-
ನೌಕರರು ಮುಷ್ಕರ ಮಾಡಿದ್ದರಿಂದ ಬಸ್‌ಗಳ ಚಾಲನೆ ಆಗದೆ ನೂರಾರು ಕೋಟಿ ರೂ. ನಷ್ಟು ಎಂದು ಹೇಳುವ ನೀವು ಅವರಿಲ್ಲದೆ ಸಂಸ್ಥೆ ನಡೆಯದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸುವುದು ಏಕೆ?
ಹೊಸಪೇಟೆ: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕೆಳ ಹಂತದ ನೌಕರರ ಕಂಡರೆ ಅಧಿಕಾರಿಗಳಿಗೆ ಇಷ್ಟೊಂದು ತಾತ್ಸಾರನಾ..? ಅವರನ್ನು ಮನುಷ್ಯರಂತೆ ನೋಡುವ ಗುಣವನ್ನೇ ಕಳೆದುಕೊಂಡುಬಿಟ್ಟಿದ್ದಾರ ನಿಗಮಗಳ ಶೇ.90ರಷ್ಟು ಅಧಿಕಾರಿಗಳು.
ಇಂಥಾ ಅನುಮಾನಕ್ಕೆ ಎಡೆ ಮಾಡಿಕೊಡುವಂಥ ಘಟನೆಗಳು ನಿತ್ಯವೂ ರಾಜ್ಯದ ನಾಲ್ಕೂ ನಿಗಮಗಳ ಒಂದಲ್ಲಾ ಒಂದು ಘಟಕದಲ್ಲಿ ನಡೆಯುತ್ತಲೇ ಇರುತ್ತದೆ. ಅದಕ್ಕೆ ಪುಷ್ಟಿ ನೀಡುವಂತೆ ಹೊಸಪೇಟೆಯ ಸಂಡೂರು ಘಟಕ ಸ್ಯವಸ್ಥಾಪಕ ಚಾಲಕರ ಮೇಲೆದರ್ಪ ಮೆರೆದಿದ್ದಾರೆ.
ನಿಗದಿತ ಆದಾಯ ತರುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಚಾಲಕರೊಬ್ಬರನ್ನು ಲಾಠಿಯಿಂದ ಹೊಡೆಯಲು ಯತ್ನಿಸುವ ಮೂಲಕ ಅವಾಚ್ಯವಾಗಿ ನಿಂದಿಸುತ್ತಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಷ್ಟಾದರೂ ಡಿಎಂ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಆದರೆ, ಈ ಕೆಲವನ್ನು ಒಬ್ಬ ನೌಕರರ ಮಾಡುವುದಿರಲಿ ಅವಾಚ್ಯವಾಗಿ ಅಧಿಕಾರಿಗಳ ವಿರುದ್ಧ ಮತ್ತೊಬ್ಬ ನೌಕರರನೊಂದಿಗೆ ಹೇಳಿದ್ದರೂಸಾಕ ಆ ನೌಕರನನ್ನು ಕೂಡಲೇ ಅಮಾನತು ಮಾಡಿ ನಿಮ್ಮ ವಿರುದ್ಧ ಈ ಸಂಬಂಧ ಏಕೆ ಕ್ರಮ ಕೈಗೊಳ್ಳಬಾದರು ಎಂದು ನಂತರ ಮರಮೊ ಕೊಡುತ್ತಿದ್ದರು.
ಆದರೆ, ಡಿಎಂ ಒಬ್ಬರು ನೌಕರನ ಮೇಲೆ ದರ್ಪ ಮೆರೆದರೂ ಕಂಡು ಕಾಣದಂತೆ ಅಂದಿಕಾರಿಗಳು ವರ್ತಿಸುತ್ತಿದ್ದು, ಕೇಳಿದರೆ, ನಮ್ಮ ಭದ್ರತ ವಿಭಾಗದ ಅಧಿಕಾರಿಗಳಿಂದ ಈ ಬಗ್ಗೆ ಸತ್ಯಾಸತ್ಯತೆ ಏನು ಎಂಬ ವರದಿ ಕೇಳಿದ್ದೇವೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ.
ಹೌದು ಸಂಡೂರು ಡಿಪೋ ಮ್ಯಾನೇಜರ್ ವೆಂಕಟೇಶ್ ಎಂಬ ಮಹಾನುಭಾವ ಕಲೆಕ್ಷನ್ ಕಡಿಮೆ ತಂದ ಡ್ರೈವರ್-ಕಂಡಕ್ಟರ್ ಅವರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಷ್ಟೇ ಅಲ್ಲ, ಅಸಂಸದೀಯ ಪದದಿಂದಲೂ ನಿಂದಿಸಿದ್ದಾನೆ. ಅಷ್ಟು ಸಾಲದ್ದಕ್ಕೆ ಬೆತ್ತವನ್ನು ತರಿಸಿ ಚಾಲಕ ಮಧು ಅವರನ್ನು ಅಟ್ಟಾಡಿಸಿದ್ದಾನೆ.
