NEWSನಮ್ಮರಾಜ್ಯವಿಜ್ಞಾನ

ಸಾರಿಗೆ ಸಂಸ್ಥೆಗಳಲ್ಲಿ ಡಿಸಿ, ಡಿಟಿಒ, ಎಟಿಎಸ್‌ ಸೇರಿ ಹಲವು ಹುದ್ದೆಗಳು ಅನವಶ್ಯ: ವಕೀಲರು, ನಿವೃತ್ತ ಡಿಸಿಗಳು ಬಿಚ್ಚಿಟ್ಟ ಸತ್ಯ ಏನು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಯೋಜನಕ್ಕೆ ಬಾರದ ಹಲವಾರು ಪೋಸ್ಟ್‌ಗಳಿದ್ದು ಅವುಗಳನ್ನು ಸರೆಂಡರ್ ಮಾಡಿದರೆ ವರ್ಷಕ್ಕೆ ಕೋಟ್ಯಂತರ ರೂ. ಸಾರಿಗೆ ಸಂಸ್ಥೆಗಳಿಗೆ ಉಳಿತಾಯವಾಗಲಿದೆ. ಇದರಿಂದ ಸಾರಿಗೆ ನಷ್ಟವನ್ನು ತಪ್ಪಿಸಬಹುದಾಗಿದೆ.

KSRTC, NWKRTC, KKRTC ಮತ್ತು BMTC ಯಲ್ಲಿರುವ ಹೆಚ್ಚಿನ ಮತ್ತು ಅನಾವಶ್ಯಕ ಹುದ್ದೆಗಳನ್ನು ಸರೆಂಡರ್ ಮಾಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳು ಸೇರಿದಂತೆ ಮಾಜಿ ನೌಕರರೂ ಆದ ಪ್ರಸ್ತುತ ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ಅವರು ಯಾವಯಾವ ಹುದ್ದೆಗಳನ್ನು ಸರೆಂಡರ್ ಮಾಡಬಹುದು ಎಂಬುದರ ಬಗ್ಗೆ ವಿಜಯಪಥಕ್ಕೆ ವಿವರಿಸಿದ್ದಾರೆ.

KSRTC, NWKRTC ಮತ್ತು KKRTC: ಪ್ರಮುಖವಾಗಿ ಈ ಮೂರು ಸಾರಿಗೆ ನಿಗಮಗಳಲ್ಲಿ ATI,  ATS, AWS, DTO,  DyCME, ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳು ಅನವಶ್ಯವಾಗಿವೆ. ಇದಕ್ಕೆ ಕಾರಣವನ್ನು ತಿಳಿಸಿದ್ದು, DM ಅವರು ನೇರವಾಗಿ DC ಅವರಿಗೆ ಆಯಾಯ ದಿನದ ದಿನಚರಿಯ ಬಗ್ಗೆ ನೇರವಾಗಿ ಮಾಹಿತಿ ನೀಡುತ್ತಾರೆ. ಹೀಗಾಗಿ DTO ಪೋಸ್ಟ್‌ ಅವಶ್ಯಕತೆ ಇಲ್ಲ. ಇನ್ನು ATI ಮತ್ತು ATS ಇವು ಕೂಡ ಬೇಕಿಲ್ಲ ಏಕೆಂದರೆ TC ಮತ್ತು TIಗಳು ಡಿಪೋಗಳಲ್ಲಿ ಚಾಲನಾ ಸಿಬ್ಬಂದಿಯ ನಿರ್ವಾಹಣೆ ಮಾಡುತ್ತಾರೆ. ಜತೆಗೆ ಇವರು ಘಟಕ  ವ್ಯವಸ್ಥಾಪಕರಿಗೆ ಮಾಹಿತಿ ನೀಡುತ್ತೀರುತ್ತಾರೆ.

ಇನ್ನು ಸಹಾಯಕ ಲೆಕ್ಕಾಧಿಕಾರಿ ಹುದ್ದೆ ಅನವಶ್ಯ ಕಾರಣ ಈಗಾಗಲೇ ಕಂಪ್ಯೂಟರ್‌ ಡಾಟಾ ಆಪರೇಟರ್‌ಗಳಿದ್ದು, ಇವರ ಜತೆಗೆ  ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳು ಬೇಕಿಲ್ಲ. ಹೀಗಾಗಿ ಹಿರಿಯ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳು ಇದ್ದರೆ ಸಾಕಷ್ಟೆ. ಆದ್ದರಿಂದ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳು ಅನವಶ್ಯ.

