ರಾಮನಗರ: ಮದುವೆ ಮಾಡಿಕೊಡುವ ವಿಚಾರವಾಗಿ ಮಾತನಾಡಬೇಕು ಬಾ ಎಂದು ಪ್ರೀತಿಸಿದ್ದ ಹುಡುಗಿ ಮನೆಯವರು ಯುವಕನನ್ನು ಕರೆಸಿಕೊಂಡು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕನಕೇನಹಳ್ಳಿ ಬಳಿ ನಡೆದಿದೆ.
ಲಕ್ಷ್ಮೀಪತಿ (24) ಮೃತ ಯುವಕ. ನೆಲಮಂಗಲ ತಾಲೂಕಿನ ಬಸವನಹಳ್ಳಿ ನಿವಾಸಿಯಾದ ಲಕ್ಷ್ಮೀಪತಿ ಹಾಗೂ ಅಂಬ್ರಿನಾ ಇಬ್ಬರೂ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ಜೀವ ಎರಡು ದೇಹದಂತಿತ್ತು ಇವರ ಪ್ರೀತಿ. ಹೀಗಾಗಿ ಇಸ್ಲಾಂ ಧರ್ಮದ ರೀತಿಯಲ್ಲಿ ಮದುವೆ ಮಾಡುವ ಸಲುವಾಗಿ ಮಾತುಕತೆ ವಿಚಾರವಾಗಿ ಕರೆಸಿ ಯುವಕನನ್ನು ಹತ್ಯೆ ಮಾಡಲಾಗಿದೆ.
ಅನ್ಯ ಧರ್ಮಿಯ ಎಂಬ ಕಾರಣಕ್ಕೆ ಕುತ್ತಿಗೆಗೆ ಬೆಲ್ಟ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅಂಬ್ರಿನಾ ಅಪ್ಪ ನಜೀಮುದ್ದೀನ್, ತಮ್ಮ ಸಿಕಂದರ್ ಸೇರಿದಂತೆ ನಾಲ್ವರ ವಿರುದ್ಧ ಲಕ್ಷ್ಮೀಪತಿ ಕೊಲೆ ಆರೋಪ ಕೇಳಿ ಬಂದಿದ್ದು, ನಜೀಮುದ್ದೀನ್, ಸಿಕಂದರ್ನನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಮತ್ತಿಬ್ಬರ ಬಂಧನಕ್ಕಾಗಿ ಕುದೂರು ಪೊಲೀಸರು ಬಲೆ ಬೀಸಿದ್ದಾರೆ.