ಚೆನ್ನೈ: ಜನಪ್ರಿಯ ತಮಿಳು ದೂರದರ್ಶನ ನಟ ವಿ.ಜೆ.ಚಿತ್ರಾ ಇಂದು ಬೆಳಗ್ಗೆ ಚೆನ್ನೈನ ಹೊರವಲಯದ ಹೋಟೆಲ್ ಒಂದರ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇತ್ತೀಚೆಗೆ ಹೇಮಂತ್ ಎಂಬುವರನ್ನು ವಿವಾಹವಾಗಿದ್ದ ಅವರು ಹಣಕಾಸಿನ ಸಮಸ್ಯೆಯಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, ಚಿತ್ರಾ ಇಂದು ಮುಂಜಾನೆ 2: 30 ರ ಸುಮಾರಿಗೆ ಇವಿಪಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿಸಿಕೊಂಡು ಹೋಟೆಲ್ಗೆ ಮರಳಿದ್ದರು. ಅಲ್ಲಿ ತನ್ನ ಪತಿ ಹೇಮಂತ್ ಜೊತೆ ತಂಗಿದ್ದರು ಎಂದು ತಿಳಿದು ಬಂದಿದೆ.
ಚಿತ್ರಾ ಚಿತ್ರೀಕರಣದಿಂದ ಹಿಂದಿರುಗಿದ ನಂತರ ಸ್ನಾನಕ್ಕೆ ಹೋಗಿದ್ದರು. ಬಳಿಕ ಹೆಚ್ಚು ಹೊತ್ತು ಹೊರಗೆ ಬಂದಿರಲಿಲ್ಲ. ಆ ಬಳಿಕ ನಾನು ಹೋಗಿ ಬಾಗಿಲು ಬಡಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಹೋಟೆಲ್ ಸಿಬ್ಬಂದಿ ಕರೆದು ನಕಲಿ ಕೀ ಯೊಂದಿಗೆ ಬಾಗಿಲು ತೆರೆದಾಗ ಚಿತ್ರಾ ಸೀಲಿಂಗ್ ಫ್ಯಾನ್ನಲ್ಲಿ ನೇತಾಡುತ್ತಿದ್ದರು ಎಂದು ಪೊಲೀಸರಿಗೆ ಚಿತ್ರಾ ಪತಿ ಹೇಮಂತ್ ಹೇಳಿಕೆ ನೀಡಿದ್ದಾರೆ.
ಇನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ ಚಿತ್ರಾ ಇತ್ತೀಚೆಗೆ ಹಣಕಾಸಿನ ಸಮಸ್ಯೆಯಿಂದ ನೊಂದಿದ್ದರು ಎನ್ನಲಾಗಿದೆ. ಯಾವುದೇ ಆತ್ಮಹತ್ಯೆ ಪತ್ರವೂ ಸ್ಥಳದಲ್ಲಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
RiP