ಬಿಎಂಟಿಸಿ: ಇದರ ವ್ಯಾಪ್ತಿಗೆ ಬಂದರೆ DC, DTO ಹುದ್ದೆಗಳು ಪ್ರಯೋಜನಕ್ಕೆ ಬಾರದು. ಕಾರಣ DM ನಡುವೆ CTM ನೇರ ಸಂಪರ್ಕದಲ್ಲಿದ್ದು ದಿನಚರಿಯ ಕರ್ತವ್ಯದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಹೀಗಾಗಿ DC ಮತ್ತು DTO ಹುದ್ದೆಗಳನ್ನು ಸರೆಂಡರ್‌ ಮಾಡುವುದು ಉತ್ತಮ. ಇದರಿಂದ ಆ ಅಧಿಕಾರಿಗಳಿಗೆ ಕೊಡುವ ವೇತನ, ಒಂದು ಕಾರು, ಅದಕ್ಕೆ ಒಬ್ಬ ಚಾಲಕ ಮತ್ತೊಬ್ಬ PA ಜತೆಗೆ ತಿಂಗಳಿಗೆ ಇಂತಿಷ್ಟು ಎಂದು ಡೀಸೆಲ್‌ ಹೀಗೆ ಒಬ್ಬೊಬ್ಬರೂ ಅಧಿಕಾರಿಗಳ ತಿಂಗಳ ವೇತನ ಸೇರಿ ಎಷ್ಟು ವೆಚ್ಚವಾಗುತ್ತಿದೆ? ಇದರಿಂದ ಸಾರಿಗೆ ಸಂಸ್ಥೆಗಳಿಗೆ ಎಷ್ಟು ನಷ್ಟವಾಗುತ್ತಿದೆ. ಇದನ್ನು ಸಚಿವರು ಮತ್ತು ಎಂಡಿಗಳು ಗಮನಿಸಿ ಎಲ್ಲ ನಿಗಮಗಳಲ್ಲಿರುವ ಇಂಥ ಹುದ್ದೆಗಳನ್ನು ಸರೆಂಡರ್‌ ಮಾಡಿಕೊಳ್ಳಬೇಕಿದೆ.

ಹೆಚ್ಚಿನ ಮತ್ತು ಅನಾವಶ್ಯಕ ಹುದ್ದೆಗಳನ್ನು ಸರೆಂಡರ್ ಮಾಡಿದರೆ ಸಾರಿಗೆ ಸಂಸ್ಥೆಗಳಲ್ಲಿ ಆಗುತ್ತಿರುವ ನಷ್ಟವನ್ನು ತಪ್ಪಿಸಿ ಇನ್ನು ದಕ್ಷತೆಯಿಂದ ಸಂಸ್ಥೆ ಸೇವೆ ನೀಡಲು ಅನುಕೂಲವಾಗುತ್ತದೆ. ಇದರಿಂದ ಸಾರ್ವಜನಿಕರ ತೆರಿಗೆ ಹಣವೂ ಪೋಲ್‌ ಆಗುವುದಿಲ್ಲ ಎನ್ನುತ್ತಾರೆ ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು.

ಇನ್ನು ಘಟಕ ವ್ಯವಸ್ಥಾಪಕ ಹುದ್ದೆಗಳಿಗೆ  ಬಿ.ಇ. ಮೆಕ್ಯಾನಿಕಲ್‌ ಪದವೀಧರನ್ನು ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ಅವರು ಎರಡು ವರ್ಷ ಮುಂಚಿತವಾಗಿಯೇ ಹೆವಿ ವೆಹಿಕಲ್‌ ಲೈಸನ್ಸ್‌ ಅನ್ನು ಕಡ್ಡಾಯವಾಗಿ ಹೊಂದಿರುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಈ ಹಿಂದಿನಿಂದಲೂ ಅನವಶ್ಯಕ ಹುದ್ದೆಗಳನ್ನು ಸರೆಂಡರ್ ಮಾಡುವಂತೆ ತಿಳಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇದರಿಂದ ಅನವಶ್ಯಕ ಹುದ್ದೆಗಳನ್ನು ಕಡಿತ ಮಾಡುವ ಸುತ್ತೋಲೆ ಸರ್ಕಾರ ಹೊರಡಿಸುವುದು ಸಾಮಾನ್ಯ ಎಂಬಂತೆ ಬಿಂಬಿತವಾಗಿದೆ. ಜತೆಗೆ ಕೋಟ್ಯಂತರ ರೂ. ನಷ್ಟವು ಉಂಟಾಗುತ್ತಿದೆ ಎನ್ನುತ್ತಾರೆ ಹೆಸರೇಳಲಿಚ್ಛಿಸದ ನಿವೃತ್ತ ಡಿಸಿಗಳು.

ಇನ್ನು ಅನವಶ್ಯ ಹುದ್ದೆಗಳ ಸರೆಂಡರ್‌ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ಅವರಿಗೆ  ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ವಕೀಲ ಎಚ್‌.ಬಿ. ಶಿವರಾಜು ವಿಜಯಪಥಕ್ಕೆ ತಿಳಿಸಿದ್ದಾರೆ.

 

 

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