ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರ ವಿರೋಧದ ನಡುವೆಯೂ ಜಗದ್ಗುರು ಮುರುಘ ರಾಜೇಂದ್ರ ವಿಶ್ವವಿದ್ಯಾಲಯ ಸೇರಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕಕ್ಕೆ ವಿಧಾನ ಪರಿಷತ್ನಲ್ಲೂ ಧ್ವನಿಮತದ ಮೂಲಕ ಅಂಗೀಕಾರ ಸಿಕ್ಕಿದೆ.
ವಿದ್ಯಾಶಿಲ್ಪ ವಿಶ್ವವಿದ್ಯಾನಿಲಯ ವಿಧೇಯಕ, ಏಟ್ರಿಯಾ ವಿಶ್ವವಿದ್ಯಾಲಯ ವಿಧೇಯಕಕ್ಕೂ ಅಂಗೀಕಾರ ಸಿಕ್ಕಿವೆ. ಇವುಗಳ ಜೊತೆಗೆ ನ್ಯೂ ಹೊರೈಜನ್ ವಿಶ್ವವಿದ್ಯಾಲಯ ವಿಧೇಯಕಗಳು ಸದನದಲ್ಲಿ ಅನುಮೋದನೆಗೊಂಡಿವೆ. ಇನ್ನು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯುನಿವರ್ಸಿಟಿ ಬೆಂಗಳೂರು ಎಂದು ಹೆಸರು ಬದಲಾವಣೆ ವಿಧೇಯಕಕ್ಕೂ ಅಂಗೀಕಾರ ಸಿಕ್ಕಿದೆ.
ಸರ್ಕಾರಿ ವಿವಿಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೆಲಸ ಸಿಗಲಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಖಾಸಗಿ ವಿವಿಯ ಮಸೂದೆಯನ್ನು ವಿರೋಧಿಸಿದರು. ಆಡಳಿತ ಪಕ್ಷದ ಮಹಾಂತೇಶ್ ಕವಟಿಗಿ ಮಠ ಅವರು ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಕಾಪಾಡಲು ಸ್ಪರ್ಧೆ ಇರಬೇಕು. ಹಾಗಾಗಿ ಖಾಸಗಿ ವಿವಿಗಳು ಬೇಕು ಎಂದು ಪ್ರತಿಪಾದಿಸಿದರು.
ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ವಿಧೇಯಕಗಳಿಗೆ ವಿಧಾನ ಪರಿಷತ್ನಲ್ಲೂ ಧ್ವನಿಮತದ ಮೂಲಕ ವಿಧೇಕಯ ಅಂಗೀಕಾರ ದೊರೆಯಿತು. ಇನ್ನು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯುನಿವರ್ಸಿಟಿ ಬೆಂಗಳೂರು ಎಂದು ಹೆಸರು ಬದಲಾವಣೆ ವಿಧೇಯಕಕ್ಕೂ ಅಂಗೀಕಾರ ಸಿಕ್ಕಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಇನ್ನು ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಸೇಂಟ್ ಜೋಸೆಫ್ ವಿವಿ ವಿಧೇಯಕ ಅಂಗಿಕಾರಕ್ಕೆ ರಾಜ್ಯಪಾಲರ ಒಪ್ಪಿಗೆ ಬೇಕಾದ ಹಿನ್ನೆಲೆಯಲ್ಲಿ ವಿಧೇಯಕ ಮಂಡನೆಯನ್ನು ಡಿಸಿಎಂ ಅಶ್ವಥ್ ನಾರಾಯಣ ಮುಂದೂಡಿದ್ರು. ಅಲ್ಪಸಂಖ್ಯಾತರ ವಿವಿ ಎನ್ನುವ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಇದನ್ನ ತಡೆ ಹಿಡಿದಿದ್ದೀರಾ ಅಂತ ವಿಪಕ್ಷ ಸದಸ್ಯರಾದ ನಜೀರ್ ಅಹಮದ್ ಮತ್ತು ಅಪ್ಪಾಜಿಗೌಡ ಆರೋಪಿಸುತ್ತಿದ್ದಂತೆ, ತಾಂತ್ರಿಕ ಕಾರಣ ವಿವರಿಸಿ ಸಚಿವರು ಸ್ಪಷ್ಟನೆ ನೀಡಿದರು.