ಕಲೆಕ್ಷನ್ ಎನ್ನೋದು ಕೊರೊನಾಕ್ಕೆ ಮುನ್ನ ನಿರೀಕ್ಷಿತ ಟಾರ್ಗೆಟ್ ರೀಚ್ ಆಗುತ್ತಿಲ್ಲ. ಕೊರೊನಾ ನಂತರವಂತೂ ಜನ ಬಸ್ ಹತ್ತೊಕ್ಕೆ ಮನಸು ಮಾಡದಿರುವುದರಿಂದ ಲಾಭದ ರೂಟ್ ಗಳಲ್ಲೆಲ್ಲಾ ಕಲೆಕ್ಷನ್ ಕಡಿಮೆಯಾಗಿದೆ.
ಇದು ಡಿಪೋ ಮ್ಯಾನೇಜರ್‌ಗಳಿಗೆ ಡಿಸಿಗಳಿಗೆ ಗೊತ್ತಿರುವ ಕಟು ಸತ್ಯ. ಹೊಸಪೇಟೆ ವಿಭಾಗದಲ್ಲಿ ಆಗಿರುವುದು ಇದೇ..ಇದು ಗೊತ್ತಿದ್ದರೂ ಡಿಎಂ ವೆಂಕಟೇಶ್ ನಡೆದುಕೊಂಡಿರುವ ರೀತಿ ಅವರ ದರ್ಪವನ್ನು ತೋರಿಸುತ್ತಿದೆ.
ಕಲೆಕ್ಷನ್ ಕಡಿಮೆ ತಂದ ಸಿಬ್ಬಂದಿಯನ್ನು“ಸೂ…. ಮಗನೇ ಎಲ್ ಹೋಗಿದ್ಯಲ್ಲೆ..ಕೆರ ತಗೊಂಡ್ ಹೊಡೀತಿನಿ ನೋಡು..ಇವ್ನ್ ನೋಡುದ್ರೆ ಇಲ್ಲ ಅಂತಿದ್ದಾನೆ..ನಾಟ್ಕ ಮಾಡ್ತಿದಿರಾ..ಜಾಫರ್ ಕರೀರಿ..ಲೇ ಜಾಫರ್..ಲೇ ಜಾಫರ್..ಆ ಲಾಠಿ ತಗೊಂಡ್ ಬಾ ಅನ್ರಿ..ಹೇ ಬಾರೋ ಇಲ್ಲಿ ಎನ್ನುತ್ತಾ ಲಾಠಿ ಹಿಡಿದು ಹೊಡೆಯಲು ಮುಂದಾಗುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಸಾರಿಗೆ ನಾಲ್ಕು ನಿಗಮಗಳಲ್ಲಿ, ಚಾಲಕ, ನಿರ್ವಾಹಕರನ್ನು ಕೀಳು ಮಟ್ಟದಲ್ಲಿ ಟ್ರೀಟ್ ಮಾಡುವ ಅಧಿಕಾರಿಗಳಿಗೇನು ಕೊರತೆಯಿಲ್ಲ. ರೂಟ್ ಕೊಡಲಿಕ್ಕೆ..ಡ್ಯೂಟಿ ಅಸೈನ್ ಮಾಡೊಕ್ಕೆ ಲಂಚ ತಿನ್ನೋ ಡಿಪೋ ಮ್ಯಾನೇಜರ್‌ಗಳು ಚಾಲನ ಸಿಬ್ಬಂದಿಯ ಮೇಲೆಯೇ ದಬ್ಬಾಳಿಕೆ-ದೌರ್ಜನ್ಯ ನಡೆಸುವಂಥ ಕೆಲಸ ಮಾಡುತ್ತಿದ್ದಾರೆ.
ಚಾಲಕ, ನಿರ್ವಾಹಕರನ್ನು ಮನುಷ್ಯರಂತೆ ನೋಡುವ ಮನಸ್ಥಿತಿಯೇ ಬಹುತೇಕ ಅಧಿಕಾರಿಗಳಲ್ಲಿ ಇಲ್ಲ.. ಚಾಲಕ, ನಿರ್ವಾಹಕರೆಂದರೆ ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಕೆಲಸ ಮಾಡುವ ಪಶುಗಳಂತೆ ಭಾವಿಸುವ, ವ್ಯವಹರಿಸುವ ಆಧಿಕಾರಿಗಳೇ ನಿಗಮಗಳಲ್ಲಿ ತುಂಬಿ ಹೋಗಿದ್ದಾರೆ.
ಘಟನೆಯಲ್ಲಿ ಡ್ರೈವರ್ ನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೇ, ಲಾಠಿಯಿಂದ ಹಲ್ಲೆ ಮಾಡೊಕ್ಕೆ ಮುಂದಾದ ಘಟಕ ವ್ಯವಸ್ಥಾಪಕ ವೆಂಕಟೇಶ್ ವಿರುದ್ಧ ಕಠಿಣಾತೀಕಠಿಣ ಕ್ರಮ ಕೈಗೊಳ್ಳಬೇಕು..ಕ್ಷುಲ್ಲಕ ಕಾರಣಕ್ಕೆ ಕೆಳ ಹಂತದ ಸಿಬ್ಬಂದಿಯನ್ನು ಶಿಕ್ಷೆಗೊಳಪಡಿಸುವ ಆಡಳಿತವರ್ಗ ವೆಂಕಟೇಶ್ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಕಾರ್ಮಿಕರು ಹಾಗೂ ಕಾರ್ಮಿಕರ ಸಂಘಟನೆಗಳು ಒತ್ತಾಯಿಸಿವೆ.