ್ಮಾಯಿ ಸಚಿವ ಸಂಪುಟದಲ್ಲಿ ಬಿ. ಶ್ರೀರಾಮುಲು ಅವರಿಗೆ ಸಾರಿಗೆ ಖಾತೆ ನೀಡಿರುವುದು 4 ನಿಗಮಗಳ ಸಾರಿಗೆ ನೌಕರರಿಗೆ ಹೆಮ್ಮೆಯ ವಿಷಯ ಮತ್ತು ಸಂತೋಷದ ಸಂಗತಿ.

ಇನ್ನು ಸಂಸ್ಥೆಯ ಅಭಿವೃದ್ಧಿಗಾಗಿ ಸದಾ ನೌಕರರು ದುಡಿದ ಪ್ರತಿಫಲವಾಗಿ 280 ರಿಂದ 300 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಪ್ರಪಂಚದಲ್ಲೇ ಉತ್ತಮ ಸಾರಿಗೆ ಸಂಸ್ಥೆ ಎಂದು ಹೆಸರುಗಳಿಸಿದೆ.

ಆದರೆ ಇತ್ತೀಚೆಗೆ ಸಂಸ್ಥೆ ಲಾಸ್‌ನಲ್ಲಿದೆ ಅಂತ ಹೇಳುತ್ತಿದ್ದಾರೆ. ನಿಜ ಏಕೆ ಲಾಸ್‌ನಲ್ಲಿದೆ ಎಂಬುದನ್ನು ನಾವು ಕೂಲಂಕಷವಾಗಿ ಪರಿಶೀಲಿಸಬೇಕಾಗಿದೆ. ನಮ್ಮ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ 100ಕ್ಕೆ ಶೇ.80 ಲಂಚಕೋರ ಅಧಿಕಾರಿಗಳೇ ಇದ್ದಾರೆ.

ವಿಭಾಗೀಯ ನಿಯಂತ್ರಣ ಅಧಿಕಾರಿಗಳು ತನಿಖಾಧಿಕಾರಿಗಳ ಕೈಯಲ್ಲಿ ವಾಹನ ತನಿಖೆ ಮಾಡಿಸಿ ಕೇಸ್ ಬರೆಸುತ್ತಾರೆ. ನಂತರ ಅದೇ ತನಿಖಾಧಿಕಾರಿಗಳ ಮುಖಾಂತರ ಡೀಲಿಂಗ್ ಮಾಡಿಸುತ್ತಾರೆ.

ತನಿಖಾಧಿಕಾರಿಗಳು ಕೇಂದ್ರ ಕಚೇರಿಯಿಂದ ತಮಗೆ ನೀಡಿರುವ ಮಾರ್ಗ ವಾಹನ ಸಂಖ್ಯೆ ಇಂತಹ ವಾಹನವನ್ನು ತನಿಖೆ ಮಾಡಿ ವರದಿ ಸಲ್ಲಿಸಬೇಕು ಅಂತ ಹೇಳಿದ್ದರೂ ಸಹಾ ಕೇಂದ್ರ ಕಚೇರಿಯ ಆಧೇಶಗಳನ್ನೇ ಗಾಳಿಗೆ ತೂರಿ ತಮಗಿಷ್ಟ ಬಂದಂತೆ ಅವರ ಅಧಿಕಾರ ಚಲಾವಣೆ ಮಾಡುತ್ತಾರೆ.

ತನಿಖಾಧಿಕಾರಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಬಾಡಿ ಕ್ಯಾಮರಾ ಅಳವಡಿಸಿಕೊಂಡು ತನಿಖೆ ಮಾಡಬೇಕು. ಈ ಆದೇಶಗಳನ್ನೂ ಸಹಾ ಗಾಳಿಗೆ ತೂರಿ ಸಮವಸ್ತ್ರಗಳನ್ನು ಧರಿಸದೇ ತನಿಖೆ ಮಾಡುತ್ತಾರೆ. ತಮಗೆ ಬೇಕಾದ ನಿರ್ವಾಹಕರು ಇದ್ದರೆ ವಾಹನವನ್ನೇ ಹತ್ತುವುದಿಲ್ಲ.

ಯಾವ ಅಧಿಕಾರಿಗಳು ನೌಕರರಿಗೆ ದೌರ್ಜನ್ಯ ಕಿರುಕುಳ ದಬ್ಬಾಳಿಕೆ ಮಾಡುತ್ತಿದ್ದಾರೋ ಅಂಥ ಅಧಿಕಾರಿಗಳನ್ನು ನಮ್ಮ ಈಗಿನ ಸಾರಿಗೆ ಸಚಿವರು ಮಟ್ಟ ಹಾಕಬೇಕಿದೆ.

ಡಿಪೋಗಳಲ್ಲಿ ನೌಕರ ಸ್ನೇಹಿ ವಾತಾವರಣ ನಿರ್ಮಾಣವಾದರೆ ಸಂಸ್ಥೆಯನ್ನು ಅಬಿವೃದ್ಧಿ ಪಡಿಸಲು ನಮ್ಮ 4 ನಿಗಮಗಳ ನೌಕರರು 100ಕ್ಕೆ 100 ಭಾಗ ಲಾಭದಾಯಕವಾಗಿ ದುಡಿದು ಸಚಿವರಿಗೆ ಗೌರವ, ಘನತೆ ತಂದುಕೊಡುವುದರಲ್ಲಿ ಹಿಂದೆ ಸರಿಯುವುದಿಲ್ಲ. ನಾವೆಲ್ಲ ನೌಕರರು ಸ್ವ ಇಚ್ಛೆಯಿಂದ ದುಡಿಯಲು ಕಂಕಣಬದ್ದವಾಗಿರುತ್ತೇವೆಂದು ಈ ಮೂಲಕ ಪ್ರಮಾಣ ಮಾಡುತ್ತೇವೆ.

l ಟಿ.ಎ. ದ್ಯಾವಪ್ಪ,
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ಅಖಿಲ ಕರ್ನಾಟಕ ರಸ್ತೆ ಸುರಕ್ಷತಾ ಸಂಘ ಕರ್ನಾಟಕ ರಾಜ್ಯ

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...