ಇದಕ್ಕೂ ಮೊದಲು ಖಾಸಗಿ ವಿವಿಗಳಿಗೆ ಮಾನ್ಯತೆ ನೀಡುವುದರಿಂದ ಆಗಲಿರುವ ಸಮಸ್ಯೆಗಳನ್ನು ವಿಪಕ್ಷ ಸದಸ್ಯರು ಮಾತ್ರವಲ್ಲ, ಆಡಳಿತ ಪಕ್ಷದ ಸದಸ್ಯರೂ ತಮ್ಮ ಆತಂಕ ವ್ಯಕ್ತಪಡಿಸಿದ್ದು ಕೆಲ ಕಾಲ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತು.
ಹೆಚ್ಚು ಖಾಸಗಿ ವಿವಿಗಳು ರಾಜ್ಯಕ್ಕೆ ಬಂದ್ರೆ, ಸರ್ಕಾರಿ ವಿವಿಗಳ ಮಾನ್ಯತೆ ಕಡಿಮೆ ಆಗುತ್ತೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತೆ. ಇದರಿಂದ ಸರ್ಕಾರಿ ವಿವಿಗಳು ಮುಂದಿನ ದಿನಗಳಲ್ಲಿ ಮುಚ್ಚಿ ಹೋಗೋ ಸ್ಥಿತಿ ಬರುತ್ತೆ. ಉನ್ನತ ಶಿಕ್ಷಣವನ್ನ ಖಾಸಗಿ ವಿವಿಗಳ ಕೈಗೆ ಕೊಡಬೇಡಿ. ಸರ್ಕಾರಕ್ಕೆ ಈ ಖಾಸಗಿ ವಿವಿಗಳ ಮೇಲೆ ನಿಯಂತ್ರಣ ಇರಲ್ಲ ಎಂದು ಜೆಡಿಎಸ್ ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಬಸವರಾಜ ಹೊರಟ್ಟಿ ವಿರೋಧ ವ್ಯಕ್ತಪಡಿಸಿದರು.
ಅಧ್ಯಯನಕ್ಕಾಗಿ ಸದನ ಸಮಿತಿಯನ್ನು ರಚಿಸಿ ಎಂದು ಸಲಹೆ ನೀಡಿದರು. ಮರಿತಿಬ್ಬೆಗೌಡ ಅವರು ಮಾತನಾಡಿ, ಖಾಸಗಿ ವಿವಿಗೆ ನಿಧೀಷ್ಠ ವ್ಯಾಪ್ತಿಯನ್ನು ನಿಗದಿ ಮಾಡಿ, ರಾಜ್ಯ ವ್ಯಾಪ್ತಿಯನ್ನು ಕೊಡಬೇಡಿ. ಪರೀಕ್ಷೆ ನಡೆಸುವುದು, ಅಂಕ ನೀಡುವುದನ್ನು ಖಾಸಗಿ ವಿವಿಗಳೇ ಮಾಡುತ್ತಾರೆ. ತಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ನೀಡುತ್ತಿವೆ. ಇತ್ತೀಚೆಗೆ ನಡೆದ ಸರ್ಕಾರಿ ನೇಮಕಾತಿಯಲ್ಲಿ ಖಾಸಗಿ ವಿವಿಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೇ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಶಿಕ್ಷಣ ವಿಕೇಂದ್ರೀಕರಣ ಕುರಿತ ಒತ್ತು ನೀಡಲಾಗಿದೆ. ಹಣ ಮಾಡುವ ಉದ್ದೇಶದಿಂದ ಈ ಶೈಕ್ಷಣಿಕ ಸಂಸ್ಥೆಗಳು ಕೆಲಸ ಮಾಡುತ್ತಿಲ್ಲ ಎಂದು ಖಾತ್ರಿ ಮಾಡಿಕೊಂಡೇ ಇದಕ್ಕೆ ವಿವಿ ಮಾನ್ಯತೆ ನೀಡಲು ನಿರ್ಧಾರ ಮಾಡಿದ್ದೇವೆ ಎಂದು ಡಿಸಿಎಂ ಅಶ್ವತ್ಱ ನಾರಾಯಣ ತಿಳಿಸಿದರು.
ಇಲ್ಲಿಯವರೆಗೂ ಬಿಜೆಪಿ ಸರ್ಕಾರ ಎಲ್ಲರನ್ನೂ ಒಗ್ಗಟ್ಟಿನಿಂದ ಎಲ್ಲಿ ನಡೆಸಿಕೊಂಡು ಸೈ ಎನಿಸಿಕೊಂಡಿದೆ ಹೇಳಿ