Vijayapatha – ವಿಜಯಪಥ
Friday, November 1, 2024
NEWSನಮ್ಮಜಿಲ್ಲೆನಮ್ಮರಾಜ್ಯ

ತನ್ನ ಅನುಕೂಲಕ್ಕೆ ತಕ್ಕಂತೆ ನೈಟ್‌ ಕರ್ಫ್ಯೂ ಜಾರಿ ಮಾಡಿದ ಸರ್ಕಾರ

ಇಂದಿನಿಂದ ಅಲ್ಲ ನಾಳೆಯಿಂದ ಜಾರಿ l ರಾತ್ರಿ 10ರ ಬದಲು 11ರಿಂದ ನಾಮ್‌ ಕೇ ವಾಸ್ತೆ ಕರ್ಫ್ಯೂ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಮಗ್ರ ಸುದ್ದಿ
    ಬೆಂಗಳೂರು: ಬುದ್ದಿ ಇಲ್ಲದ ಸರ್ಕಾರ ಘಳಿಗೆಗೊಂದು ಗಂಟೆಗೊಂಡು ನಿರ್ಧಾರ ತೆಗೆದುಕೊಳ್ಳವ ಮೂಲಕ ಕರ್ಫ್ಯೂ ಅನ್ನೋ ಅರ್ಥವನ್ನೇ ಬುಡಮೇಲು ಮಾಡುವಂತೆ ಮಾಡಿದೆ.

ಬ್ರಿಟನ್​ನಲ್ಲಿ ಮತ್ತೆಯಾಗಿರುವ ಹೊಸ ರೂಪಾಂತರದ ಕೊರೊನಾ ವೈರಸ್​ ಆತಂಕದ ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿತ್ತು. ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಇಂದು ಮಧ್ಯಾಹ್ನ ಆದೇಶಿಸಿತ್ತು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಆದರೆ, ವರ್ಷಾಂತ್ಯದಲ್ಲಿ ಈ ರೀತಿ ಕರ್ಫ್ಯೂ ಜಾರಿ ಮಾಡುವುದರಿಂದ ಬಾರ್​ ಅಂಡ್​ ರೆಸ್ಟೋರೆಂಟ್​, ಓಲಾ, ಉಬರ್​ ಸೇರಿ ಅನೇಕ ಉದ್ಯಮಗಳಿಗೆ ನಷ್ಟವಾಗಲಿದೆ ಎಂಬ ವಿರೋಧ ಎಲ್ಲೆಡೆ ವ್ಯಕ್ತವಾಗಿತ್ತು. ಎಂಬ ನೆಪವನ್ನೇ ಮುಂದಿಟ್ಟುಕೊಂಡು ಸಂಜೆವೇಳೆಗೆ ತನ್ನ ನಿರಾರವನ್ನು ಬದಲಾವಣೆ ಮಾಡಿ ಅದರಂತೆ ಎಲ್ಲರೂ ನಡಟೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದೆ.

ಇನ್ನು ಈ ನೈಟ್​ ಕರ್ಫ್ಯೂನಿಂದಾಗಿ ಕ್ರಿಸ್ಮಸ್​ ಮತ್ತು ಹೊಸ ವರ್ಷಾಚರಣೆ ಸಮಯದ ಅಧಿಕ ವಹಿವಾಟಿಗೆ ಹೊಡೆತ ಬೀಳಲಿದೆ. ಎಂಬ ಕಾರಣವನ್ನು ಈ ಕರ್ಫ್ಯೂ ಅವಧಿಯನ್ನು ಒಂದೂವರೆ ಗಂಟೆಗಳ ಕಾಲ ತಡವಾಗಿ ಹೇರಿದೆ. ಇದಕ್ಕೆ ಬಾರ್​ ಅಂಡ್​ ರೆಸ್ಟೋರೆಂಟ್​ ಮಾಲೀಕರು ಸೇರಿ ಹಲವರು ಬೇಡಿಕೆ ಇಟ್ಟಿದ್ದರು ಎಂಬ ಸಬೂಬು ನೀಡಿದೆ.

ಇನ್ನು ಇಂದಿನಿಂದ ಬದಲು ನಾಳೆಯಿಂದ ಅಂದರೆ ಡಿ. 24ರಿಂದ ಜ. 1ರವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10ರ ಬದಲು ರಾತ್ರಿ 11 ರಿಂದ ಬೆಳಗ್ಗೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ತಾವು ಮಧ್ಯಾಹ್ನ ನೀಡಿದ ಹೇಳಿಕೆಯನ್ನೇ ಸಂಜೆ ವೇಳೆಗೆ ಬದಲಿಸಿ ಕೊಟ್ಟಿದ್ದಾರೆ.

ಈ ಕುರಿತು ತಮ್ಮ ಟ್ವೀಟರ್​ನಲ್ಲಿ ಸ್ಪಷ್ಟಪಡಿಸಿರುವ ಸಿಎಂ ಅವರು, ಇದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂವನ್ನು ನಾಳೆಯಿಂದ ಅಂದರೆ ದಿನಾಂಕ 24ರಿಂದ ಜನವರಿ 1ರವರೆಗೆ ಜಾರಿ ಮಾಡಲಾಗಿದೆ. ರಾತ್ರಿ 10ರ ಬದಲಿಗೆ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದಿದ್ದಾರೆ.

ಅಲ್ಲದೇ ಈ ನೈಟ್​ ಕರ್ಫ್ಯೂ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಡಿ. 24ರಂದು ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಕ್ರಮ ವಹಿಸಲಾಗಿದೆ. ಈ ಸಂದರ್ಭದಲ್ಲಿ ಮಿಡ್​ನೈಟ್​ ಮಾಸ್​ಗೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ನೈಟ್​ ಕರ್ಫ್ಯೂ ವೇಳೆ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗೆ ನಿರ್ಬಂಧ ವಿಧಿಸಲಾಗಿದೆ. ಬಸ್‌, ರೈಲು, ವಿಮಾನ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ. ಆಟೋ, ಟ್ಯಾಕ್ಸಿಗಳಿಗೆ ಪಿಕಪ್- ಡ್ರಾಪ್ ಗಳಿಗೆ ಅನುಮತಿ ನೀಡಲಾಗಿದೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